ಕಲ್ಲು, ಕಬ್ಬಿಣ, ಬೆಂಕಿ, ನೀರು, ಗಾಳಿ ಇವೆಲ್ಲಕ್ಕಿಂತ ಶಕ್ತಿಯುತವಾದದು ಯಾವುದು.? ಓದಿ
ಅನುಕಂಪದ ಅಲೆ
ಓ ದೇವರೇ, ಈ ಲೋಕದಲ್ಲಿ ಕಲ್ಲಿಗಿಂತ ಗಟ್ಟಿಯಾದುದು ಇದೆಯೇ?” ದೇವತೆಗಳು ಪ್ರಶ್ನಿಸಿದರು. ಇದೆ. ಕಬ್ಬಿಣದಿಂದ ಕಲ್ಲನ್ನು ಪುಡಿಮಾಡಬಹುದು.
ಕಬ್ಬಿಣಕ್ಕಿಂತಲೂ ಗಟ್ಟಿಯಾದುದು ಇದೆಯೇ? ಬೆಂಕಿ ಇದೆ. ಅದರಿಂದ ಕಬ್ಬಿಣವೂ ಕರಗಿ ನೀರಾಗುತ್ತದೆ.
ಬೆಂಕಿಗಿಂತಲೂ ಶಕ್ತಿಯುತವಾದುದಿದೆಯೇ? ಇದೆಯಲ್ಲ. ನೀರು ಬೆಂಕಿಯನ್ನು ಸುಲಭದಲ್ಲೇ ನಂದಿಸುತ್ತದೆ.
ನೀರಿಗಿಂತಲೂ ಶಕ್ತಿಯುತವಾದುದುಂಟೇ?
ಇದೆ ಬೀಸುವ ಗಾಳಿ ನೀರಿನ ಅಲೆಗಳನ್ನು ಎಬ್ಬಿಸಿ ಓಡಾಡಿಸಬಲ್ಲುದು.
ಅದಕ್ಕಿಂತಲೂ ಬಲಯುತವಾದುದು?
ಎಡಗೈಗೆ ತಿಳಿಯದಂತೆ ಬಲಗೈನಲ್ಲಿ, ಬಲಗೈಗೆ ತಿಳಿಯದಂತೆ ಎಡಗೈನಲ್ಲಿ ಗುಪ್ತವಾಗಿಯೇ ದೀನದಲಿತರಿಗೆ ದಾನ ಮಾಡುವ ಅನುಕಂಪಯುಕ್ತ ಹೃದಯ, ಇಂಥ ಪರೋಪಕಾರಗುಣದಿಂದ ಸರ್ವಶಕ್ತನಾದ ಭಗವಂತನ ಕೃಪೆಯೂ ಸಾಧ್ಯ. ಆ ಭಗವಂತನ ಆಶೀರ್ವಾದ ಎಂಬ ಮ್ಯಾಜಿಕ್ ಮೂಲಕ ಅಸಾಧ್ಯವೆಂದು ತಿಳಿದುದೆಲ್ಲವೂ ಸುಲಭ ಸಾಧ್ಯವಾಗದೇ ಇಲ್ಲ. ಇದು ಸತ್ಯ.
ನೀತಿ :– ಶಕ್ತಿ ಮೇಲೋ? ಯುಕ್ತಿ ಮೇಲೋ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪರೋಪಕಾರ ಮಾಡುವಲ್ಲಿ ಉತ್ಸಾಹ ಬರುವುದು ಹೇಗೆ? ಎಂಬುದಕ್ಕೆ ಸ್ಫೂರ್ತಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.