ಪ್ರಮುಖ ಸುದ್ದಿ
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ.! ಐಟಿ ದಾಳಿ ಬಳಿಕ ಖರಿದಿಸಿದ ಮನೆ
ದೆಹಲಿಃ ಇತ್ತೀಚೆಗೆ ಖರೀದಿ ಮಾಡಿರುವ ಡಿಕೆಶಿ ಮನೆ ಮೇಲೆ ಇದೀಗ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಐಟಿ, ಇಡಿ ಆಯ್ತು ಈಗ ಸಿಬಿಐ ದಾಳಿ ನಡೆದಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ ಸಂಕಷ್ಟ ಇನ್ನೂ ಮುಗಿದಿಲ್ಲ. ಐಟಿ ರೇಡ್ ನಡೆದಾದ ಮೇಲೆಯೇ ದೆಹಲಿಯ ಸಫ್ತರ್ ಜಂಗ್ ಬಡಾವಣೆಯಲ್ಲಿ ಮನೆ ಖರೀದಿ ಮಾಡಲಾಗಿತ್ತು ಎಂದು ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ ಸಹ ಸ್ಪಷ್ಠನೆ ನೀಡಿದ್ದಾರೆ.
ಐಟಿ ರೇಡ್ ನಂತರ ಖರೀದಿಸಿರುವ ಈ ಮನೆ ಮೇಲೆ ಇಂದು ಸಿಬಿಐ ದಾಳಿ ನಡೆಸಿದ್ದು, ಸೂಕ್ತ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ಡಿಕೆಶಿಗೆ ಈಗ ಸಿಬಿಐ ಸಂಕಷ್ಟ ಶುರುವಾಗಿದೆ.