ಕಥೆ

ತಮಿಳುನಾಡಿನಲ್ಲಿ ಮಿತ್ರರಿಬ್ಬರು ಬರೆದ ರಾಮಾಯಣ ಪ್ರಸಿದ್ಧ – ಒಂದು ಪ್ರಸಂಗ

ಆದರ್ಶ ಮಿತ್ರಪ್ರೇಮ

ಕಂಬನ ತಮಿಳುನಾಡಿನ ಪ್ರತಿಭಾವಂತ ಹಾಗೂ ಸೂಕ್ಷ್ಮದರ್ಶಿ ಮಹಾಕವಿ. ಅವನಿಗೆ ಓಟುಕ್ಕುತ್ತನ ಎಂಬ ಹೆಸರಿನ ಮಿತ್ರನಿದ್ದ. ಅವನೂ ಮಹಾನ ವಿದ್ವಾಂಸನಾಗಿದ್ದ.

ಕಂಬನನು ರಾಮಾಯಣವನ್ನು ರಚಿಸುತ್ತಿರುವುದರ ಬಗ್ಗೆ ತಿಳಿದಾಗ ಓಟುಕ್ಕುತ್ತರಗೂ ಸ್ಪೂರ್ತಿ ಬಂದು ಅವನೂ ತಮಿಳಿನಲ್ಲಿ ರಾಮಾಯಣ ರಚನೆಯನ್ನು ಆರಂಭಿಸಿದ. ಇಬ್ಬರ ರಾಮಾಯಣವು ಸ್ವತಂತ್ರವಾಗಿ ಆರಂಭವಾಗಿ ಕಾಲಾನುಸಾರವಾಗಿ ಪೂರ್ಣವಾಯಿತು.

ಕಂಬನನ ರಾಮಾಯಣವು ಜನಪ್ರಿಯವಾಯಿತು. ಕಂಬನನು ತನ್ನ ರಾಮಾಯಣವನ್ನು ಹಾಡಿದರೆ ಶ್ರೋತೃಗಳು ತಲ್ಲೀನರಾಗಿ ವಾಹ್ ವಾಹ್ ಎಂದು ಹೇಳುತ್ತಿದ್ದರು. ಕಂಬನನು ಹೋದಲ್ಲಿ ಆದರ, ಸನ್ಮಾನವಾಗುತ್ತಿತ್ತು. ಎಲ್ಲಕಡೆಯೂ ಅವನ ಜಯಕಾರವಾಗುತ್ತಿತ್ತು.

ಓಟುಕ್ಕುತ್ತರ ರಾಮಾಯಣವು ಜನಪ್ರಿಯವಾಗದ ಕಾರಣ ಅವನು ನಿರಾಶೆಯಿಂದ ತಾನು ಬರೆದ ರಾಮಾಯಣವನ್ನು ಸುಟ್ಟು ಅದರ ಬೂದಿಯನ್ನು ಮೈಗೆ ಹಚ್ಚಿ ಗೋಸಾಯಿಯಾಗಲು ನಿರ್ಧರಿಸಿದ.

ಓಟುಕ್ಕುತ್ತರ ತನ್ನ ರಾಮಾಯಣವನ್ನು ಓದಲು ಕುಳಿತಾಗ ಗಣ್ಯ ಶ್ರೋತೃಗಳಿರುತ್ತಿದ್ದರು. ಇದರಿಂದಾಗಿ ಓಟುಕ್ಕುತ್ತರ ನಿರಾಶೆಗೊಳ್ಳುತ್ತಿದ್ದ. ಅವನಿಗೆ ತನ್ನ ಎಲ್ಲ ಶ್ರಮವೂ ವ್ಯರ್ಥವಾಯಿತು ಎಂದು ಅನಿಸುತ್ತಿತ್ತು.

ತಾನು ಅಪೇಕ್ಷಿತ ರೀತಿಯಲ್ಲಿ ಜೀವಿಸಿ ಮರಣ ಹೊಂದುವೆನು ಎಂದು ವಿಚಾರ ಮಾಡಿ ಮಾಡಿ ಅವನ ಜೀವನದಲ್ಲಿ ಎಲ್ಲೆಡೆಯೂ ಅಂಧಕಾರ ಪಸರಿಸಿತು. ಕೊನೆಗೆ ಒಂದು ದಿನ ಓಟುಕ್ಕುತ್ತರ ತಾನು ರಚಿಸಿದ ರಾಮಾಯಣವನ್ನು ಸುಟ್ಟು ಆ ರಾಮಾಯಣದ ಬೂದಿಯನ್ನು ಬಳಿದುಕೊಂಡು ಗೋಸಾವಿಯಾಗಬೇಕೆಂದು ನಿರ್ಧರಿಸಿದ.

ಓಟುಕ್ಕುತ್ತರ ತಾನು ರಚಿಸಿದ ರಾಮಾಯಣವನ್ನು ಸುಡುತ್ತಿರುವ ಕಂಬನನ ಕಿವಿಗೆ ಬಿತ್ತು. ಅವನು ಧಾವಿಸಿ ಮಿತ್ರನ ಬಳಿ ಹೋಗಿ ನೋಡಿದಾಗ ಓಟುಕ್ಕುತ್ತರ ತಾನು ರಚಿಸಿದ ರಾಮಾಯಣವನ್ನು ಸುಡುತ್ತಿದ್ದ, ಕಂಬನನು ‘ಅರೆ, ಹುಚ್ಚ ಏನು ಮಾಡುತ್ತಿರುವೆ ? ನೀನೇ ರಚಿಸಿರುವ ರಾಮಾಯಣವನ್ನು ಏಕೆ ಸುಡುತ್ತಿರುವೆ ? ಎಂದು ಕೇಳಿದ.

ಅದಕ್ಕೆ ಓಟುಕ್ಕುತ್ತರ ನಿನ್ನ ಮುಂದೆ ನಾನು ಒಂದು ಮಿಂಚು ಹುಳುವಾಗಿದ್ದೇನೆ, ನನ್ನ ರಾಮಾಯಣವನ್ನು ಯಾರೂ ಕೇಳುವುದಿಲ್ಲ.

ಅದು ಧೂಳು ಹಿಡಿದು ಬಿದ್ದಿರುವುದಕ್ಕಿಂತಲೂ ಸುಟ್ಟು ಹೋದರೆ ಒಳ್ಳೆಯದು ಎಂದು ಹೇಳಿದ. ಕಂಬನನು ಓಟುಕ್ಕುತ್ತರ ಕೈಹಿಡಿದ. ಆಗ ಓಟುಕ್ಕುತ್ತರ ರಾಮಾಯಣ ಬೆಂಕಿಯಿಂದ ಸುಡದೇ ಉಳಿದ ಉತ್ತರಕಾಂಡವನ್ನು ಕಂಬನನು ತೆಗೆದುಕೊಂಡನು.

ಕಂಬನನು ಓಟುಕ್ಕುತ್ತರ ರಾಮಾಯಣದ ಉತ್ತರಕಾಂಡದಿಂದ ತನ್ನ ರಾಮಾಯಣದ ಕಾವ್ಯವನ್ನು ಪೂರ್ತಿಗೊಳಿಸಿದ. ಕಂಬನನು ಓಟುಕ್ಕುತ್ತರಗೆ ‘ಹುಚ್ಚ, ನೀನು ನನ್ನ ಮಿತ್ರನಲ್ಲವೇ ! ಈ ಸುಡುವ ಕೆಲಸ ಮಾಡುವ ಮೊದಲು ನನಗೆ ಹೇಳಬೇಕಿತ್ತಲ್ಲವೇ ! ನಾನು ಹೇಳುವುದನ್ನು ಕೇಳು.

ಈಗ ರಾಮಾಯಣವು ಪೂರ್ಣವಾಗಿದೆ. ನನ್ನ ರಾಮಾಯಣದ ಉತ್ತರಕಾಂಡವು ಪೂರ್ಣವಾಗಬೇಕಿದೆ. ಈಗ ನಾನು ಅದನ್ನು ರಚಿಸುವುದಿಲ್ಲ. ನನ್ನ ರಾಮಾಯಣಕ್ಕೆ ನಿನ್ನ ಈ ಉತ್ತರಕಾಂಡವನ್ನು ಜೋಡಿಸುತ್ತೇನೆ, ಅಂದರೆ ಆಗ ಮಾತ್ರ ರಾಮಾಯಣವು ಪೂರ್ಣವಾಗುತ್ತದೆ.

ಜನರು ನಮ್ಮಿಬ್ಬರನ್ನೂ ರಾಮಾಯಣ ಕರ್ತರೆಂದು ಗುರುತಿಸುತ್ತಾರೆ. ಮುಂದೆ ಇದು ಮಿತ್ರಪ್ರೇಮದ ಆದರ್ಶವಾಗುವುದು. ಇಂದು ತಮಿಳುನಾಡಿನ ಇವರಿಬ್ಬರ ರಚಿಸಿದ ರಾಮಾಯಣ ಪ್ರಸಿದ್ಧಿ ಪಡೆಯಿತು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button