ನಿಜಕ್ಕೂ ತಾಳ್ಮೆಗೆ ಮಿತಿ ಉಂಟಾ.? ಓದಿ

ಸಹನಾಶಕ್ತಿಯ ಶಿಖರ
ಯುನಾನ್ ದೇಶದ ಮಹಾನ್ ಸಂತ, ವಿದ್ವಾಂಸ, ದಾರ್ಶನಿಕ ಸುಕದಾತ್. ಸದಾ ಪ್ರಶಾಂತತೆ. ಆತನ ಪತ್ನಿ ತುಂಬ ಕೋಪಿಷ್ಠಳು. ಇವನ ಶಾಂತ ಸ್ವಭಾವ ಆಕೆಗೆ ಸದಾ ರೋಷ ಉಕ್ಕಿಸುತ್ತಿತ್ತು.
ಒಮ್ಮೆ ಐದಾರು ಶಿಷ್ಯರ ಜತೆ ಅವರು ಮನೆಗೆ ಬಂದರು. ಪತಿಯ ಸೇವೆಯ ಜತೆಗೆ ಅವರೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಮನಸ್ಸಿಗೆ ಬಂದಂತೆ ಪತಿಯನ್ನು ಬೈಯತೊಡಗಿದಳು. ಆದರೂ ಇವರು ಮಂದಹಾಸ ಬೀರುತ್ತಲೇ ಇದ್ದ.
ಆಕೆಯ ಕೋಪ ಭುಗಿಲೆದ್ದಿತು. ಹಿತ್ತಲಿಗೆ ಹೋಗಿ ಅಲ್ಲಿದ್ದ ಕೆಸರನ್ನು ತಂದು ಪತಿಯ ತಲೆಯ ಮೇಲೆ ಸುರಿದಳು. ಬಂದವರೆಲ್ಲ ಈ ದೃಶ್ಯ ಕಂಡು ದಂಗಾಗಿ ಹೋದರು.
ಆದರೆ ಸುಕದಾತ್ ಒಂದಿನಿತೂ ಕೋಪಗೊಳ್ಳಲೇ ಇಲ್ಲ. “ದೇವಿ, ನೀನಿಂದು ಶತಮಾನದ ಗಾದೆಯನ್ನೇ ಸುಳ್ಳು ಮಾಡಿದೆ. ಗರ್ಜಿಸುವ ಮೋಡ ಮಳೆ ಸುರಿಸುವುದಿಲ್ಲ ಎನ್ನುತ್ತದೆ ಗಾದೆ. ಆದರೆ ಇಂದು ಮೋಡ ಗರ್ಜಿಸಿತು, ಮಳೆಯೂ ಬಂದಿತು” ಎಂದನು ಶಾಂತಧ್ವನಿಯಲ್ಲಿ.
ಆಲ್ಲೇ ಇರುವ ಒಬ್ಬ ಶಿಷ್ಟ ಕೂಗಿ ಹೇಳಿದ “ಈಕೆ ದುಷ್ಟ ಹೆಂಗಸು. ಘೋರ ಶಿಕ್ಷೆಗೆ ಅರ್ಹಳು. ಕ್ಷಮೆ ಸರ್ವಥಾ ಅರ್ಹವಲ್ಲ. ಅದು ನಿಮ್ಮ ದೌರ್ಬಲ್ಯ!” ಎಂದನು.
ತಕ್ಷಣವೇ ಸುಕದಾತ್ ಹೇಳಿದ “ಈಕೆ ನನ್ನ ಯೋಗ್ಯ ಪತ್ನಿ, ನನ್ನ ಸಹನಾಶಕ್ತಿಯ ಪರೀಕ್ಷಕಿ. ನನ್ನ ಸಂಯಮದ ಕಟ್ಟೆ ಒಡೆಸಲು ಹರಸಾಹಸ ಮಾಡುತ್ತಾಳೆ. ಬರಿದೆ ನಾನು ಕೋಪಿಸಿಕೊಂಡರೆ ಏನು ತಾನೇ ಪ್ರಯೋಜನ?” ಎನ್ನುತ್ತಲೇ ನಕ್ಕು ಬಿಟ್ಟ.
ನೀತಿ :– ತಾಳ್ಮೆಗೆ ನಿಜಕ್ಕೂ ಮಿತಿ ಉಂಟು. ತಾಳ್ಮೆ ಹಾಗೂ ಸಹನೆ ಪ್ರತಿಯೊಬ್ಬರಿಗೂ ಅವಶ್ಯಕ. ಅದುವೆ ನಿಜವಾದ ಬದುಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.