ದಿನಕ್ಕೊಂದು ಕಥೆ
ದೇವನಿರುವನೆಲ್ಲಿ.?
ಒಮ್ಮೆ ಒಬ್ಬ ವಿದ್ಯಾರ್ಥಿ ವಿವೇಕಾನಂದರನ್ನು ತಾವು ಯಾವಾಗಲೂ ನಾರಾಯಣ, ನಾರಾಯಣ ಎನ್ನುತ್ತೀರಿ. ನಮಗೆ ಯಾವಾಗಲೂ ದೇವರ ಬಗ್ಗೆಯೇ ಹೇಳುತ್ತಿರುತ್ತೀರಿ. ಅವನು ಇರುವುದಾದರೆ ಅವನೇಕೆ ನಮಗೆ ಕಾಣುವುದಿಲ್ಲ. ನಾವು ನೋಡಲಾಗುವುದಿಲ್ಲ. ನೋಡಲಾಗದವನನ್ನು ಇದ್ದಾನೆಂದು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ.
ಅದಕ್ಕೆ ವಿವೇಕಾನಂದರು ಅವನನ್ನು ಹೊರಗೆ ಕರೆದುಕೊಂಡು ಬಂದು ತಲೆಯೆತ್ತಿ ಆಕಾಶದಲ್ಲಿರುವ ಸೂರ್ಯನನ್ನು ನೋಡು ಎಂದರು. ಆತ ತಲೆಯೆತ್ತಿ ನೋಡಿದ. ತಕ್ಷಣ ತಲೆ ಕೆಳಗೆ ಮಾಡಿ ಮಧ್ಯಾಹ್ನದ ಹೊತ್ತು ಸೂರ್ಯನನ್ನು ನೋಡು ಎಂದರು. ಆತ ತಲೆಯೆತ್ತಿ ನೋಡದವನು ತಕ್ಷಣ ತಲೆ ಕೆಳಗೆ ಮಾಡಿ ಮಧ್ಯಾಹ್ನದ ಹೊತ್ತು ಸೂರ್ಯನನ್ನು ನೋಡಲು ಸಾಧ್ಯವಿಲ್ಲ ಗುರುಗಳೇ ಎಂದ.
ಆಗ ಸ್ವಾಮೀಜಿಯವರು ಈ ಸೂರ್ಯನಾರಾಯಣ, ಆ ನಾರಾಯಣನ ಒಂದು ಅಂಶ ಮಾತ್ರ. ಇವನನ್ನು ನೋಡಲು ಸಾಧ್ಯವಾಗದಿದ್ದರೆ ನೀನು ದೇವರನ್ನು ನೋಡಲು ಹೇಗೆ ಸಾಧ್ಯ ಎಂದಾಗ ದೇವರ ಇರುವಿಕೆಯನ್ನು ಅರ್ಥ ಮಾಡಿಕೊಂಡು ದೇವರಿಲ್ಲದೆ ಈ ಸೃಷ್ಟಿಯಿಲ್ಲ ಎಂಬ ನಂಬಿಕೆ ಅವನಲ್ಲಿ ಉಂಟಾಯಿತು.
ಪ್ರಕೃತಿ, ಮರ, ಹೂ, ಹಣ್ಣು ಹಕ್ಕಿಗಳ ಹಾಡಿನ ಮಾಧುರ್ಯದಲ್ಲಿ ದೇವರು ಕಾಣಿಸುತ್ತಾನೆ. ಆತ ಸರ್ವತೋಮುಖ, ಸರ್ವವ್ಯಾಪಕ, ಅಗೋಚರ ಶಕ್ತಿಯ ಬೆಳಕಾಗಿದ್ದಾನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದಾಗ ಅವನಿಗೆ ಜ್ಞಾನೋದಯವಾಯಿತು. ಆಗ, ನನ್ನ ಕಣ್ತೆರಿಸಿದ ನೀವೇ ನನಗೆ ದೇವರೆಂದು, ವಿವೇಕಾನಂದರ ಆಪ್ತ ಶಿಷ್ಯನಾಗುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.