ಹಿರಿಯ ಜೀವಿ ನಾಗಪ್ಪ ಬುಕಿಸ್ಟಗಾರ ನಿಧನ (73)
ಬುಕಿಸ್ಟಗಾರ ಫ್ಯಾಮಿಲಿಯ ಹಿರಿಯ ನಾಗಪ್ಪ ಬುಕಿಸ್ಟಗಾರ ನಿಧನ
ಶಹಾಪುರಃ ವೀರಶೈವ ಸಮಾಜದ ಹಿರಿಯ ಜೀವಿ ನಾಗಪ್ಪ ತಂದೆ ಅಮರಪ್ಪ ಬುಕಿಸ್ಟಗಾರ (74) ನ.29 ರಂದು ಸಂಜೆ 7 ಗಂಟೆ ಸುಮಾರಿಗೆ ದೇಹವನ್ನು ತ್ಯೇಜಿಸಿದರು ಎಂದು ತಿಳಿಸಲು ವಿಷಾಧಿಸುತ್ತೇವೆ.
ನಗರದಲ್ಲಿ ಹಲವಾರು ದೊಡ್ಡ ಕುಟುಂಬಗಳಿದ್ದು, ಅದರಲ್ಲಿ ಬುಕಿಸ್ಟಗಾರ ಫ್ಯಾಮಿಲಿಯು ಒಂದು. ಈ ಫ್ಯಾಮಿಲಿಯ ಹಿರಿಯ, ಕಂದಾಯ ಇಲಾಖೆಯಲ್ಲಿ ಉಪ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ ತುಂಬು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು, ಆಕಸ್ಮಿಕವಾಗಿ ವಯೋಸಹಜ ಅನಾರೋಗ್ಯ ಇವರನ್ನು ಇಹಲೋಕಕ್ಕೆ ಕರೆದೊಯ್ದಿದೆ.
ನಾಗಪ್ಪ ಬುಕಿಸ್ಟಗಾರ ಅವರು ನಿವೃತ್ತಿ ಹೊಂದಿದ್ದರೂ ಹಲವು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಕಿರಿಯರಿಗೆ, ತಮ್ಮ ಫ್ಯಾಮಿಲಿಯವರಿಗೆ ಅಲ್ಲದೆ ಸಮಾಜದ ಹಿತ ಬಯಸಿ ಬಂದವರಿಗೆ ಉತ್ತಮ ಸಲಹೆ ಮಾರ್ಗದರ್ಶನ ಮಾಡುತ್ತಿದ್ದರು.
ಇಂತಹ ಹಿರಿಯ ಜೀವಿ ಕಳೆದುಕೊಂಡ ಬುಕಿಸ್ಟಗಾರ ಫ್ಯಾಮಿಲಿ ಹಾಗೂ ವೀರಶೈವ ಸಮಾಜಕ್ಕೆ ನಷ್ಟವಾಗಿದೆ ಎಂದರೆ ತಪ್ಪಿಲ್ಲ.
ಇವರು ಪತ್ನಿ, 4 ಗಂಡು, ಓರ್ವ ಹೆಣ್ಣು ಮಗು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಃ ಗುರುವಾರ ನ.30 ರಂದು ಸಂಜೆ 4 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.