ಪ್ರಮುಖ ಸುದ್ದಿ
ಹಿರಿಯ ಜೀವಿ ರುಕೀಯಾಬೇಗಂ ಚಾವುಶ್ (105) ನಿಧನ
ನಗರದ ಹಿರಿಯ ಜೀವಿ ರುಕೀಯಾ ಬೇಗಂ ನಿಧನ
ಯಾದಗಿರಿ, ಶಹಾಪುರಃ ಬಸವೇಶ್ವರ ನಗರದ ನಿವಾಸಿ ಪಟ್ಟಣ ಹಿರಿಯ ಜೀವಿ ರುಕಿಯಾಬೇಗಂ ಚಾವುಶ್ (105) ಸೋಮವಾರ ನಿಧನರಾದರು. ಮೃತರು ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಕುಟುಂಬಸ್ಥರ ತಿಳಿಸಿದಂತೆ ರುಕೀಯಾಬೇಗಂ ಅವರಿಗೆ 105 ವಯಸ್ಸಾಗಿತ್ತು. ಆದಾಗ್ಯು ಕೊನೆ ಉಸಿರಿರುವ ತನಕ ತನ್ನ ಕೆಲಸ ತಾನೇ ಮಾಡಿಕೊಂಡಿದ್ದ ಬೇಗಂ ಇಂದು ಬೆಳಗ್ಗೆ ಪ್ರಾಣ ಪಕ್ಷಿ ಹಾರಿ ಹೋಗಿರವದನ್ನು ತಿಳಿದ ಸಂಬಂಧಿಕರ ಮನೆಯಲ್ಲಿ ದುಖಃ ಮಡುಗಟ್ಟಿತ್ತು. ಆಕೆಯ ಮಕ್ಕಳಿಗೆ ತೀರಾ ವಯಸ್ಸಾಗಿತ್ತು, ಕನಿಷ್ಟ 70-80 ವರ್ಷದ ಮಕ್ಕಳಿಗೆ ವಯಸ್ಸಾಗಿದೆ ಎಂದು ಬಡಾವಣೆಯ ನಾಗರಿಕರು ತಿಳಿಸಿದ್ದಾರೆ.
ಮೃತಳ ಅಂತ್ಯಕ್ರೀಯೆ ನಗರದ ಆಸರ್ ಮೋಹಲ್ಲಾದ ಸಮಾಜದ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. ಅಪಾರ ಬಂಧು ವರ್ಗ ಸೇರಿದಂತೆ ನಾಗರಿಕರು ಭಾಗವಹಿಸಿ ಅಂತಿಮ ದರ್ಶನ ಪಡೆದರು.
———————–