ಅಮೇರಿಕಾ ಅದ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಶ್ವೇತಭವನದಲ್ಲಿ ಮೊದಲ ದೀಪಾವಳಿ!
ದೀಪಾವಳಿ ಆಚರಣೆ ವೇಳೆ ನರೇಂದ್ರ ಮೋದಿ ನೆನೆದು ಅಮೇರಿಕಾ ಅದ್ಯಕ್ಷರು ಹೇಳಿದ್ದೇನು!
ವಾಷಿಂಗ್ಟನ್: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ನಗರದ ಶ್ವೇತಭವನದಲ್ಲಿ ಇಂದು ದೀಪ ಬೆಳಗಿಸುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ. ಆ ಮೂಲಕ ಹಿಂದಿನಿಂದ ನಡೆದು ಬಂದಿರುವ ಸಾಂಪ್ರದಾಯಿಕ ಆಚರಣೆಯನ್ನು ಟ್ರಂಪ್ ಕೂಡ ಮುಂದುವರೆಸಿದ್ದಾರೆ. ಅನಿವಾಸಿ ಭಾರತೀಯರನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿದ್ದ ಟ್ರಂಪ್ ಭಾರತೀಯರೊಂದಿಗೆ ವಿಶೇಷ ದೀಪಾವಳಿ ಆಚರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಸಹ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಮದ್ಯೆ ಗಟ್ಟಿಯಾದ ಉತ್ತಮ ಬಾಂಧವ್ಯ ಇದೆ ಎಂದಿದ್ದಾರೆ. ಅಲ್ಲದೆ ಭಾರತೀಯ ಸಮುದಾಯವನ್ನು, ಸಾಂಪ್ರದಾಯಿಕ ಆಚರಣೆಗಳನ್ನು ನಾನು ಗೌರವಿಸುತ್ತೇನೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಡು ಭಾರತ. ವಿಜ್ಞಾನ, ತಂತ್ರಜ್ಞಾನ, ಉದ್ಯಮ ಕ್ಷೇತ್ರ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಅಸಾಮಾನ್ಯ ಕೊಡುಗೆ ನೀಡುತ್ತಿರುವ ಭಾರತೀಯ-ಅಮೆರಿಕನ್ನರ ಕೊಡುಗೆ ವರ್ಣಿಸಲಸಾಧ್ಯವಾದುದು ಎಂದಿದ್ದಾರೆ.
ಭಾರತೀಯ ಅಮೆರಿಕನ್ ಸದಸ್ಯ ಹಾಗೂ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲಿ, ಮೇಡಿಕೇರ್ಮತ್ ಮೆಡಿಕೇಡ್ ಸೇವಾ ಕೇಂದ್ರದ ಮುಖ್ಯಸ್ಥೆಯಾಗಿರುವ ಸೀಮಾ ವರ್ಮಾ ಸೇರಿದಂತೆ ಇತರೆ ಗಣ್ಯರು ವೈಟ್ ಹೌಸ್ ನಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.