ಪ್ರಮುಖ ಸುದ್ದಿ
ಜಿಲ್ಲಾಡಳಿತ ಭವನ ಸಿಬ್ಬಂದಿಗಳಿಗೆ ವೈರಸ್ ಅಟ್ಯಾಕ್.!
ಜಿಲ್ಲಾಡಳಿತ ಭವನ ಸಿಬ್ಬಂದಿಗಳಿಗೆ ವೈರಸ್ ಸೋಂಕು.!
ಯಾದಗಿರಿ; ಇಲ್ಲಿನ ಜಿಲ್ಲಾಡಳಿತ ಭವನದ ೨೦ ಜನ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಪಾಸಿಟಿವ್ ಹರಡಿರುವ ಸಾಧ್ಯತೆ ಹಿನ್ನೆಲೆ ಉನ್ನತ ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ.
ಶುಕ್ರವಾರ ಬೆಳಿಗ್ಗೆಯಿಂದಲೇ ಜಿಲ್ಲಾಡಳಿತ ಭವನದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಭವನದ ಎಲ್ಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿದರು.
ಇಂದು ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರ ಪ್ರವೇಶ ಸಹ ನಿಷೇಧಿಸಲಾಗಿದೆ. ಉದ್ಯಾನ ವನಗಳಿಗೂ ಕೂಡ ರಾಸಾಯನಿಕ ದ್ರವ ಸಿಂಪಡನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಪೌರಾಯುಕ್ತ ಬಕ್ಕಪ್ಪ, ಪರಿಸರ ಅಭಿಯಂತರ ಸಂಗಮೇಶ, ಆರೋಗ್ಯ ನಿರೀಕ್ಷಕಿ ಶರಣಮ್ಮ ಸೇರಿದಂತೆ ಇತರರು ಇದ್ದರು.