ನವರಾತ್ರಿ, ದಸರಾ ಆಚರಣೆ ಹೇಗೆ.? ಒಂದಿಷ್ಟು ವಿಚಾರ
ದಸರಾ ಬಂತಮ್ಮ ದಸರಾ..ಏನಿದು ದಸರಾ..?
ನವರಾತ್ರಿ ದಸರಾ…ಹಬ್ಬ ಎಂದರೆ ವಿಧಿವತ್ತಾದ ದೈವಿ ಸಂಪ್ರದಾಯಿಕ ದೇವಿ ಪೂಜೆ ದೇವಿ ಪಾರಾಯಣ ಭಕ್ತಿಪೂರ್ವಕ 9 ದಿವಸಗಳ ಪೂಜಾ ವಿಧಿವಿಧಾನ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣ..ಮತ್ತು ಹಲವಡೆ ಜೈನ ಸಮುದಾಯದ ವಿಶಿಷ್ಠ ಆಚರಣೆ, ದಾಂಡಿಯಾ ನೃತ್ಯ ಹತ್ತು ಹಲವು ರೂಪ ಬಗೆ ಬಗೆ ಆಚರಣೆ ರಂಗುರಂಗಿನ ಸಾಂಸಕೃತಿಕ ಕಾರ್ಯಕ್ರಮ, ಸಭೆ ಸಮಾರಂಭದೊಂದಿಗೆ ಧಾರ್ಮಿಕ ಆಚರಣೆ ಜೊತೆಗೆ ಸಾಂಸ್ಕೃತಿಕ ಲೋಕವೇ ನಮ್ಮುಂದೆ ಅನಾವರಣವಾಗುತ್ತದೆ..ಇದು ಸದ್ಯ ದಸರಾದಲ್ಲಿ ಕಂಡು ಬರಲಿರುವದು..
ದಸರಾ ಹತ್ತು ದಿನ ಸಾಂಸ್ಕೃತಿಕ ಉತ್ಸವ..ನಿತ್ಯ ದೇವಿ ಪೂಜೆಯೊಂದಿಗೆ ಉತ್ಸಾಹ ಪೂರಿತ ಸಭೆ ಸಮಾರಂಭಗಳಲ್ಲಿ ನಾವೆಲ್ಲ ಪಾಲ್ಗೊಳ್ಳುವ ಹಬ್ಬ ಈ ಹಬ್ಬ ಎಲ್ಲರಿಗೂ ಇಷ್ಟವಾದದು..ಸವಿ ನೆನಪುಗಳನ್ನು ತರುವಂಥ ಹಬ್ಬವು ಹೌದು..
ದೇವಿಯ ಆರಾಧನೆಗೆ ಈ ಹಬ್ಬ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ದಸರಾ ಆಚರಿಸುತ್ತಾರೆ. ಅಂಭಾಭವಾನಿಯನ್ನು ಆರಾಧಿಸುವ ಮನೆಗಳಲ್ಲಿ ಘಟ ಸ್ಥಾಪನೆ ಮಾಡುತ್ವಿತಾರೆ. ಒಂದು ಪಾತ್ರೆಯಲ್ಲಿ ಅಥವಾ ಮಣ್ಣಿನ ಕುಡಿಕೆಯಲ್ಲಿ ಹದವಾದ ಮಣ್ನನ್ನು ಹಾಕಿ ಅದರಲ್ಲಿ ದವಸ ಧಾನ್ಯಗಳನ್ನು ಬಿತ್ತುತ್ತಾರೆ. ಧಾನ್ಯಗಳು ಮೊಳಕೆ ಒಡೆದು ಸಸಿಗಳಾಗಿ ಬೆಳೆಯುತ್ತವೆ. ಅದಕ್ಕೆ ಘಟ ಸ್ಥಾಪನೆ ಎನ್ನಲಾಗುತ್ತದೆ. ಅದರಲ್ಲಿಯೇ ದೇವಿಯನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿ ಪುಗಿದ ಮೇಲೆ ಅದನ್ನು ನೀರಿಗೆ ಹರಿಬಿಟ್ಟು ಬರಲಾಗುತ್ತದೆ. ಈ ರೀತಿಯಾಗಿ ದೇವಿಯನ್ನು ಪ್ರತಿಷ್ಠಾಪಿಸಿ 9 ದಿನಗಳಕಾಲ ವಿವಿಧ ಖಾದ್ಯದ ಸಿಹಿ ತಿಂಡಿಯ ನೈವೇದ್ಯ ಸಮರ್ಪಿಸಿ ಪೂಜಿಸಲಾಗುತ್ತದೆ.
ಸಾರ್ವಜನಿಕವಾಗಿ ನವರಾತ್ರಿ ಉತ್ಸವ, ನಾಡ ಹಬ್ಬವೆಂದು ದೇವಿಯನ್ನು ಪ್ರತಿಷ್ಠಾಪಿಸಿ ಸಾಮೂಹಿಕ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಇದೇ ಹಬ್ಬವನ್ನು ದುರ್ಗಾ ಪೂಜೆ ಎಂದು ಆಚರಿಸಲಾಗುತ್ತಿದೆ. ವಿಜಯ ದಶಮಿ ಎಂದು ಕೂಡ ಆಚರಣೆಗೆ ಬಂದಿದೆ.
ವಿಜಯದಶಮಿ ಎಂದರೆ ಯುದ್ಧದಲ್ಲಿ ಜಯ ಗಳಿಸಿದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತಿದೆ ಎಂಬ ಇತಿಹಾಸವು ಇದ್ದಕ್ಕಿದೆ. ಅದಕ್ಕೆ ವಿಜಯದಶಮಿ ದಿನ ವೆಂದು ಆಚರಣೆಗೆ ಬಂದಿದೆ.
ಅಲ್ಲದೆ ಮೈಸೂರಿನ ವಿಜಯದಶಮಿಗೆ ವಿಶೇಷ ಪಾರಂಪರಿಕೆ ಇತಿಹಾಸವಿದೆ. ಮೈಸೂರಿನ ಪ್ರಜೆಗಳು ಮಹಿಷಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಪಖಗಾಗಿದ್ದರೂ..ದೇವರಿಂದ ಮಹೋನ್ನತ ವರವನ್ನು ಪಡೆದಿದ್ದರಿಂದ ಗರ್ವದಿಂದ ಎಲ್ಲರಿಗೂ ಉಪದ್ರವ ನೀಡಲು ಶುರು ಮಾಡಿದ್ದನಂತೆ. ಆಗ ಎಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಮಹಿಷಾಶೂರನ ಉಪಟಳದಿಂದ ಪಾರು ಮಾಡುವಂತೆ ಬೇಡಿಕೆಕೊಂಡರಂತೆ.
ಆಗ ಚಾಮುಂಡೇಶ್ವರ ಅವತಾರಿ ಈ ಮಹಿಷಾಸುರನನ್ನು ಕೊಲ್ಲುವ ಮೂಲಕ ಜನರ ರಕ್ಷಣೆ ಮಾಡಿದ್ದಳು ಎಂಬ ಪ್ರತೀತಿ ಇದೆ. ಹೀಗಾಗಿ ಮೈಸೂರಿನಲ್ಲಿ ಚಾಮುಂಡಿ ದೇವಿ ಆಚರಣೆ ವಿಜಯದಶಮಿ ದಿನದಂದು ಮಾಡಲಾಗುತ್ತಿದೆ ಎನ್ನಲಾಗಿದೆ.
ರಾವಣನನ್ನು ಗೆದ್ದ ದಿನವೂ ಹೌದು.. ಚಾಂದ್ರಮಾನ ರೀತಿಯಲ್ಲಿ ಹೇಳುವದಾದರೆ, ಶರದೃತುವಿನ, ಅಶ್ವಯುಜ ಮಾಸ, ಶುಕ್ಲಪಕ್ಷದ ಹತ್ತನೇಯ ದಿನ ಮುಂಚೆ ಒಂಬತ್ತು ದಿನಗಳ ಕಾಲ ಶ್ರೀರಾಮನ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ ಕೊನೆಯಲ್ಲಿ ಹತ್ತನೇಯ ದಿನ ದಶಕಂಠ ರಾವಣ ಹತ್ತು ತಲೆಯ ರಾವಣನನ್ನು ದಶಹರ ಮಾಡಿದ ದಿನ ಅವನ್ನು ಸಂಹರಿಸಿದ ದಿನವೇ ವಿಜಯದಶಮಿ ಎಂದು ಸಹ ಹಲವಡೆ ಆಚರಣೆಗೆ ಬಂದಿದೆ.
ಮತ್ತೊಂದು ಪ್ರಮುಖ ವಿಷಯ ಈ ವಿಜಯದಶಮಿಯನ್ನು ವಿಜಯನಗರ ಸಾಮ್ರಾಜ್ಯ ಅರಸು ಆಚರಣೆಗೆ ತಂದಿದ್ದರು. ಆದರೆ ಕ್ರಿ.ಶ.1565 ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಅಂತ್ಯಕಂಡ ಮೇಲೆ 1610 ರಲ್ಲಿ ಇದನ್ನೇ ಮೈಸೂರ ಒಡೆಯರು ಮುಂದುವರೆಸಿಕೊಂಡು ಬಂದರು ಎನ್ನಲಾಗಿದೆ. ಇದುವೇ ಮೈಸೂರ ದಸರಾ ವಿಜೃಂಬಣೆಯಾಗಿ ಇಂದಿಗೂ ನಡೆಯುತ್ತಿದೆ.
–ಮಲ್ಲಕಾರ್ಜುನ ಮುದ್ನೂರ.