ಪೆನ್ಸಿಲಿನ್ ಕಂಡು ಹಿಡಿದ ವ್ಯಕ್ತಿಯ ಕಥೆ ಓದಿ
ಶ್ರೀಮಂತನ ಮಗ – ಬಡ ರೈತನ ಮಗ ಹೀಗೊಂದು ನೈಜ ಕಥೆ ನಿಮಗೆ ಗೊತ್ತೇ.?
ದೂರದ ಒಂದು ಊರಿನಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಏನೋ ಒಂದು ರೀತಿಯ ಕಿರುಚಾಟ ಕೇಳಿ ಬಂದಿತು.
ತಕ್ಷಣ ಆ ಕಡೆ ಹೋಗಿ ನೋಡಿದರೆ ಅಲ್ಲಿ ಒಬ್ಬ ಹುಡುಗ ಬಾವಿಯಲ್ಲಿ ಬಿದ್ದು ಪ್ರಾಣಾಪಾಯದಿಂದ ಸಹಾಯಕ್ಕಾಗಿ help help ಎಂದು ಅರಚಾಡತಾ ಇದ್ದ (ಕೂಗಡುತ ಇದ್ದ) ಅದನ್ನು ನೋಡಿದ ರೈತ ಒಂದು ಕ್ಷಣ ವ್ಯರ್ಥ ಮಾಡದೆ ತಕ್ಷಣ ಬಾವಿಗೆ ಎಗರಿ (ಹಾರಿ) ಆ ಹುಡುಗನನ್ನು ಕಾಪಡಿ ಮೇಲೆ ತಂದು ಧೈರ್ಯ ತುಂಬಿ ಮನೆಗೆ ಕಳುಹಿಸಿ ಕೊಡುತ್ತಾನೆ.
ಮರು ದಿನ ಆ ರೈತನ ಮನೆ ಮುಂದೆ ಬೆಲೆ ಬಾಳುವ ಕುದುರೆ ಗಾಡಿ ಬಂದು ನಿಂತಿತು.
ಆ ಕುದುರೆಗಾಡಿಯಿಂದ ದುಬಾರಿ ಬೆಲೆ ಬಾಳುವ ಬಟ್ಟೆ ಆಭರಣ ಧರಿಸಿದ ದೊಡ್ಡ ಮನುಷ್ಯ ಇಳಿದು ಸೀದಾ ಆ ರೈತನ ಸನಿಹ ಬರುತ್ತಾನೆ,
ಆಗ ಆ ರೈತ ಯಾರು ಸ್ವಾಮಿ ನೀವು, ನಿಮಗೆ ಯಾರು ಬೇಕೆಂದು ಕೇಳುತ್ತಾನೆ. ಆಗ ಆ ಶ್ರೀಮಂತ ಮನುಷ್ಯ ನಮಸ್ತೆ ನಾನು ಪಕ್ಕದ ಊರಿನಲ್ಲಿ ಇರುತ್ತೇನೆ.
ನಿನ್ನೆ ನನ್ನ ಮಗ ಬಾವಿಯಲ್ಲಿ ಬಿದ್ದಾಗ ಕಾಪಾಡಿದ್ದೀರಿ ಅದಕ್ಕೆ ಕೃತಜ್ಞತೆಯಾಗಿ ಏನು ಕೊಟ್ಟರೂ ನಿಮ್ಮ ಋಣ ತಿರುವುದಿಲ್ಲ ಎಂದು ಹಣ ಒಡೆವೆ ತೆಗೆದುಕೊಳ್ಳಿ ಎಂದು ಕೊಡಲು ಬರುತ್ತಾನೆ.
ಆದರೆ ಆ ರೈತ, ಕ್ಷಮಿಸಿ ನಾನು ಪ್ರತಿಫಲ ಅಪೇಕ್ಷಿಸಿ ಆ ಕೆಲಸ ಮಾಡಲಿಲ್ಲ. ಒಂದು ಜೀವ ಅಪಾಯದಲ್ಲಿದ್ದಾಗ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಅದು ಮನುಷ್ಯನಾದ ನನ್ನ ಕರ್ತವ್ಯ ಅಷ್ಟೇ ಎಂದು ನಯವಾಗಿ ತಿರಸ್ಕರಿಸುತ್ತಾನೆ ,
ಅದೇ ಸಮಯಕ್ಕೆ ಆ ರೈತನ ಮಗ ಅಲ್ಲಿಗೆ ಬರುತ್ತಾನೆ. ಬಂದು ದೊಡ್ಡ ಶ್ರೀಮಂತನಿಗೆ ನಮಸ್ಕಾರಿಸುತ್ತಾನೆ. ಶ್ರೀಮಂತ.. ರೈತನಿಗೆ ನಿನ್ನ ಮಗನಾ ಏನು ಓದುತ್ತಿದ್ದಾನೆ.? ಆಗ ರೈತ ಹೌದು ಸ್ವಾಮಿ ಸ್ವಲ್ಪ ಮಟ್ಟಿಗೆ ಓದಿಸಿದ್ದೇನೆ. ಮುಂದೆ ಓದಿಸಲಾಗಲಿಲ್ಲ. ನಮ್ಮ ಜೊತೆಗೆ ಹೊಲದ ಕೆಲಸದಲ್ಲಿ ಸಹಾಯ ಮಾಡಿಕೊಂಡಿದ್ದಾನೆ ಎಂದು ರೈತ ಹೇಳುತ್ತಾನೆ.
ಆಗ ಆ ಶ್ರೀಮಂತ ಮನುಷ್ಯ ಹಾಗಾದರೆ ನನ್ನ ಮಾತು ಕೇಳು ನಿನ್ನ ಮಗನನ್ವು ನಾನು ನನ್ನ ಖರ್ಚಿನಲ್ಲಿ ಮುಂದೆ ನನ್ನ ಮಗನ ಜೊತೆ ಓದಿಸುತ್ತೇನೆ ಬೇಡ ಎನ್ನಬಾರದು ಎಂದು ಒತ್ತಾಯಿಸಿದ.
ಈ ಮೂಲಕ ನನ್ನ ಮಗನನ್ನು ಕಾಪಾಡಿದ ಋಣ ಕೊಂಚ ಕಡಿಮೆ ಮಾಡಿಕೊಳ್ಳಲು ಅವಕಾಶ ಕೊಡು ಎಂದು ಒತ್ತಾಯಿಸುತ್ತಾನೆ..
ಆ ಶ್ರೀಮಂತ ಅಷ್ಟು ಕೇಳುವಾಗ ರೈತ ಒಪ್ಪುತ್ತಾನೆ.
ಆ ಇಬ್ಬರು ಮಕ್ಕಳು ಚೆನ್ನಾಗಿ ಓದಿ ದೊಡ್ಡ ವಿದ್ಯಾವಂತರಾಗುತ್ತಾರೆ ಮುಂದೆ ಸ್ವಲ್ಪ ಸಮಯದ ತರುವಾಯ ಆ ಶ್ರೀಮಂತನ ಮಗನಿಗೆ ಕಾಯಿಲೆ (ಜಡ್ಡು) ಬರುತ್ತದೆ.
ಅದು ಯಾವ ರೀತಿಯ ಕಾಯಿಲೆ ಗೊತ್ತಾಗಲಿಲ್ಲ. ದೊಡ್ಡ ದೊಡ್ಡ ವೈದ್ಯರುಗಳು ಬಂದು ಪರೀಕ್ಷಿಸಿ ನೋಡಿ ಗೊತ್ತಾಗದೆ ಕೈಚಲ್ಲುತ್ತಾರೆ.
ಆಗ ಆ ಶ್ರೀಮಂತ ಓದಿಸಿದ್ದ ರೈತನ ಮಗ ಬಂದು ಆ ಕಾಯಿಲೆ ಕಂಡುಹಿಡಿದು ಅದಕ್ಕೆ ತಾನೇ ಕಂಡು ಹಿಡಿದ ಔಷಧ ಕೊಡುತ್ತಾನೆ.
ಔಷಧದ ಪರಿಣಾಮದಿಂದ ಶ್ರೀಮಂತನ ಮಗನ ಕಾಯಿಲೆ ಗುಣವಾಗಿ ಆರೋಗ್ಯವಂತನಾಗುತ್ತಾನೆ… ಆ ರೈತನ ಮಗ ಯಾರು ಗೊತ್ತಾ? ಜಗತ್ತಿನ ಪ್ರಖ್ಯಾತ ವಿಜ್ಞಾನಿ ಪೆನ್ಸಲಿನ್ ಕಂಡುಹಿಡಿದ “ಅಲೆಕ್ಸಾಂಡರ್ ಫ್ಲೇಮಿಂಗ್”!!!
“Alexander Fleming ”
ಇನ್ನು ಆ ಶ್ರೀಮಂತನ ಮಗ ಯಾರು ಗೊತ್ತಾ? ಆತ ಬ್ರಿಟನ್ ಮಾಜಿ ಪ್ರಧಾನಮಂತ್ರಿ ವಿನ್ಸಟನ್ ಚರ್ಚಿಲ್!!!
” Winston Churchill ”
ಪ್ರತಿಫಲ ಅಪೇಕ್ಷಿಸದೇ ಸಹಾಯ ಮಾಡುವ ಕೆಲಸ ಸುಮ್ಮನೆ ವ್ಯರ್ಥವಾಗುವದಿಲ್ಲ.
ಕಲಕಲಾಡುತ್ತ ಜೊತೆ ಜೊತೆಗೆ ತಿರುಗುತ್ತಿರುತ್ತದೆ ನಿರೀಕ್ಷೆ ಮೀರಿದ ಫಲ ಕೊಡುತ್ತಿರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882