ಕಥೆ
ಮಹಾಕಾಳಿ ಒಲುಮೆ ಗಳಿಸಿದ ತೆನಾಲಿ ರಾಮ

ಮಹಾಕಾಳಿಯ ಕೃಪೆ
ಒಮ್ಮೆ ತೆನಾಲಿ ರಾಮಕೃಷ್ಣನು ಮಹಾಕಾಳಿಯ ಪೂಜೆ ಮಾಡುತ್ತಿರುವಾಗ ಆತನ ನಿಷ್ಠೆಗೆ ಮೆಚ್ಚಿ ಆಕೆ ಪ್ರತ್ಯಕ್ಷಳಾದಳು. ಪ್ರೀತಿಯಿಂದಲೇ “ನೋಡು ಮಗು ನನ್ನ ಒಂದು ಕೈಯಲ್ಲಿ ಮೊಸರಿದೆ ಇನ್ನೊಂದು ಕೈಯಲ್ಲಿ ಹಾಲು ಇದೆ. ಮೊಸರು ಕುಡಿದರೆ ಅಪಾರ ಧನ ಸಂಪತ್ತು, ಹಾಲು ಕುಡಿದರೆ ವಿದ್ಯಾಸಂಪತ್ತು ದೊರೆಯುವುದು” ಎಂದಳು.
ತೆನಲಿ ರಮಕೃಷ್ಣ ಸ್ವಲ್ಪ ಯೋಚಿಸಿ ಎರಡನ್ನು ಪಡೆದು ಒಮ್ಮೆಲೆ ಕುಡಿದೆ ಬಿಟ್ಟ. ದೇವಿಗೆ ನಮಿಸಿ “ಬಹಳ ರುಚಿಯಾಗಿದೆ ಅಮ್ಮಾ, ಧನವಿದ್ದು ವಿದ್ಯೆ ಇಲ್ಲದಿದ್ದರೆ ಪ್ರಯೋಜನವಿಲ್ಲ ಎನಿಸಿ ಎರಡೂ ಕುಡಿದೆನಮ್ಮಾ ಕ್ಷಮಿಸು” ಎಂದು ನುಡಿದು ನಮಿಸಿದ.
ಮಹಾಕಾಳಿ ಸಂತುಷ್ಟಳಾಗಿ “ಮಾತಿನಲ್ಲಿ ಬಲು ಜಾಣನಾದ ನೀನಿನ್ನು ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದು ವಿಕಟ ಕವಿಯಾಗಿ ನಿನ್ನ ಹಾಸ್ಯಪ್ರಜ್ಞೆಯಿಂದಲೇ ಜನರೆಲ್ಲರ ಅವಿವೇಕವನ್ನು ತಿದ್ದಿ ಯಶಸ್ವಿಯಾಗು” ಎಂದು ವರವಿತ್ತಳು.
ನೀತಿ :– ದೇವರ ಒಲುಮೆಯಾಗಲು ಕಷ್ಟ, ಆದರೆ ಒಂದು ವೇಳೆ ಆದರೆ ಎಲ್ಲರ ಹಿತಕ್ಕಾಗಿ ವರ ಕೇಳಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.