ಕಥೆ

ವ್ಯವಹಾರದಲ್ಲಿ ಪ್ರಾಮಾಣಿಕತೆ‌ ಇರಲಿ ಈ ಕಥೆ ಓದಿ

ದಿನಕ್ಕೊಂದು ಕಥೆ

ಜಿಲ್ಲಾಧಿಕಾರಿ­ಯಾದ ಗುಂಡಣ್ಣನ ಕಡೆಗೆ ದೂರು ಒಯ್ದ. ಗುಂಡಣ್ಣ ಇಬ್ಬರನ್ನೂ ಕರೆಸಿ ಮಾತನಾಡಿದಾಗ ಪಂಡಿತನ ಮೋಸ ತಿಳಿಯಿತು. ದಿನಕರ ಪಂಡಿತ ವಾದ ಮಾಡಿದ, ‘ಸ್ಪಷ್ಟವಾಗಿ ಕಣ್ಣು ಕಾಣಿಸಿದರೆ ಪೂರ್ತಿ ಹಣ ಕೊಡುವ ಒಪ್ಪಂದ­ವಾಗಿದೆ. ಈಗ ರಾಜಪ್ಪನವರಿಗೆ ಕಣ್ಣು ಚೆನ್ನಾಗಿ ಕಾಣುತ್ತಿದೆ. ಆದ್ದರಿಂದ ನನ್ನ ಹಣ ನನಗೆ ಬರಬೇಕು.

ದಯವಿಟ್ಟು ಕೊಡಿಸಿ ಕೊಡಿ’. ಗುಂಡಣ್ಣ ರಾಜಪ್ಪನನ್ನು ಕೇಳಿದ, ‘ನಿಮಗೆ ಕಣ್ಣು ಚೆನ್ನಾಗಿ ಕಾಣುತ್ತಿದೆಯೇ?.’ ‘ಹೌದು ಸ್ವಾಮಿ, ಕಾಣುತ್ತಿದೆ’. ಎಂದ ರಾಜಪ್ಪ. ದಿನಕರ ಪಂಡಿತ ಜಂಬದಿಂದ ಬೀಗಿದ. ಗುಂಡಣ್ಣ ಮತ್ತೆ ಕೇಳಿದ.

‘ರಾಜಪ್ಪ, ಈಗ ನಿಮ್ಮ ಮನೆಯಲ್ಲಿ ದೇವರ ಮೂರ್ತಿಗಳು, ಆಭರಣಗಳು, ಬೆಲೆಬಾಳುವ ವಸ್ತುಗಳು ಕಾಣುತ್ತಿವೆಯೇ?’. ‘ಇಲ್ಲ ಸ್ವಾಮಿ, ಅವು ಕಳುವಾಗಿವೆ’ ಎಂದ ರಾಜಪ್ಪ. ‘ಅದೆಲ್ಲ ಕಥೆ ಬೇಡ. ಈಗ ವಸ್ತುಗಳು ಕಾಣುತ್ತಿ­ವೆಯೇ?’ ಕೇಳಿದ ಗುಂಡಣ್ಣ.

‘ಇಲ್ಲ ಮಹಾಸ್ವಾಮಿ’ ನುಡಿದ ರಾಜಪ್ಪ. ‘ಹಾಗಾದರೆ ನಿಮ್ಮ ಕಣ್ಣು ಇನ್ನೂ ಸರಿಯಾಗಿಲ್ಲ. ಎಲ್ಲಿಯವರೆಗೆ ನಿಮ್ಮ ಮನೆಯ ಬೆಲೆ ಬಾಳುವ ವಸ್ತುಗಳು ನಿಮಗೆ ಮರಳಿ ಕಾಣುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಕಣ್ಣು ಸರಿ­ಯಾ­ಗಿಲ್ಲ. ಚಿಕಿತ್ಸೆ ವಿಫಲವಾಗಿದೆ.

ಆದ್ದರಿಂದ ನೀವು ಪಂಡಿತರಿಗೆ ಹಣ ನೀಡುವ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ, ನಿಮಗೆ ಗುಣವಾಗುತ್ತದೆಂದು ಹೇಳಿ ಮೋಸ ಮಾಡಿದ್ದರಿಂದ ಅವರಿಗೆ ಮೂರು ವರ್ಷ ಜೈಲಿನ ಶಿಕ್ಷೆ ನೀಡುತ್ತೇನೆ’ ಎಂದ ಗುಂಡಣ್ಣ. ದಿನಕರ ಪಂಡಿತ ಹೌಹಾರಿದ.

ಗುಂಡಣ್ಣನ ಕಾಲು ಹಿಡಿದುಕೊಂಡು ತಪ್ಪೊಪ್ಪಿಕೊಂಡು ಎಲ್ಲ ವಸ್ತುಗಳನ್ನು ಮರಳಿಸಿ ತನ್ನ ಫೀಸು ತೆಗೆದುಕೊಂಡು ಹೋದ. ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಅಪ್ರಾಮಾಣಿಕತೆಯಿಂದ ಸಂಪಾದಿಸಿದಾಗ ಕೆಲದಿನ ಅದು ತುಂಬ ಸಂಭ್ರಮವನ್ನು ತಂದೀತು.

ಮೋಸ ಮಾಡಿ ಸುಲಭವಾಗಿ ಗಳಿಸಿದೆನಲ್ಲ ಎಂಬ ಹೆಮ್ಮೆ ಮೂಡೀತು. ಆದರೆ, ಅದು ಮುಂದೆ ಬಡ್ಡಿಸಹಿತ ನೋವನ್ನು ಕೊಡುವುದು ಖಂಡಿತ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button