ಕಥೆ

ಬ್ಲೆಸ್ಸಿಂಗ್ಸ್ ಕೊಟ್ಟರೆ ದುಡ್ಡು ಡಬಲ್ ಆಗುತ್ತಾ.?

ದಿನಕ್ಕೊಂದು ಕಥೆ

ಬ್ಲೆಸ್ಸಿಂಗ್ಸ್ ಕೊಟ್ಟರೆ ದುಡ್ಡು ಡಬಲ್ ಆಗುತ್ತಾ.?

ವಿಚಿತ್ರ ಎನಿಸಬಹುದಾದ ಘಟನೆಯೊಂದು ಇಲ್ಲಿದೆ. ನನ್ನ ಗೆಳೆಯರಾದ ಎಸ್ವೀ ಅವರು ಹೇಳಿದ ಅವರದ್ದೇ ಬದುಕಿನ ಘಟನೆ. ಆಗ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಓದುತ್ತಿದ್ದರಂತೆ. ಪರೀಕ್ಷೆಗಳು ಹತ್ತಿರ ಬಂದಿದ್ದವು.

ಎಂಬತ್ತು ರುಪಾಯಿ ಪರೀಕ್ಷಾ ಶುಲ್ಕವನ್ನು ಕಟ್ಟಲು ಅಂದೇ ಕೊನೆಯ ದಿನವಾಗಿತ್ತಂತೆ. ಆದರೆ ಅವರ ತಂದೆಯವರಿಂದ ಮನಿಯಾರ್ಡರ್ ಬಂದಿರಲಿಲ್ಲ. ಅದೇ ಚಿಂತೆಯಲ್ಲಿದ್ದಾಗ ಅವರ ಹೆಸರಿಗೆ ಬಂದಿದ್ದ ಒಂದು ಅಂಚೆಯ ಕವರನ್ನು ಯಾರೋ ತಂದುಕೊಟ್ಟರು.

ಎಸ್ವೀರವರು ಕವರ್ ತೆಗೆದು ನೋಡಿದಾಗ ಅದರಲ್ಲಿ ಅವರ ತಾಯಿಯವರು ಬರೆದ ಕಾಗದವಿತ್ತು. ಕಾಗದದಲ್ಲಿ ತಾಯಿಯವರು ‘ನಿಮ್ಮ ತಂದೆಯವರು ನಿನಗೆ ಪರೀಕ್ಷಾ ಶುಲ್ಕ ಕಟ್ಟಲು ಹಣ ಕಳುಹಿಸಬೇಕು.

ಆದರೆ ಹಣ ಹೊಂದಿಕೆಯಾಗುತ್ತಿಲ್ಲ. ಏನು ಮಾಡುವುದೆಂದು ಪೇಚಾಡುತ್ತಿದ್ದರು. ನಾನೀಗ ಅವರಿಗೆ ಗೊತ್ತಾಗದಂತೆ ನೂರು ರುಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಅದನ್ನು ಬಳಸಿಕೋ. ಫೀಸು ಕಟ್ಟಿಕೋ. ಸಾಧ್ಯವಾದರೆ ನೀನೂ ಯಾರಿಗಾದರೂ ಸಹಾಯ ಮಾಡು. ದೇವರು ನಿನಗೂ ಒಳ್ಳೆಯದನ್ನು ಮಾಡುತ್ತಾನೆ’ ಎಂದು ಬರೆದಿದ್ದರು.

ಎಸ್ವೀರವರಿಗೆ ಬಹಳ ಸಂತೋಷವಾಯಿತು. ತಕ್ಷಣ ಹೋಗಿ ಪರೀಕ್ಷಾ ಶುಲ್ಕ ಕಟ್ಟಿದರು. ಇನ್ನೂ ಇಪ್ಪತ್ತು ರುಪಾಯಿ ಮಿಕ್ಕಿತ್ತು. ತಾಯಿಯವರು ಬರೆದಿದ್ದಂತೆ ತಾನೂ ಯಾರಿಗಾದರೂ ಸಹಾಯ ಮಾಡಬೇಕೆಂದು ಯೋಚಿಸುತ್ತಿದ್ದರು.

ಆಗ ಅವರಿಗೆ ಫುಟ್‌ಪಾತಿನಲ್ಲಿದ್ದ ಬೆಂಚಿನ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿ ಕಂಡರು. ಹಳೆಯ ಬಟ್ಟೆಗಳನ್ನು ಧರಿಸಿದ್ದ, ಅಷ್ಟೇನೂ ಅನುಕೂಲಸ್ಥನಂತೆ ಕಾಣಿಸದಿದ್ದ, ಆತ ಯಾವುದೋ ಪುಸ್ತಕವನ್ನು ಗಮನವಿಟ್ಟು ಓದುತ್ತಾ ಕುಳಿತಿದ್ದರು.

ಆತ ಯಾರೋ ಭಿಕ್ಷುಕ ಇರಬಹುದೆಂದು ಅಂದುಕೊಂಡ ಎಸ್ವೀರವರು ಆತನ ಬಳಿ ಹೋಗಿ ಆತನಿಗೆ ಇಪ್ಪತ್ತು ರುಪಾಯಿಗಳನ್ನು ಕೊಟ್ಟರು. ಆತ ಆಶ್ಚರ್ಯದಿಂದ ಇವರನ್ನು ‘ಏಕಿದು ಕೊಡುತ್ತಿದ್ದೀರಿ?’ ಎಂದು ಕೇಳಿದರು. ಎಸ್ವೀರವರು ‘ಬ್ಲೆಸ್ಸಿಂಗ್ಸ್’ ಎಂದಷ್ಟೇ ಹೇಳಿದರು.

ಆತ ಅದನ್ನು ಜೇಬಿಗಿಟ್ಟುಕೊಂಡರು. ಎಸ್ವೀರವರು ತನ್ನ ತಾಯಿ ಹೇಳಿದ ಮಾತನ್ನು ಇಷ್ಟು ಬೇಗ ನಡೆಸಿಕೊಟ್ಟೆ ಎಂಬ ಸಂತಸದಲ್ಲಿ ಹೊರಟರು.ಮರುದಿನ ಎಸ್ವೀರವರು ಅದೇ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಮತ್ತದೇ ವ್ಯಕ್ತಿ ಕಂಡುಬಂದರು.

ಆದರೆ ಇವರನ್ನು ನೋಡಿದ ಆತನೇ ಧಾವಿಸಿ ಬಂದು ಇವರನ್ನು ನಿಲ್ಲಿಸಿದರು. ಇವರ ಕೈಗೆ ಒಂದಷ್ಟು ಹಣವನ್ನು ಕೊಟ್ಟರು. ಎಸ್ವೀರವರು ಆಶ್ಚರ್ಯದಿಂದ ಇದೇನು ಎಂದು ಕೇಳಿದಾಗ ಆತ ‘ನಿನ್ನೆ ನಾನು ಕುದುರೆ ರೇಸಿಗೆ ಹೋಗಲು ತಯಾರಾಗುತ್ತಿದ್ದಾ.

ರೇಸಿನ ಪುಸ್ತಕವನ್ನೇ ಓದುತ್ತಿದ್ದಾ. ಆದರೆ ಯಾವ ಕುದುರೆಯ ಮೇಲೆ ಹಣ ಕಟ್ಟಬೇಕೆಂದು ತೀರ್ಮಾನಿಸಿರಲಿಲ್ಲ. ಅದೇ ಸಮಯಕ್ಕೆ ಅನಿರೀಕ್ಷಿತವಾಗಿ ನೀವು ಬಂದಿರಿ.

ನನಗೆ ಇಪ್ಪತ್ತು ರುಪಾಯಿಗಳನ್ನು ಕೊಟ್ಟು ಬ್ಲೆಸ್ಸಿಂU ಎಂದಷ್ಟೇ ಹೇಳಿ ಹೊರಟು ಹೋದಿರಿ. ನಾನು ರೇಸ್ ಕೋರ್ಸಿಗೆ ಹೋದೆ. ಆಶ್ಚರ್ಯವೆಂದರೆ ಅಲ್ಲಿ ಬ್ಲೆಸ್ಸಿಂU ಎನ್ನುವ ಹೆಸರಿನ ಕುದುರೆಯೊಂದು ಪಂದ್ಯದಲ್ಲಿ ಓಡುತ್ತಿತ್ತು.

ನಾನು ಅದರ ಮೇಲೆ ನಿಮ್ಮ ಇಪ್ಪತ್ತು ರುಪಾಯಿಗಳನ್ನು ಕಟ್ಟಿದೆ. ರೇಸಿನಲ್ಲಿ ಬ್ಲೆಸ್ಸಿಂU ಕುದುರೆಯೇ ಗೆದ್ದಿತು ಮತ್ತು ಅದರಲ್ಲಿ ನನಗೆ ಒಂದು ಸಾವಿರ ರುಪಾಯಿಗಳ ಬಹುಮಾನ ಸಿಕ್ಕಿತು. ಬಹುಮಾನದಲ್ಲಿ ಅರ್ಧ ನನ್ನದು. ಅರ್ಧ ನಿಮಗೆ ಸೇರಬೇಕಾದದ್ದು.

ನಿಮ್ಮ ಪಾಲಿನ ಐನೂರು ರುಪಾಯಿಗಳನ್ನು ನಿಮಗೆ ಕೊಟ್ಟಿದ್ದೇನೆ. ನಿಮಗೆ ತುಂಬಾ ಥ್ಯಾಂ’ ಎಂದು ಹೇಳಿ ಅವಸರ-ಅವಸರವಾಗಿ ಹೊರಟು ಹೋದರು. ಎಸ್ವೀರವರು ಬೆಕ್ಕಸ ಬೆರಗಾಗಿ ಆತ ಹೋದ ಹಾದಿಯನ್ನೇ ನೋಡುತ್ತಾ ನಿಂತರು.

ಅವರ ಕೈಯಲ್ಲಿ ಐನೂರು ರುಪಾಯಿಗಳು ಇದ್ದವು!ಎಸ್ವೀರವರು ಎಷ್ಟೋ ವರ್ಷಗಳ ಹಿಂದಿನ ಈ ಘಟನೆಯನ್ನು ನಾನು ಇಂದೂ ಮರೆತಿಲ್ಲ.

ಆದರೆ ಸಂದರ್ಭ-ಸನ್ನಿವೇಶ ಏನೇ ಇರಲಿ, ನಾವೂ ಯಾರಿಗಾದರೂ ಸಹಾಯ ಮಾಡಿದರೆ ದೇವರು ನಮಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಹಾಯ ಮಾಡುತ್ತಾನೆ ಎಂಬ ಪಾಠವನ್ನು ಮಾತ್ರ ಮರೆತಿಲ್ಲ ಎಂದು ಹೇಳಿದರು.

ಯಾರಿಗೋ ದಾನವಾಗಿ ಕೊಟ್ಟ ಬ್ಲೆಸ್ಸಿಂಗ್ಸ ನಮ್ಮ ಹಣವನ್ನು ಡಬಲ-ಡಬಲ್ ಮಾಡಿಕೊಡುತ್ತದಾ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button