ಆನೆ – ಮೊಲ ಹಗ್ಗಜಗ್ಗಾಟ ಮೊಲಕ್ಕೆ ಜಯ.! ಅದ್ಹೇಗೆ ಓದಿ
ಆನೆಯ ಗತ್ತು
ಒಂದು ಕಾಡಿನಲ್ಲಿ ಮದಭರಿತ ಆನೆ ಇತ್ತು. ಅದಕ್ಕೆ ಬಹಳಷ್ಟು ಜಂಬವೇ ತುಂಬಿತ್ತು. ಕಾಡಿನ ಇತರೆಲ್ಲ ಪ್ರಾಣಿಗಳು ಅದರ ಜಂಬವನ್ನು ಮುರಿಯಲೇಬೇಕೆಂದು ಪಣ ತೊಟ್ಟವು. ಅದರ ಪ್ರಕಾರ ಮೊಲರಾಯ ಆನೆಯ ಮುಂದೆ ಆಚಿಂದೀಚೆಗೆ ಓಡಾಡಲು ಶುರು ಮಾಡಿದ. ಆಗ ಆನೆಗೆ ಕೋಪ ನೆತ್ತಿಗೇರಿತು. ನನ್ನ ಜಾಗದಲ್ಲಿ ನೀನ್ಯಾಕೆ ಓಡಾಡೋದು ? ಎಂದೇ ಕೂಗಾಡಿತು.
ಮೋಲ ಹೇಳಿತು ನಿನಗೇನೇ ಒಂದು ಸವಾಲು ಹಾಕಲು ಬಂದಿರುವೆ. ನೀನೇ ಬಲಶಾಲಿ ಅಂತಿದೀಯಾ. ನಿನಗಿಂತ ನಾನೇ ಬಲಶಾಲಿ ಎಂದು ಹೇಳೋಕೆ ಬಂದೆ ಎಂದೇ ಬಿಟ್ಟಿತು. ಆನೆಗೆ ನಗು ತಡೆಯಲಿಕ್ಕಾಗಲಿಲ್ಲ .
ಬಿದ್ದು ಬಿದ್ದು ನಗುತ್ತಲೇ ಏನೋ ಮೊಲರಾಯ, ಚೋಟುದ್ದ ಇದ್ದೀಯಾ … ಸವಾಲು ಹಾಕುತ್ತಿದ್ದೀಯಾ ? ಎಂದಿತು. ಆಗ ಮೊಲ ಬಿಡದೆ ಹೇಳಿತು ಕಾಡಿನ ಎಲ್ಲ ಪ್ರಾಣಿಗಳನ್ನು ಕರೆಯೋಣ. ಒಂದು ಹಗ್ಗದ ಒಂದು ಕಡೆ ನಾನು, ಇನ್ನೊಂದು ಕಡೆಯಿಂದ ನೀನು ಎಳೆಯೋದು. ಯಾರು ಗೆಲ್ಲುತ್ತಾರೆ ಎಂದು ಎಲ್ಲರೂ ನಿರ್ಧರಿಸಲಿ .. ಎಂದೇ ಬಿಟ್ಟಿತು.
ನಿಗದಿತಾದ ದಿನ ಪ್ರಾಣಿಗಳಲ್ಲಿ ಸೇರಿ ಆನೆ ಸೂಂಡಿಲಿಗೆ ಹಗ್ಗದ ಒಂದು ತುದಿ ಕಟ್ಟಿದವು. ಇನ್ನೊಂದು ತುದಿಯನ್ನು ಮೊಲದ ಕಾಲಿಗೆ ಕಟ್ಟಿದವು . ಮೊಲ ಕುಪ್ಪಳಿಸಿ ಮೊದೆಗಳ ಹಿಂದೆ ಹೋಯ್ತು. ಕೂಡಲೇ ಹಗ್ಗ ಬಿಚ್ಚಿ ತುದಿಯನ್ನು ದೊಡ್ಡ ಮರದ ಕಾಂಡಕ್ಕೆ ಕಟ್ಟಲಾಯಿತು. ಪ್ರಾಣಿಗಳು ‘ರೆಡಿ’ ಎಂದೊಡನೆ ಆನೆ ಜೋರಾಗಿ ಹಗ್ಗ ಎಳೆಯಿತು.
ಏನು ಮಾಡಿದರೂ ಹಗ್ಗ ಜಗ್ಗಲಿಲ್ಲ. ಪ್ರಾಣಿಗಳೆಲ್ಲ ಸೇರಿ ಹಗ್ಗವನ್ನು ಬಲವಾಗಿ ಜಗ್ಗಿದವು. ಸಾಕಾಗಿ ನಿಂತಿದ್ದ ಆನೆಯೇ ‘ದುಡುಂ’ ಎಂದು ಮುಂದೆ ಬಂತಾಗ ! ನ್ಯಾಯ ಕೊಡೋಕೆ ನಿಂತ ಪ್ರಾಣಿಗಳು ಮೊಲವೇ ಗೆದ್ದ ಬಗ್ಗೆ ತೀರ್ಮಾನಿಸಿದವು.
ಹಗ್ಗವನ್ನು ಮತ್ತೆ ಕಟ್ಟಿಸಿಕೊಂಡಿದ್ದ ಮೊಲ ಕುಪ್ಪಳಿಸಿ ಪೊದೆಯಿಂದ ಹೊರಗೆ ಬಂದು ಆನೆ ಮಾವಾ, ಎಂಥ ಬಲವಪ್ಪಾ ನಿನ್ನದು …. ಎನ್ನುತ್ತಿದ್ದಂತೆ ಇನ್ನೆಂದೂ ಗತ್ತು ತೋರಿಸೋಲ್ಲ ಕಣೋ ‘ ಎಂದು ಆನೆಯೂ ತಣ್ಣಗಾಯಿತು.
ನೀತಿ :– ಬಗ್ಗಿದವರಿಗೆ ಗುದ್ದು ಜಾಸ್ತಿ ಎಂಬ ಗಾದೆ ಮರೆಯಬಾರದು. ಮನುಷ್ಯನಿಗೆ ಅಹಂಕಾರ ಇರಬಾರದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.