ಪ್ರಮುಖ ಸುದ್ದಿಸಾಹಿತ್ಯ

ಜಾನಪದ ಸಾಹಿತ್ಯ ಗ್ರಾಮೀಣ ಜನರ ಜೀವಾಳ – ಡಾ.ಗುಬ್ಬಿ

ಶಹಾಪುರಃ ಜಾನಪದ ಸಾಹಿತ್ಯ ಸಂಭ್ರಮ

ಯಾದಗಿರಿ,ಶಹಾಪುರಃ ಜಾನಪದ ಸಾಹಿತ್ಯ ಮತ್ತು ಕಲೆ ಗ್ರಾಮೀಣ ಜನರ ಜೀವಾಳ ಎಂದು ಕಲಬುರ್ಗಿ ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಎಸ್.ಗುಬ್ಬಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ನಡೆದ ಕಲ್ಯಾಣ ಕರ್ನಾಟಕ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಕಲಾವಿದರು ಸಾಕಷ್ಟು ಜನರಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕಿದೆ.

ಜಾನಪದಲ್ಲಿ ಕಥೆ, ಇತಿಹಾಸ ಹಿಂದೆ ನಡೆದ ನೈಜ ಘಟನೆ ಸೇರಿದಂತೆ ಬದುಕಿನ ಮೌಲ್ಯಗಳು ಹಿಂದಿನ ಜೀವನದ ಮಜಲುಗಳು ಹಳ್ಳಿ ಸೊಗಡು ಇತರೆ ಸಾಧನೆಗೈದ ಮಹಾತ್ಮರ ಚರಿತ್ರೆ ಹೀಗೆ ಒಂದಿಲ್ಲೊಂದು ಸಮರ್ಪಕ ಮಾಹಿತಿ ದೊರೆಯುತ್ತದೆ.

ಹೀಗಾಗಿ ಜಾನಪದ ಹಾಡುಗಾರರನ್ನು ಇತಿಹಾಸ ತಿಳಿಸುವ ವiತ್ತು ಮೌಲ್ಯ ಯುಕ್ತ ಜೀವನ ನಡೆಸಲು ಬುದ್ಧಿ ಹೇಳುವ ತತ್ವವಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಮೈಲಾರಪ್ಪ ನಾಯಕ ಮಾತನಾಡಿ, ಜನಪದ ಕಲೆ ತಾಯಿಬೇರು ಇದ್ದಂತೆ, ಅದು ಗ್ರಾಮೀಣ ಜನರ ಬದುಕಿನ ಉನ್ನತ ಸಾಂಸ್ಕøತಿಕ ಪರಂಪರೆಯನ್ನು ಬಿಂಬಿಸುತ್ತದೆ ಎಂದರು. ಅಲ್ಲದೇ ಹಲವಾರು ಜನಪದ ಹಾಡುಗಳಾದ ಹಂತಿ ಪದ, ಜಾನಪದ, ಡೊಳ್ಳಿನ ಪದ, ಗೀಗೀ ಪದಗಳು ಎಲ್ಲರೆದುರು ಹಾಡಿ ಮನಸೊರೆಗೊಳಿಸಿದರು.

ಇದೇ ಸಂದರ್ಭದಲ್ಲಿ ನಾಡಿನ ಸಾಧಕರಿಗೆ ಕಲಾನಿಕೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ರಮೇಶ ಯಾಳಗಿ ಕೆಂಭಾವಿ ಹಾಗೂ ಪ್ರದೀಪ ಅಂಗಡಿ ಅವರಿಂದ ಜಾನಪದ & ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು, ಅಲ್ಲದೆ ಮಿಮಿಕ್ರಿ, ನೃತ್ಯ ಹಾಸ್ಯೋತ್ಸವ ತತ್ವಪದಗಳು ಮತ್ತು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆ ಮೇಲೆ ಡಾ.ಚಂದ್ರಶೇಖರ ಸುಬೇದಾರ, ಸಾಹಿತಿ ಸಿದ್ಧರಾಮ ಹೊನ್ಕಲ್, ಕ.ಸಾ.ಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ಪ್ರಗತಿಪರ ಚಿಂತಕ ಮಲ್ಲಿಕಾರ್ಜುನ ಸತ್ಯಂಪೇಟೆ, ಶಿವಣ್ಣ ಇಜೇರಿ, ದೇವಿಂದ್ರಪ್ಪ ಕನ್ಯಾಕೋಳೂರು ಉಪಸ್ಥಿತರಿದ್ದರು.

ಶಿಕ್ಷಕ ಸುರೇಶ ಶಿರೋಳಮಠ ಸ್ವಾಗತಿಸಿದರು. ಜಯಶ್ರೀ ಪ್ರಾರ್ಥನೆ ಗೀತೆ ಹಾಡಿದರು, ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂಗೂರಯ್ಯ ಗಣಾಚಾರಿಮಠ ನಿರೂಪಿಸಿದರು. ವೀರಭದ್ರಯ್ಯ ಹಯ್ಯಾಳ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button