ಕಥೆ

ದಂಪತಿಗಳ ವಿಚಾರ ಮಂಗಳ ಮುಖಿ ಆಶೀರ್ವಾದ ಈ ಅದ್ಭುತ ಕಥೆ ಓದಿ

ದಿನಕ್ಕೊಂದು ಕಥೆ

ಭಿಕ್ಷೆ ಬೇಡಲು ಬಂದ ಮಂಗಳಮುಖಿ ಆ ಮನೆಯಲ್ಲಿ ಕಂಡಿದ್ದು ಏನು ಗೊತ್ತಾ?

ಆಧುನಿಕ ಯುಗದಲ್ಲಿ ದಿನಂಪ್ರತಿ ನಡೆಯುತ್ತಿರುವ ಘಟನೆಗಳೇ ಇವು, ಅಂತಹ ಕಥೆಗಳಲ್ಲಿ ಇದೂ ಕೂಡ ಒಂದು.. ತಪ್ಪದೇ ಪೂರ್ತಿ ಓದಿ..‌

ಜಾಹಿರಾತು

ಒಬ್ಬಳು ಮಂಗಳಮುಖಿ ಭಿಕ್ಷೆ ಬೇಡಲೆಂದು ಶ್ರೀಮಂತ ವ್ಯಕ್ತಿಯ ಮನೆಗೆ ಹೋದಳು.
ಅಲ್ಲಿ ಒಳಗಡೆ ಆಗಷ್ಟೇ ಮದುವೆಯಾದ ದಂಪತಿಗಳಿಬ್ಬರು ಜಗಳವಾಡುತ್ತಿದ್ದರು. ಹೆಂಡತಿ ತನ್ನ ಗಂಡನಿಗೆ ಅತ್ತೆ ಮಾವನವರನ್ನು ಇದೆ ವಾರಾಂತ್ಯದೊಳಗೆ ವೃದ್ದಾಶ್ರಮ ಸೇರಿಸಿ ನನಗೆ ಮುಕ್ತಿ ಕೊಡಿ ಅಂತಾ ಬೇಡಿಕೊಳ್ಳುತ್ತಿದ್ದಾಗ ಗಂಡ ಈ ವಾರಾಂತ್ಯದೊಳಗೆ ಆಗದ ಮಾತು ಆದರೆ, ತಿಂಗಳಾಂತ್ಯದೊಳಗೆ ವೃದ್ದಾಶ್ರಮಕ್ಕೆ ಕಳುಹಿಸುವೆ, ಅನ್ನುತ್ತಾ ಹೆಂಡತಿಯನ್ನ ಪ್ರೀತಿಯಿಂದ ಓಲೈಸುತ್ತಾನೆ….

ಈ ವಾದ ವಿವಾದ ಮುಗಿದಾದ ಮೇಲೆ ಮನೆಗೆ ಬಂದ ಮಂಗಳಮುಖಿಗೆ ಕೈ ತುಂಬಾ ಹಣ ನೀಡುತ್ತಾ ತಮ್ಮ ಅದ್ಭುತ ಜೀವನಕ್ಕೆ ಆಶೀರ್ವಾದ ಮಾಡು ಎಂದು ನಗುನಗುತ್ತಾ ಕೋರಿಕೆಯನ್ನ ಮುಂದಿಡುತ್ತಾರೆ…..

ಆಗ ಆ ಮಂಗಳಮುಖಿ ನಗುತ್ತಾ ಹೇಳುವಳು, ತಂದೆ ತಾಯಿಯನ್ನು ಪ್ರೀತಿಸದ ಜೀವಕ್ಕೆ ಆ ದೇವರು ಸಹ ಆಶೀರ್ವಾದ ನೀಡಲು ಹಿಂಜರಿಯುವನು… ಆದರೂ ಅರ್ಧನಾರೀಶ್ವರನ ಅವತಾರ ತಾಳಿದ ನಾನು ನಿಮಗೆ ಮನಸೋ ಇಚ್ಛೆ ಹರಸುವೆನು, ಎಂದಾಗ ಆ ದಂಪತಿಗಳಿಬ್ಬರು ತಮ್ಮ ಶಿರಭಾಗಿ ಅವಳ ಮುಂದೆ ನಿಲ್ಲುತ್ತಾರೆ….

ಜಾಹಿರಾತು

ಆಗ ಅವಳು ಹೇಳಿದ ಮಾತು ಏನು ಗೊತ್ತಾ……?
ಮುಂದಿನ ಜನ್ಮದಲ್ಲಿ ನನಗಿಂತಲೂ ಸುಂದರವಾದ ಮಂಗಳಮುಖಿ ಆಗಿ ಇದೆ ಭೂಮಿಯಲ್ಲಿ ಜನಿಸಿರಿ, ಆಗ ನಿಮ್ಮವರನ್ನು ದೂರ ಸರಿಸೋ ಪ್ರಮೇಯವೇ ಬರೋದಿಲ್ಲ.
ಪ್ರಪಂಚವೇ ನಿಮ್ಮನ್ನ ದೂರ ಸರಿಸುತ್ತದೆ….

ಈ ಜನ್ಮದಲ್ಲಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ತಳ್ಳುವ ನಿಮಗೆ ಮುಂದಿನ ಜನ್ಮದಲ್ಲಿ ಅವರು ತಮ್ಮ ಮಕ್ಕಳೆಂಬ ಕರುಣೆ ಮರೆತು ನಿಮ್ಮನ್ನ ಯಾರು ವಾಸಿಸಲು ಯೋಗ್ಯವಾಗದ ಜಾಗದಲ್ಲಿ ಬಿಟ್ಟು ಹೋಗುವರು… ನಿಮಗೆ ಶುಭವಾಗಲಿ ಅನ್ನುತ್ತಾ ಅವಳು ಅಲ್ಲಿಂದ ಸಾಗುವಳು.

ಇದರ ಮೇಲೆ ಇನ್ನೇನೂ ಹೇಳಬೇಕೆಂದಿಲ್ಲ.. ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಷ್ಟೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button