ಕಥೆ

ನಿಮಗೆ ತೋರುವ ಪ್ರೀತಿ ಕಡಿಮೆಯಾದಲ್ಲಿ ಅಲ್ಲಿಂದ ಕಾಲ್ಕಿತ್ತಿ.!

ಎಲ್ಲಿ ನಮ್ಮ ಮೇಲಿನ ಪ್ರೀತಿ ಕಮ್ಮಿಯಾಗುತ್ತಾ ಬರುತ್ತದೊ ಆ ಸ್ಥಳದಲ್ಲಿ ನಾವಿರಬಾರದು.!

ದಿನಕ್ಕೊಂದು ಕಥೆ

ಎಲ್ಲಿ ನಮ್ಮ ಮೇಲಿನ ಪ್ರೀತಿ ಕಮ್ಮಿಯಾಗುತ್ತಾ ಬರುತ್ತದೊ ಆ ಸ್ಥಳದಲ್ಲಿ ನಾವು ಇರಬಾರದು.

ಒಮ್ಮೆ ರಾಜ ಕಾಡಿಗೆ ಬೇಟೆಗೆOದು ಹೋದಾಗ ಧಣಿದು ಬಾಯಾರಿಕೆಯಾಗಿ ಸರೋವರದ ಬಳಿ ಬಂದು ನೀರು ಕುಡಿಯುತ್ತೀರುವಾಗ, ಅವನ ಕಣ್ಣಿಗೆ ಒಂದು ಸುಂದರವಾದ ಹಂಸ ಪಕ್ಷಿ ಕಾಣುತ್ತದೆ. ತನ್ನ ಪಾಡಿದೆ ತಾನು ಆಟವಾಡುತಿದ್ದ ಹಂಸ ಪಕ್ಷಿಯನ್ನು ಎತ್ತಿಕೊಂಡು ಮುದ್ದಾಡಿ ಮನಸ್ಸಿಗೆ ತುಂಬಾ ಇಷ್ಟವಾಗಿ ಕೊನೆಗೆ ಅರಮನೆಗೆ ಹೋಗುವಾಗ ಜೊತೆಗೆ ಆ ಹಂಸ ಪಕ್ಷಿಯನ್ನು ಕರೆದೋಯುತ್ತಾನೆ.

ಆ ಹಂಸ ಪಕ್ಷಿಗೆ ಪ್ರತ್ಯಕವಾದ ಕೊಠಡಿ ರತ್ನಕಚಿತ ಮಂಚ ಹಾಗು ರತ್ನಗಂಬಳಿ ತುಂಬಾ ವಿಶೇಷವಾಗಿ ನೋಡಿಕೊಳ್ಳುತ್ತಿರುತ್ತಾನೆ. ಬಂಗಾರದ ಬಟ್ಟಲಿನಲ್ಲಿ ತನ್ನ ಕೈಯಾರೇ ತಾನೇ ಹಾಲನ್ನ ಕುಡಿಸುತ್ತಿರುತ್ತಾನೆ.

ಇತ್ತ ರಾಜ ಪತ್ನಿ, ಸೇನಾಧಿಪತಿ, ಸೇವಕರಿಗೆ ಎಲ್ಲರಿಗೂ ತುಂಬಾ ಆಶ್ಚರ್ಯವಾಗುತ್ತದೆ. ರಾಜ ಯಾಕಿಷ್ಟು ಆ ಹಂಸಕ್ಕೆ ಉಪಚಾರ? ರಾಜನ ಮನಸ್ಸಿನಲ್ಲಿ ಈ ಹಂಸ ಅರಮನೆಗೆ ಬಂದಾಗಿನಿಂದ ಎಲ್ಲವೂ ಸಮೃದ್ಧಿಯಾಗುತ್ತಿದ್ದೆ ಎನಿಸುತ್ತದೆ. ಈ ಹಂಸ ನನಗೆ ಸಿಕ್ಕ ವಿಶೇಷ ಅದೃಷ್ಟ ಎನ್ನುವ ನಂಬಿಕೆ ಆತನಿಗೆ.

ಹೀಗೆ ದಿನಗಳು ಕಳೆದಂತೆ ಆ ಹಂಸದ ಕಡೆ ರಾಜನ ಗಮನ ಕಡಿಮೆಯಾಗುತ್ತದೆ. ಮೊದಲಿನ ಹಾಗೆ ಇರುವದಿಲ್ಲ. ತಾನೇ ಹಾಲನ್ನ ಕುಡಿಸುತಿದ್ದ ರಾಜ ತನ್ನ ಸೇವಕರಿಗೆ ಹೇಳಿದಾಗ, ಆ ಸೇವಕರು ಈ ಹಂಸಕ್ಕೆ ಏಕೆ ಇಷ್ಟೊಂದು ಉಪಚಾರ? ಇದಕ್ಕೆ ಏಕೆ ಶುದ್ಧ ಗಟ್ಟಿ ಹಾಲು? ಕುಡಿಸಬೇಕು. ಸ್ವಲ್ಪ ನೀರನ್ನು ಬೇರೆಸುತ್ತಾನೆ.

ಆದರೆ ಹಂಸ ಪಕ್ಷಿಯ ವಿಶೇಷ ಏನಂದ್ರೆ? ಹಾಲಿನೊಂದಿಗೆ ನೀರು ಬೆರೆಸಿದಾಗ ಅದು ಶುದ್ಧ ಹಾಲಿನ ಪ್ರಮಾಣವನ್ನಷ್ಟೇ ಹೀರಿ ನೀರಿನ ಪ್ರಮಾಣ ಹಾಗೆ ಉಳಿಸಿರತ್ತದೆ. ಇದು ಹಂಸ ಪಕ್ಷಿಯ ವಿಶೇಷ. ಅದು ಹಾಲಿನ ಪ್ರಮಾಣವನ್ನು ಕುಡಿದು ಬೆರೆಸಿದ ನೀರಿನ ಪ್ರಮಾಣವನ್ನು ಉಳಿಸಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ ಸೇವಕನಿಗೆ. ಹೀಗೆ ಎರಡು ಮೂರು ದಿನದಿಂದ ನಡೆಯುತ್ತದೆ.

ಒಂದು ದಿನ ರಾಜನಿಗೆ ತನ್ನ ಬಿಡುವಿನ ಸಮಯದಲ್ಲಿ ಆ ಹಂಸ ಪಕ್ಷಿಯನ್ನು ನೋಡಬೇಕೆನಿಸುತ್ತದೆ. ಕೊಠಡಿಗೆ ಹೋಗಿ ನೋಡಿದಾಗ, ಆ ಹಂಸ ಪಕ್ಷಿ ಅಲ್ಲಿ ಇರುವುದಿಲ್ಲ.

ಅರಮನೆಯನ್ನೆಲ್ಲ ಹುಡುಕಿದ ರಾಜ. ಸೇವಕನನ್ನು ಕಳುಹಿಸಿ ಹುಡಿಕಿ ತಂದು ಕೊಡಲು ಹೇಳುತ್ತಾನೆ. ತಂದು ಕೊಟ್ಟವರಿಗೆ ದೊಡ್ಡ ಮಟ್ಟದ ಬಹುಮಾನವನ್ನು ಕೊಡಲು ನಿರ್ಧಾರ ಮಾಡುತ್ತಾನೆ. ಕೊನೆಗೆ ಎಲ್ಲಿಯೂ ಸಿಗದೆ ಆ ಹಂಸ ಎಲ್ಲಿಗೋ ದೂರ ಹೋಗಿರತ್ತದೆ.

ನೀತಿ :– ಎಲ್ಲಿ ನಮ್ಮ ಬೆಲೆ ಸ್ವಲ್ಪ ಸ್ವಲ್ಪ ಕಮ್ಮಿಯಾಗುತ್ತಾ ಬರುತ್ತದೊ ಅಂತ ಸ್ಥಳದಲ್ಲಿ ನಾವು ಇರಬಾರದು, ದೂರವಾಗಿ ಬಿಡಬೇಕು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button