ಕಥೆ

ನನ್ನ ಹತ್ತಿರ ಭಯಂಕರ ಆಯುಧಗಳಿವೆ..!

ನನ್ನ ಹತ್ತಿರ ಭಯಂಕರ ಆಯುಧಗಳಿವೆ..!

ಸಾವರಕರ ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾತಂತ್ರ್ಯ ವೀರ ಸಾವರಕರ ಅವರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, “ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಿಮ್ಮ ಹತ್ತಿರ ಘಾತಕ ಆಯುಧಗಳಿವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ.

ಆದ್ದರಿಂದ ನಿಮ್ಮ ತಪಾಸಣೆಯನ್ನು ಮಾಡುತ್ತೇವೆ” ಎಂದರು ಸರಿ ಆಯಿತು ಅಂತ ಸಾವರಕರರು ನಿಂತರು, ಗುಪ್ತಚರರು ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ.

ಆಗ ಗುಪ್ತಚರದ ಪ್ರಮುಖ ಅಧಿಕಾರಿಗಳು ಕೇಳಿದರು, “ಕ್ಷಮಿಸಿರಿ ತಪ್ಪು ಸುದ್ದಿಯಿಂದಾಗಿ ನಿಮಗ ತೊಂದರೆ ನೀಡಿದೆವು”. ಆಗ ವೀರ ಸಾವರಕರ ಅವರು ಹೇಳಿದರು, “ನಿಮಗೆ ಸಿಕ್ಕ ಸುಳಿವು ತಪ್ಪಲ್ಲ. ನನ್ನ ಬಳಿ ಘಾತಕ ಆಯುಧವಿದೆ”. ಜೇಬಿನಲ್ಲಿದ್ದ ಪೆನ್ನನ್ನು ತೋರಿಸಿ ಹೇಳಿದರು,

“ನೋಡಿ ಇದೇ ಆ ಆಯುಧ, ಇದರಿಂದ ಹೊರ ಬರುವ ಒಂದೊಂದು ಶಬ್ಧ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ. ಈ ಶಬ್ಧಗಳಿಂದ ದೇಶಭಕ್ತರ ರಕ್ತ ಕುದಿಯುತ್ತದೆ ಮತ್ತು ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಲು ಸಿದ್ಧರಾಗುತ್ತಾರೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button