ಪ್ರಮುಖ ಸುದ್ದಿ
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು ಯಾಕೆ ಗೊತ್ತಾ.? – ಸಿಟಿ ರವಿ

ಕಪಾಲಿ ಬೆಟ್ಟ ಪರಿವರ್ತಿಸಿದ ಕಾರಣ ಕೆಪಿಸಿಸಿ ಗಿಫ್ಟ್ – ಸಿಟಿ ರವಿ ಟಾಂಗ್
ಸುವರ್ಣಸೌಧಃ ಮತಾಂತರ ನಿಷೇಧ ಕಾಯ್ದೆ ಮಂಡನೆ ಹಿನ್ನೆಲೆ ವಿರೋಧ ವ್ಯಕ್ತ ಪಡಿಸಿದ ಡಿಕೆ ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ,
ಡಿಕೆ ಶಿವಕುಮಾರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿರುವುದೇ ಸೋನಿಯಾಗಾಂಧಿ ಅವರನ್ನು ಓಲೈಸಿರುವದರಿಂದ, ಕಪಾಲಿ ಬೆಟ್ಟವನ್ನು ಪರಿವರ್ತಿಸಿ ಕ್ರೈಸ್ತ ಸಮುದಾಯಕ್ಕೆ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿರುವದು.
ವಿಪಕ್ಷ ನಾಯಕರು ಅಷ್ಟೆ ಸೋನಿಯಾಗಾಂಧಿಯವರ ಮನ ಗೆಲ್ಲುವದಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ವಿರೋಧ ವ್ಯಕ್ತಪಡಿಸುತ್ತಾರೆ. ಸಭಾತ್ಯಾಗ ಮಾಡ್ತಾರೆ ಅಷ್ಟೆ ಎಂದು ವಾಗ್ದಾಳಿ ನಡೆಸಿದರು.