ಕಲ್ಲು ಮಣ್ಣಿನ ದೇವರ ಆರಾಧನೆ ಏಕೆ.? ರಾಜನ ಕಣ್ಣು ತೆರೆಸಿದ ಸ್ವಾಮೀಜಿ ಓದಿ
ವಿಗ್ರಹಾರಧನೆ ತತ್ವದ ಬಗ್ಗೆ ನಿಮಗೆಷ್ಟು ಗೊತ್ತು.? ಓದಿ
ಕಲ್ಲು ಮಣ್ಣಿನ ದೇವರ ಆರಾಧನೆ ಏಕೆ.?
ಒಮ್ಮೆ ರಾಮಕೃಷ್ಣ ಪರಮಹಂಸರ ಶಿಷ್ಯರೂ ನಮ್ಮ ದೇಶದ ಕೀರ್ತಿ ಕಲಶದ ರತ್ನಪ್ರಾಯರೂ ಆದ ವಿವೇಕಾನಂದರು ಒಬ್ಬ ದೇಶೀಯ ರಾಜನಲ್ಲಿಗೆ ಹೋದರು. ಮಾತಿನ ನಡುವೆ ಆ ರಾಜನು ಸ್ವಾಮೀಜಿಯವರೊಂದಿಗೆ ನನಗೆ ವಿಗ್ರಹಾರಾಧನೆಯಲ್ಲಿ ನಂಬಿಕೆ ಇಲ್ಲ ಮರ ಕಲ್ಲುಗಳನ್ನು ಪೂಜಿಸುವುದೆಂದರೇನು? ಎಂದು ಹೇಳಿದನು.
ಸ್ವಾಮೀಜಿಯವರು, ಸಮಾಧಾನದಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ನಂಬಿಕೆಗೆ ಅನುಸಾರವಾಗಿ ಒಂದೊಂದು ರೂಪವನ್ನು ಪೂಜಿಸುತ್ತಾರೆ. ಎಂದರು, ಆ ರಾಜನು ತನ್ನ ವಾದವನ್ನು ಬಿಡಲಿಲ್ಲ, ಹಾಗೆ ಮುಂದುವರಿಸಿದನು. ಸ್ವಾಮೀಜಿಯವರು ಆ ಹಜಾರದಲ್ಲಿ ಗೋಡೆಗೆ ನೇತುಹಾಕಿದ್ದ ರಾಜನ ಚಿತ್ರ ಪಟವನ್ನು ಕಂಡು ಸಭಿಕರನ್ನು ಉದ್ದೇಶಿಸಿ ಈ ಪಟದ ಮೇಲೆ ಉಗಿಯಿರಿ ಎಂದರು.
ಎಲ್ಲರೂ ಸ್ಥಂಭೀಭೂತರಾಗಿ ಹಾಗೆ ಏನೂ ಮಾಡಲು ತೋರದೆ ನಿಂತರು. ಅಚ್ಚರಿ ಪಡುವಿರೇಕೆ? ಆ ಪಟವು ಕಾಗದದ ತುಂಡಲ್ಲವೇ? ಎಂದು ಕೇಳಿದರು ಸ್ವಾಮೀಜಿ. ಸಭಿಕರು ಅಳುಕುತ್ತಾ, “ಈ ಪಟವು ನಮ್ಮ ಮಾಹಾರಾಜರದು, ಅವರು ಎಷ್ಟು ಗೌರವಾನ್ವಿತರೋ ಅವರ ಈ ಚಿತ್ರ ರೂಪವಾದರೂ ಅಷ್ಟೇ ಗೌರವಾನ್ವಿತ” ಅಂತಹ ಕೆಟ್ಟ ಕಾರ್ಯ ಮಾಡಬಹುದೇ? ಎಂದು ಕೇಳಿದರು.
ಸ್ವಾಮೀಜಿಯವರು ನಗುತ್ತಾ ಮಹಾರಾಜನತ್ತ ತಿರುಗಿ ನಿಮ್ಮ ಮನಸ್ಸು ನೋಯಿಸಿದ್ದಕ್ಕೆ ಕ್ಷಮಿಸಿ ಮಾಹಾರಾಜ, ಈ ಚಿತ್ರ ಪಟವು ಈ ಸಭಿಕರಿಗೆ ನಿಮ್ಮ ರೂಪವನ್ನು ಮನಸ್ಸಿಗೆ ತರುತ್ತದೆ. ನಿಮಗೆ ಮರ್ಯಾದೆ ಮಾಡಿದಂತೆ ಈ ಪಟಕ್ಕೂ ಮರ್ಯಾದೆ ನೀಡುವರು. ಇದೇ ವಿಧವಾಗಿ ಭಕ್ತನಿಗೆ ತಾನು ಅರ್ಚಿಸುವ ವಿಗ್ರಹವು ತಾನು ನಂಬಿರುವ ದೈವದ ಪ್ರತಿರೂಪ.
ಆದ್ದರಿಂದ ಭಕ್ತರು ಪೂಜಿಸುವಾಗ ಮರವನ್ನೋ, ಲೋಹವನ್ನೋ, ಕಲ್ಲನ್ನೋ ಪೂಜಿಸುವುದಿಲ್ಲ, ದೇವರ ಪ್ರತಿರೂಪವನ್ನು ಪೂಜಿಸುತ್ತಾರೆ. ಇದೇ ವಿಗ್ರಹಾರಾಧನೆಯ ತತ್ವ ಎಂದು ವಿವರಿಸಿದರು. ನನ್ನ ಕಣ್ಣೆರೆಸಿ ನಿಜ ತೋರಿದಿರಿ ಸ್ವಾಮೀಜಿ, ಎಂದು ರಾಜನು ನಮಸ್ಕರಿಸಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.