ದಿನಕ್ಕೊಂದು ಕಥೆ
ಮನೋವ್ಯಾಧಿ
ಒಮ್ಮೆ ಪ್ಯಾರಿಸ್‌ನ ಒಪೆರಾ ಹೌಸ್‌ನಲ್ಲಿ ಖ್ಯಾತ ಗಾಯಕನೊಬ್ಬನ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು. ಗಾಯಕನ ಹೆಸರು ಕೇಳಿಯೇ ಒಂದೇ ದಿನದಲ್ಲಿ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿದ್ದವು. ನಿರೂಪಕರು ಬಂದು, ಸಭಿಕರು ಕ್ಷಮಿಸಬೇಕು. ಅನಾರೋಗ್ಯದ ಕಾರಣದಿಂದ ಆ ಗಾಯಕರು ಬರಲಿಲ್ಲ. ಆದರೆ ನಮ್ಮೊಂದಿಗೆ ಅಷ್ಟೇ ಚೆನ್ನಾಗಿ ಹಾಡಿ, ನಿಮ್ಮನ್ನು ರಂಜಿಸಬಲ್ಲ ಇನ್ನೊಬ್ಬರಿದ್ದಾರೆ ಎನ್ನುತ್ತಿದ್ದಂತೆಯೇ ಸಭಿಕರಲ್ಲಿ ಗುಜುಗುಜು ಶುರುವಾಯಿತು.
ಹೊಸ ಗಾಯಕ ತನ್ನೆಲ್ಲ ಶಕ್ತಿ ಮೀರಿ ಹಾಡಿದ. ಆದರೆ ಆತ ಹಾಡಿ ಮುಗಿಸಿದರೆ ಯಾರೂ ಚಪ್ಪಾಳೆ ತಟ್ಟಲಿಲ್ಲ. ಅವನಷ್ಟು ಚೆನ್ನಾಗಿ ಹಾಡಿದ್ದರೂ, ತಾವು ಟಿಕೆಟ್ ಕೊಂಡದ್ದು ಇನ್ನೊಬ್ಬ ಗಾಯಕನಿಗಾಗಿಯೇ ಎಂಬ ಅಸಮಾಧಾನದಿಂದಾಗಿ ಸಭಿಕರು ಖುಷಿಗೊಳ್ಳಲಿಲ್ಲ.
ಈಗ ಅದೇ ಗಾಯಕ ತನ್ನ ಮೇಕಪ್ ತೆಗೆದು ಮುಂದೆ ಬಂದು ನಿಂತ. ಆತ ಸಭಿಕರು ಯಾರಿಗಾಗಿ ಟಿಕೆಟ್ ಕೊಂಡಿದ್ದರೋ ಆತನೇ ಆಗಿದ್ದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.