ಸ್ವಾರ್ಥ ತ್ಯಾಗ ಮಾಡದಿರಿ..ಈ ಹಾಸ್ಯ ಕಥೆ ಓದಿ

ಮನೆಯ ಮಾರಾಟ
ಶ್ರೀಧರ ತುಂಬಾ ಕಷ್ಟದಲ್ಲಿದ್ದ. ಸುಪ್ತ ಭೀತಿ ಅವನನ್ನು ಕಾಡುತ್ತಿತ್ತು. ನಾನಾ ಚಿಂತೆಗಳಿಂದಾಗಿ ಬೆಂದು ಕಂದಿ ಹೋಗುತ್ತಿದ್ದ. ಕಟ್ಟಕಡೆಗೆ ಈ ತೀರ್ಮಾನಕ್ಕೆ ಬಂದ. ನನ್ನ ಆತಂಕ ನಿವಾರಣೆಯಾಗಿ ನನಗೆ ನೆಮ್ಮದಿ ಸಿಕ್ಕರೆ ನಾನು ನನ್ನ ಮನೆಯನ್ನೇ ಮಾರುವೆ. ಅದರಿಂದ ಬಂದ ಅಷ್ಟೂ ಹಣವನ್ನು ಬಡಬಗ್ಗರಿಗೆ ನೀಡುವೆ. ನನಗಿದೆಲ್ಲ ಸಾಕು. ತ್ಯಾಗದ ನಿಜವಾದ ಸುಖ ನನಗೆ ಬೇಕಾಗಿದೆ.
ಆ ರೀತಿಯಲ್ಲಿ ನಿರ್ಧರಿಸಿದ ಒಂದೇ ತಿಂಗಳಲ್ಲಿ ಅವನ ಸಮಸ್ಯೆಗಳೆಲ್ಲ ದೂರಾದವು. ನೆಮ್ಮದಿ ಹೆಚ್ಚುತ್ತಲೇ ಬಂದಿತು. ಭಯಭೀತಿ ದೂರಾದವು. ಆದರೂ ತಾನು ಹೇಳಿದ ಮಾತಿನಂತೆ ನಡೆಯಲೇಬೇಕೆಂದು ತೀರ್ಮಾನಿಸಿದ.
“ಮನೆ ಮಾರಾಟಕ್ಕಿದೆ” ಎಂದು ಜಾಹೀರಾತು ಕೊಟ್ಟ. ಅದರ ಜೊತೆಗೆ ಒಂದು ಕರಾರು ಹಾಕಿದ. ಮನೆ ಕೊಳ್ಳುವವರು ಒಂದು ಬೆಕ್ಕನ್ನು ಖರೀದಿಸಬೇಕು. ಮನೆಯ ಬೆಲೆ ಒಂದು ಬೆಳ್ಳಿ ನಾಣ್ಯ. ಆದರೆ ಬೆಕ್ಕಿನ ಬೆಲೆ ಒಂದು ಲಕ್ಷ ಬಂಗಾರದ ನಾಣ್ಯ.
ಎಣಿಸಿದಂತೆ ಮಾರಾಟವಾಯಿತು. ಮನೆಮಾರಿದ ಬೆಲೆ ಒಂದು ಬೆಳ್ಳಿ ನಾಣ್ಯವನ್ನು ಬಡಬಗ್ಗರಿಗೆ ಕೊಟ್ಟನು. ಒಂದು ಲಕ್ಷ ಬಂಗಾರದ ವರಹವನ್ನು ಗಂಟುಕಟ್ಟಿಕೊಂಡು ಹೊರಟೇಬಿಟ್ಟನು.
ನೀತಿ :– ತ್ಯಾಗದಿಂದ ಆನಂದ ಸಿಗಲು ಸಾಧ್ಯ ಅದು ನಿಸ್ವಾರ್ಥದಿಂದ ಕೂಡಿರಬೇಕು. ಇಲ್ಲಿ ಮನೆಯ ಬೆಲೆಕ್ಕಿಂತ ಬೆಕ್ಕಿಗೆ ಹೆಚ್ಚಿನ ಬೆಲೆಯಲ್ಲಿ ಮಾರಿದ. ಕಡಿಮೆ ಬೆಲೆಗೆ ಮಾರಿದ ಮನೆಯ ಹಣ ದಾನಕ್ಕಾಗಿ ಹೆಚ್ಚಿನ ಬೆಲೆಗೆ ಮಾರಿದ ಬೆಕ್ಕಿನ ತನಗಾಗಿ ಇಟ್ಟುಕೊಂಡ. ಇದೊಂದು ಸ್ವಾರ್ಥಪರವಾದ ಹಾಸ್ಯ ಕಥೆಯಾಗಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.