ಅಸಲಿ ಹಾಗೂ ನಕಲಿ ತಾಜಾತನದ ಹಿರಿಮೆ ಇರಲಿ

ಅಸಲಿ ಹಾಗೂ ನಕಲಿ
ಒಂದು ಊರಿನಲ್ಲಿ ಶ್ಯಾಮ ಎಂಬ ಯುವಕನಿದ್ದ. ನಿರುದ್ಯೋಗಿಯಾಗಿದ್ದ. ಒಂದು ದಿನ ಆತನು ಹಂದಿಯ ಹಾಗೆ ಕೂಗೋದನ್ನು ಅಭ್ಯಸಿಸಿದ. ಆತ ಕೂಗಿದ ಎಂದರೆ ನಿಜವಾದ ಹಂದಿಗಳೂ ಓಡೋಡಿ ಹತ್ತಿರಕ್ಕೆ ಬರುತ್ತಿದ್ದವು. ಶ್ಯಾಮನಿಗೆ ಹೀಗಾಗಿ ಒಳ್ಳೆ ಪ್ರಚಾರವೂ ದೊರೆಯುತ್ತಿತ್ತು.
ಒಮ್ಮೆ ಸಾಧುಗಳೊಬ್ಬರು ಆ ಊರಿಗೆ ಬಂದರು. ಶ್ಯಾಮನ ನಕಲಿ ಪ್ರದರ್ಶನಕ್ಕಾಗಿ ಜನರು ಕ್ಯೂ ನಿಂತಿದ್ದರು. ಸಾಧುಗಳೂ ಪಕ್ಕದಲ್ಲೇ ಚಪ್ಪರ ಹಾಕಿಸಿದರು. ಹತ್ತಾರು ನಿಜ ಹಂದಿಗಳನ್ನೇ ಕಟ್ಟಿ ಹಾಕಿದರು. ಹೊರಗಡೆ ದೊಡ್ಡ ಬೋರ್ಡ್ ನಲ್ಲಿ ‘ಅಸಲಿ ಹಂದಿಗಳಿಲ್ಲಿವೆ. ಬಂದು ನೋಡಿ, ಮನಸಾರೆ ಆನಂದಿಸಿ. ಬೇಗ ಬನ್ನಿ!’ ಎಂಬುದಾಗಿ ಹಾಕಿದರು.
ಹಳ್ಳಿಯ ಮುಗ್ಧ ಜನರು ಹಿಂಡುಗಟ್ಟಿಕೊಂಡೇ ಬಂದರು. ಕ್ರಮೇಣ ಶ್ಯಾಮನಲ್ಲಿಗೆ ಯಾರೂ ಹೋಗಲಿಲ್ಲ. ಆಗ ಸಾಧುಗಳು ಅವನಿಗೆಂದರು – ‘ಮನುಷ್ಯರಾಗಿ ಹುಟ್ಟಿದ ನಾವು, ಅಪರೂಪದ ಅಮೂಲ್ಯ ಈ ಜೀವನದಲ್ಲಿ ಬಂದು ಮಾಡಬೇಕಾದ್ದು, ಆಡಬೇಕಾದ್ದು, ತಿಳಿಯಬೇಕಾದ್ದು ಬಹಳಷ್ಟಿವೆ.
ಅದೆಲ್ಲ ಬಿಟ್ಟು ಹೊಲಸು ತಿನ್ನುವ ಒಂದು ಪ್ರಾಣಿಯನ್ನು ಏಕೆ ಅನುಸರಿಸುವಿ? ಇದೇ ನಿನ್ನ ಜಾಣೆಯನ್ನು ಬೇರೆಡೆ ತಿರುಗಿಸು, ಬೇರೆಯವರ ಮೇಲ್ಮೆಗಾಗಿಯೂ ಚುರುಕಾಗು, ಒಳಿತಾಗುತ್ತೆ ಎಂದಾಗ ಶ್ಯಾಮನಿಗೆ ಜ್ಞಾನೋದಯವಾಯಿತು.
ನೀತಿ :– ಇದೊಂದು ತಾಜಾತನದ ಹಿರಿಮೆ, ಸೃಜನಶೀಲತೆ ಮಾರ್ಗದರ್ಶನ. ಅಗ್ಗದ ಪ್ರಚಾರದ ಬೇಡ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.