ಅನ್ನ, ಆರೋಗ್ಯ, ವಿದ್ಯಾ ದಾನಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ವಿನಯವಾಣಿ ಶುಭಾರೈಕೆ
ವಿವಿ ಡೆಸ್ಕ್ಃ ದೇಶ ವಿದೇಶದಲ್ಲೂ ಪ್ರಸಿದ್ಧ ಪಡೆದ ಸುಕ್ಷೇತ್ರ ನಮ್ಮ ರಾಜ್ಯದ ಮಲೆನಾಡು ಭಾಗದಲ್ಲಿ ಬರುವ ‘ಧರ್ಮಸ್ಥಳ’ ಈ ಹೆಸರೇ ಒಂದು ರೋಮಾಂಚನ ಇಲ್ಲಿ ನೆಲೆಸಿರುವ ಶ್ರೀಮಂಜುನಾಥ ಸ್ವಾಮೀ ತನ್ನ ನಂಬಿ ಬಂದ ಅಪಾರ ಅಸಂಖ್ಯಾತ ಭಕ್ತರಿಗೆ ವರ ನೀಡುವ ಕಾಮಧೇನು.
ಅದರಂತೆ ಈ ಸುಕ್ಷೇತ್ರದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆ ಅವರು ನಡೆದಾಡುವ ದೇವರು, ಭಕ್ತರ ಪಾಲಿನ ಗುರವರ್ಯರು ಆದ ಇವರು ರಾಜ್ಯ ದೇಶದಾದ್ಯಂತ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಮೂಲಕ ಸಹಸ್ರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು, ಲಕ್ಷಾಂತರ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದ್ದು ನಿರಂತರವಾಗಿ ಈ ಕಾರ್ಯಚಟುವಟುಕೆ ಮುಂದುವರೆದಿದೆ.
ಜೊತೆಗೆ ನೂರಾರು ಗ್ರಾಮಗಲ್ಲಿ ಕಂಡು ಬರುವ ಸಮಸ್ಯೆಗಳ ಪರಿಹಾರಕ್ಕೆ ಸಂಸ್ಥೆ ಸಹಾಯ ಸಹಕಾರದ ಮೂಲಕ ಜನಹಿತ ಕಾರ್ಯಕೈಗೊಳ್ಳುತ್ತಿದೆ. ಕೆರೆ ಹೂಳೆತ್ತುವ ಮೂಲಕ ನೀರಿನ ಸೌಕರ್ಯ, ರೈತರಿಗೆ ಉತ್ತಮ ಸಸಿಗಳ ವಿತರಣೆ, ಕುಡಿಯುವ ನೀರಿನ ಸೌಕರ್ಯ ಪ್ರಸ್ತುತ ಕೊರೊನಾ ದಿಂದಾಗಿ ಶೈಕ್ಷಣಿಕ ವಾಗಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಗಳನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸುವ ಮೂಲಕ ಶೈಕ್ಷಣಿಕ ವಾಗಿ ಸಹಾಯ ಸಹಕಾರ ನೀಡಿದೆ.
ಅಲ್ಲದೆ ಮುಖ್ಯವಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಅವರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಸಂಘಕ್ಕೆ ಹಣದ ಸಹಾಯ ಸಹಕಾರವು ನೀಡುತ್ತದೆ. ಸಮರ್ಪಕವಾಗಿ ಲೋನ್ ವಹಿವಾಟು ನಡೆಸುತ್ತದೆ. ಇದರಿಂದ ಮಹಿಳಾ ಸಂಘಗಳು ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ.
ಸಾಕಷ್ಟು ರೀತಿಯಲ್ಲಿ ಗ್ರಾಮೀಣಾಭಿವೃದ್ಧಿ ಗೆ ಬೇಕಾದ ಕೆಲಸಕಾರ್ಯಗಳನ್ನು ಮಾಡುತ್ತಿರುವದು ಸಂತಸದ ವಿಚಾರ. ಎಲ್ಲದಕ್ಮೂ ಮೊದಲು ಕಲ್ಯಾಣ ಕರ್ನಾಟಕ ಭಾಗದಲ್ಲೂ ಅವರ ಸೇವಾಕಾರ್ಯ ಕೈಗೊಂಡಿದ್ದಕ್ಕೆ ಈ ಭಾಗದ ಜನರ ಪರವಾಗಿ ಹಾರ್ಧಿಕ ಅಭಿನಂದನೆಗಳನ್ನು ವಿವಿ ತಿಳಿಸುತ್ತದೆ.
ರಾಜ್ಯದ ಬೇರಡೆ ಯೋಜನಾ ಸಂಸ್ಥೆ ಆರಂಭವಾದಾಗ ಕಲ್ಯಾಣ ಕರ್ನಾಟಕ ಭಾಗಕ್ಕೂ ಧರ್ಮಾಧಿಕಾರಿಗಳು ವಿಸ್ತರಿಸಬೇಕೆಂಬ ಬೇಡಿಕೆ ಅಗಾಧವಾಗಿತ್ತು. ಪ್ರಥಮವಾಗಿ ಧರ್ಮಸ್ಥಳ ಯೋಜನಾ ಸಂಸ್ಥೆ ನಮ್ಮೂರಿಗೆ ಕಾಲಿಡುತ್ತಿದ್ದಂತೆ ಸಂಸ್ಥೆ ಯವರನ್ನು ಅಭಿನಂದಿಸಿದ್ದೆ, ಪೂಜಾಕೈಂಕರ್ಯಕ್ಕೆ ನಮ್ಮೆಲ್ಲ ಪತ್ರಕರ್ತರಿಗೆ ಆಹ್ವಾನ ನೀಡಿದ್ದರು.
ಅಂದಿನಿಂದ ಸಂಸ್ಥೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಧರ್ಮಸ್ಥಳ ಸುಕ್ಷೇತ್ರದಲ್ಲಿ ಅನ್ನ ದಾಸೋಹವಂತೂ ಇಡಿ ದೇಶಕ್ಕೆ ಮಾದರಿ. ಅಲ್ಲದೆ ಸ್ವಚ್ಛತೆ ಬಗ್ಗೆಯೂ ಎಲ್ಲರೂ ಗಮನಿಸುವಂತಹದ್ದು, ಮತ್ತು ಆಯುರ್ವೇದ ಚಿಕಿತ್ಸಾ ಔಷಧಿ ತಯಾರಿಕೆಗೂ ಸಂಸ್ಥೆ ಕೆಲಸ ಮಾಡುತ್ತಿರುವದು ಶ್ಲಾಘನೀಯ.
ರಾಜ್ಯದ ಹಲವಾರು ದೇವಾಲಯಗಳನ್ನು ಪುನರುಜ್ಜೀವನ ಗೊಳಿಸಲು ಧನ ಸಹಾಯ ನೀಡುತ್ತಿರುವದು ಧಾರ್ಮಿಕವಾಗಿ ಜನರ ಬದುಕು ಶುಚಿಗೊಳಿಸುವ ಕಾಯಕವಂತು ಅದ್ಭುತ. ಸರ್ಕಾರ ಮಾಡದಂತ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಮಾಡುತ್ತಿರುವದು ಶ್ಲಾಘನೀಯ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೆ ಹೇಳಿದ್ದಾರೆ.
ಈ ಎಲ್ಲಾ ಕಾರ್ಯಕ್ಷೇತ್ರಗಳು ಯಶಸ್ವಿಯಾಗಿ ಮುನ್ನಡೆಯಲು ಮಾರ್ಗದರ್ಶಿ, ಧರ್ಮದರ್ಶಿ ಶ್ರೀವೀರೇಂದ್ರ ಹೆಗಡೆ ಅವರೇ ಕಾರಣ ಇಂದು ಅವರ ಜನ್ಮದಿನ ಹೀಗಾಗಿ ಅವರ ಕಾರ್ಯಕ್ಷಮತೆ, ಪುಣ್ಯಾಕಾರ್ಯ ಜನಹಿತ ಕಾರ್ಯ ಯೋಜನೆಗಳು ಹೀಗೆ ಮುಂದುವರೆಯಲಿ ಶ್ರೀಕ್ಷೇತ್ರದ ಒಡೆಯ ಧರ್ಮದರ್ಶಿ ಹೆಗಡೆ ಅವರಿಗೆ ಆಯುಷ್ಯ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಕಣ್ಣಿಗೆ ಕಾಣುವ ದೇವರಾದ ಹೆಗಡೆಜೀ ಅವರ ಸೇವಾ ಸಾಮಾಜಿಕ ಕಾರ್ಯ ನಿರಂತರವಾಗಿ ಸಾಗಲಿ ಎಂದು ವಿನಯವಾಣಿ ಪ್ರಾರ್ಥಿಸುತ್ತದೆ. ಶುಭ ಕಾಮನೆಗಳು…💐💐🙏
– ಮಲ್ಲಿಕಾರ್ಜುನ ಮುದ್ನೂರ.
ಸಂಪಾದಕರು. ಶಹಾಪುರ. 9448405608.