ಬೆಂಗಳೂರಿನ ಈ ನಿವಾಸಿಯ ಲವ್‍ಸ್ಟೋರಿ ಓದಲೇ ಬೇಕು..!
ಬೆಂಗಳೂರಿನ ಈ ನಿವಾಸಿಯ ಲವ್‍ಸ್ಟೋರಿ ಓದಲೇ ಬೇಕು..!
ಪ್ರೀತಿಗೆ ಬಾಹ್ಯ ಸೌಂದರ್ಯ ಬೇಕಿಲ್ಲ. ಎರಡು ಶುದ್ಧ ಮನಸ್ಸಿನ ಸ್ವಚ್ಛಂದದ ಆಂತರಿಕ ಸೌಂದರ್ಯ ಬೇಕು. ಬೆಂಗಳೂರಿನ ಈ ಜೋಡಿಯ ರಿಯಲ್ ಲವ್‍ಸ್ಟೋರಿ ಓದಿ. ನಿಜಕ್ಕೂ ಇವರ ಪ್ರೀತಿ ಗ್ರೇಟ್ ಅನಿಸುತ್ತೆ!
ಅವರು ಬೆಂಗಳೂರು ನಿವಾಸಿ ಜಯಪ್ರಕಾಶ್. ಅದು 2004. ಆಗಿನ್ನೂ ಇವರಿಗೆ 17 ವರ್ಷ. ಅವತ್ತೊಂದು ದಿನ ಕ್ಲಾಸ್ ಮುಗಿಸಿಕೊಂಡು ಕ್ಲಾಸ್ ರೂಂನಿಂದ ಆಚೆ ಬರುವಾಗ ಇವರ ಕಣ್ಣೆದುರಲ್ಲಿ ಚೆಲುವೆ ಹಾದು ಹೋದರು.
ಅವರೇ ಸುನೀತಾ.
ಕೆಲವುದಿನಗಳಲ್ಲಿಯೇ ಜಯಪ್ರಕಾಶ್ ಮತ್ತು ಸುನೀತಾ ಆತ್ಮೀಯರಾದರು. ಒಂದು ದಿನ ಸುನೀತಾ ಬೇರೊಬ್ಬರ ಜೊತೆ ತಿರುಗಾಡುತ್ತಿದ್ದುದನ್ನು ನೋಡಿದ ಜಯಪ್ರಕಾಶ್ ಅವರಿಗೆ ಸಹಿಸಲಾಗಲಿಲ್ಲ.
ಸುನೀತಾ ಜೊತೆ ಮಾತನಾಡುವುದನ್ನೇ ಬಿಟ್ಟರು. ಮತ್ತೆ ಹೆಚ್ಚು ಕಡಿಮೆ 2 ವರ್ಷಗಳ ಕಾಲ ಇಬ್ಬರು ಮಾತಾಡಲೇ ಇಲ್ಲ. ಕಾಂಟೆಕ್ಟ್ ಕೂಡ ತಪ್ಪಿ ಹೋಯ್ತು.
2007ರಲ್ಲಿ ಜಯಪ್ರಕಾಶ್ ಅವರ ಹುಟ್ಟುಹಬ್ಬದ ದಿನ ಸುನೀತಾ ಕಾಲ್ ಮಾಡಿ ವಿಶ್ ಮಾಡಿದ್ರು! ಅವತ್ತಿಂದ ಅಪರೂಪಕ್ಕೆ ಮಾತನಾಡುತ್ತಿದ್ದರು.
ಹೀಗಿರುವಾಗ 2011ರಲ್ಲಿ ಇಬ್ಬರ ಮ್ಯೂಚ್ಯೂಯಲ್ ಫ್ರೆಂಡ್ ಒಬ್ಬರು ಕರೆ ಮಾಡಿ ಕೊಯಂಬತ್ತೂರಲ್ಲಿದ್ದಾಗ ಅಪಘಾತವಾಗಿದೆ ಎಂದು ತಿಳಿಸಿದ. ಆಗ ಆಕೆಯನ್ನು ಭೇಟಿಯಾಗಬೇಕು ಎಂದೆನಿಸಿದರೂ ಸಣ್ಣಪುಟ್ಟ ಗಾಯಗಳಾಗಿರಬೇಕು ಎಂದು ಸುಮ್ಮನಿದ್ದರು.
ಆದರೆ, ಅವರ ಮುಖ ಜಜ್ಜಿ ಹೋಗಿದೆ, ಹಲ್ಲುಗಳಿಲ್ಲ ಎಂಬುದು ಗೊತ್ತಾಗಿದ್ದು ಅವರನ್ನು ಭೇಟಿಯಾದಾಗಲೆ! ಅಪಘಾತದಿಂದ ಗಾಯಗೊಂಡಿದ್ದ ಸುನೀತಾ ಹೆಚ್ಚು ಕಡಿಮೆ 90 ವರ್ಷದ ಮುದುಕಿಯಂತೆ ಕಾಣ್ತಾ ಇದ್ರು.
ಅವರನ್ನು ನೋಡಿದ ಜಯಪ್ರಕಾಶ್ ಅವರಿಗೆ ಅಳು ತಡೆದುಕೊಳ್ಳಲಾಗಲಿಲ್ಲ. ಅವತ್ತೇ ಅವರಿಗೆ ಗೊತ್ತಾಗಿದ್ದು, ತಾನು ಸುನೀತಾ ಅವರನ್ನು ಪ್ರೀತಿಸ್ತಾ ಇದ್ದೀನಿ ಅಂತ. ತಡಮಾಡದೆ ಸುನೀತಾ ಬಳಿ ಪ್ರೀತಿ ನಿವೇಧಿಸಿಕೊಂಡರು.
ತಂದೆ ಕೂಡ ಸಪೋರ್ಟ್ ಮಾಡಿದರು. ಬಳಿಕ ತಾಯಿಯ ಒಪ್ಪಿಗೆಯನ್ನೂ ಪಡೆದು ಜಯಪ್ರಕಾಶ್ ಸುನೀತಾರನ್ನು ಮದುವೆಯಾದ್ರು. ಸಾಕಷ್ಟು ಜನ ಈಕೆಯನ್ನೇಕೆ ಮದುವೆ ಆಗ್ತೀಯಾ ಅಂತ ಪ್ರಶ್ನೆ ಮಾಡಿದ್ರು. ಅದಕ್ಕೆ ಜಯಪ್ರಕಾಶ್ ಕಿವಿಗೊಡಲಿಲ್ಲ.
ನೀನು ಮದುವೆ ಆಗಬೇಡ. `ನಿನ್ನ ಮಕ್ಕಳಿಗೆ ನಿನ್ನರೀತಿಯ ಮುಖವೇ ಬರುತ್ತೆ. ಮಕ್ಕಳನ್ನು ಮಾಡಿಕೊಳ್ಳಬೇಡ’ಎಂದು ಕೆಲವರು ಸುನೀತಾ ಅವರಿಗೆ ಬೇಡದ ಉಪದೇಶ ಮಾಡಿದರು. ಇದ್ಯಾವವುದಕ್ಕೂ ಜಯಪ್ರಕಾಶ್, ಸುನೀತಾ ತಲೆಕೆಡಿಸಿಕೊಳ್ಳಲಿಲ್ಲ. ಇವತ್ತು ಇಬ್ಬರು ಪುಟ್ಟಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದಾರೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882