ನೀವು ಹೃದಯದಾರಿದ್ರ್ಯರಾ.? ಬದಲಾಗಿ ಈ ಕಥೆ ಓದಿ
ಚಿಕ್ಕ ಕಥೆ ದೊಡ್ಡ ಸಂದೇಶ ಈ ಕಥೆ ಓದಿ ಉತ್ತಮ ನೀತಿ ಅಳವಡಿಸಿಕೊಳ್ಳಿ
ದಿನಕ್ಕೊಂದು ಕಥೆ
ಹೃದಯದಾರಿದ್ರ
ಒಬ್ಬ ಗುರುಗಳು ಒಂದು ದಿನ ತಮ್ಮ ಶಿಷ್ಯನೊಂದಿಗೆ ವಾಯು ವಿಹಾರಕ್ಕೆ ಹೊರಟಿದ್ದರು. ಮಾರ್ಗದಲ್ಲಿ ಒಂದು ದೊಡ್ಡ ಮನೆ ಇತ್ತು ಕಣ್ಣು ಸೆಳೆಯುವ ವಿನ್ಯಾಸ, ಆಕರ್ಷಕ ಬಣ್ಣ, ಅದನ್ನು ನೋಡಿದ ಶಿಷ್ಯನು “ಈ ಮನೆಯು ಎಷ್ಟು ಸುಂದರವಾಗಿದೆ !” ಎಂದ. ಗುರುಗಳು ಹೇಳಿದರು “ಹೌದು ಈ ಮನೆಯ ಒಳಗಿನ ಜನರ ಹೃದಯವೂ ಅಷ್ಟೇ ಸುಂದರವಾಗಿದ್ದರೆ ಇದು ನಿಜವಾಗಿಯೂ ಸುಂದರ ಮನೆ, ಸಂತಸದ ಸೌಧ! ಇಲ್ಲದಿದ್ದರೆ ಏನು ಪ್ರಯೋಜನ ??” ಎಂದರು.
ಅಷ್ಟರಲ್ಲಿ ಒಂದು ಘಟನೆ ನಡೆಯಿತು. ಓರ್ವ ಹಣ್ಣು ಹಣ್ಣಾದ ಮುದುಕಿಯು ಆ ಮನೆಯ ಎದುರಿಗೆ ಬಂದಳು. ಅವಳು ತುಂಬಾ ಹಸಿದಿದ್ದಳು. “ಈ ದೊಡ್ಡ ಮನೆಯಲ್ಲಿ ಏನಾದರೂ ಬೇಡಿ ಪಡೆಯೋಣ” ಎಂದು ಮುದುಕಿ ಆ ಮನೆಯ ಬಾಗಿಲು ತಟ್ಟಿದಳು.
ಆ ಸದ್ದು ಕೇಳಿ ಒಳಗಿದ್ದ ಯಜಮಾನನು ಹೊರಗೆ ಬಂದ. ಈ ಮುದುಕಿಯನ್ನು ನೋಡಿದ ಕೂಡಲೇ ಅವಳತ್ತ ನಾಯಿಯನ್ನು ‘ಛೂ’ ಬಿಟ್ಟ. ಮನೆ ದೊಡ್ಡದು. ಮನೆಯ ಒಳಗಿನವರೆಲ್ಲ ಸಣ್ಣವರು. ಸಣ್ಣ ಮನದವರು. ಇದಕ್ಕೆ ಹೃದಯದಾರಿದ್ರ ಎನ್ನುತ್ತಾರೆ ಎಂದರು ಗುರುಗಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.