ನೀವು ಮಾಡಿದ ಕರ್ಮದ ಪ್ರತಿಫಲ ಮುಂದೆ ಪಡೆಯಲಿದ್ದೀರಿ..ಈ ಕಥೆ ಓದಿ
ದೇವರ ಮೂರ್ತಿ ಹಾಗೂ ಮೆಟ್ಟಿಲು
ಅದೊಂದು ದಿನ ಆ ಮೆಟ್ಟಿಲು ದೇವರ ಮೂರ್ತಿಯನ್ನು ಕುರಿತು ಹೇಳಿತು, ಅಯ್ಯ ನಾವಿಬ್ಬರು ಒಂದೇ ಶಿಲೆಯ ಭಾಗಗಳು ಆದರೂ ನಿನ್ನನ್ನು ಜನ ಪೂಜಿಸುತ್ತಾರೆ, ನನ್ನನ್ನು ತುಳಿಯುತ್ತಾರೆ ಯಾಕೆ ಎಂದಿತಂತೆ ದುಃಖದಿಂದ….
ಅದಕ್ಕೆ ಮೂರ್ತಿ ಕಲ್ಲು ಹೇಳಿತ್ತಂತೆ,
200 ವರ್ಷದ ಹಿಂದಿನ ಆ ದಿನಗಳನ್ನು ಒಮ್ಮೆ
ನೆನಪಿಸಿಕೋ,
ಅಂದು 2 ಹಕ್ಕಿಗಳು ನಮ್ಮ ಬಂಡೆಯ ಮೇಲೆ ಕೂತು ಪ್ರಕೃತಿ ಸೌಂದರ್ಯ ಸವಿಯುತಿದ್ದವು, ನೀನು ನಿನ್ನ ಮೇಲಿದ್ದ ಒಂದು ದೊಡ್ಡ ಕಲ್ಲನ್ನು ಆ ಪುಟ್ಟ ಪಕ್ಷಿ ಮೇಲೆ ಹಾಕಿ ಅದರ ಸಾವಿಗೆ ಕಾರಣನಾಗಿದ್ದೆ…
ನಾನು ನನ್ನ ಮೇಲೆ ಕೂತಿದ್ದ ಹಕ್ಕಿಗೆ ತಂಪಾದ ಗಾಳಿ, ಹಾಗೆ ನನ್ನ ಬಳಿಯಲ್ಲೇ ಹರಿಯುತಿದ್ದ ತೊರೆಯ ನೀರು ತೊಟ್ಟಿಕ್ಕುವಂತೆ ಮಾಡುತಿದ್ದೆ ..
ಹಕ್ಕಿ ಖುಷಿ ಇಂದ ಮತ್ತಷ್ಟು ಹೊತ್ತು ಅಲ್ಲಿ ಕೂತು ಹೋಗುತಿತ್ತು …
ಆಗ ನೀನೊಮ್ಮೆ ನನ್ನಲ್ಲಿ ಕೇಳಿದ್ದೆ ನೆನಪಿದೆಯಾ ..
“ನಿನಗೇನು ಹುಚ್ಚ…?
ಆ ಹಕ್ಕಿಗೆ ಗಾಳಿ ನೀರು ಕೊಡುತ್ತಿ, ಅದು ನಿನ್ನ ತಲೆಗೆ ಹಿಕ್ಕೆ ಹಾಕಿ ಹೋಗಲಿದೆ ನಿನಗೆ ಬೇರೆ ಕೆಲಸ ಇಲ್ಲ ಎಂದಿದ್ದೆ”..
ಅದಕ್ಕೆ ನಾನಂದು ಹೇಳಿದ್ದೆ “ನಾವು ಕೆಟ್ಟದ್ದನ್ನು ಕನಸು ಮನಸಲ್ಲೂ ಎಣಿಸಬಾರದು ಇನ್ನೊಬ್ಬರ ಒಳಿತಿಗಾಗಿ ನಾವಿರಬೇಕು, ಮುಂದೆ ಮೇಲೊಬ್ಬ ನೋಡುತಿರುತ್ತಾನೆ ನೀನು ಇಂದು ಮಾಡಿದ ಕರ್ಮದ ಪ್ರತಿಫಲ ಖಂಡಿತ ಮುಂದೊಂದು ದಿನ ನಿನಗೆ ಸಿಗಲಿದೆ ಅಂದಿದ್ದೆ,
ನೋಡು, ಇದೇ ಅದರ ಪ್ರತಿಫಲ ಇಂದು ನೀನು ನಿನ್ನ ಪಾಪ ಕೆಲಸಕ್ಕೆ ಪ್ರತಿಫಲವಾಗಿ ತುಳಿಸಿಕೊಳ್ಳುವ ಮೆಟ್ಟಲಾದಿ …
ನಾನು ಪೂಜಿಸುವ ಮೂರ್ತಿಯಾದೆ, ಎಂದಾಗ ಬಾಯಿ ಮುಚ್ಚಿಕೊಳ್ಳುವ ಸರದಿ ಮೆಟ್ಟಿಲಿನದ್ದಾಗಿತ್ತು…..
ನಮ್ಮಲ್ಲೂ ಇದ್ದಾರೆ ಇನ್ನೊಬ್ಬರಿಗೆ ತೊಂದರೆ ಕೊಡುವುದನ್ನೇ ವೃತ್ತಿಯಾಗಿಸಿ ಕೊಂಡವರು, ಮತ್ತೆ
ಕೆಲವರು ಒಳ್ಳೆಯದನ್ನೇ ಬಯಸುವ ಪುಣ್ಯಾತ್ಮರು, ಮುಂದಿನ ಜನ್ಮದಲ್ಲಿ ಖಂಡಿತ ಒಬ್ಬರು ಮೆಟ್ಟಲಾದರೆ ಇನ್ನೊಬ್ಬರು ಮೂರ್ತಿ ಯಾಗಬಹುದು ನೋಡುತ್ತಿರಿ …
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882