ಬೀದಿಗೆ ಇಳಿಸಿದವರಿಗೂ ಥ್ಯಾಂಕ್ಸ್, ಇಳಿದವರಿಗೂ ಥ್ಯಾಂಕ್ಸ್ – ಡಾ.ರವೀಂದ್ರ
ಹೋರಾಟಕ್ಕಿಳಿಯಲು ಆರೋಗ್ಯ ಸಚಿವ ರಮೇಶಕುಮಾರ ಅವರೇ ಕಾರಣ
ಖಾಸಗಿ ವೈದ್ಯರ ಅನಿರ್ಧಿಷ್ಟ ಮುಷ್ಕರ ರಾಜ್ಯಾದಾದ್ಯಂತ ರೋಗಿಗಳ ಪರದಾಟ
ಬೆಳಗಾವಿಃ ಸರ್ಕಾರ ಖಾಸಗಿ ವೈದ್ಯರನ್ನು ಒಕ್ಕಲೆಬಿಸ್ಸುವ ಹಿನ್ನೆಲೆಯಲ್ಲಿ ಕುಂದು ಕೊರತೆ ಸಮಿತಿ ರಚನೆಗೆ ಮುಂದಾಗಿದೆ. ಈ ಸಮಿತಿಯಿಂದ ಖಾಸಗಿ ವೈದ್ಯರಿಗೆ ತೊಂದರೆಯಾಗಲಿದೆ. ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಐಎಂಎ ರಾಜಧ್ಯಕ್ಷ ಡಾ.ರವೀಂದ್ರ ತಿಳಿಸಿದ್ದಾರೆ.
ಖಾಸಗಿ ವೈದ್ಯರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಆಸ್ಪತ್ರೆ ನಿಯಂತ್ರಣಕ್ಕೆ ತರಲು ಉದ್ದೇಶಿಸಿರುವ ಕುಂದು ಕೊರತೆ ಸಮಿತಿ ಜಾರಿಗೆ ತಂದಲ್ಲಿ, ರೋಗಿಗಳಿಗೂ ಸೇರಿದಂತೆ ಚಿಕಿತ್ಸೆ ನೀಡಲು ನಮಗೂ ಭಯ ಉಂಟಾಗುತ್ತಿದೆ. ಇದರಿಂದ ಇಬ್ಬರಿಗೂ ತೊಂದರೆಯಾಗಲಿದೆ.
ಆರೋಗ್ಯ ಸಚಿವರು ಸಿಕ್ಕ ಸಿಕ್ಕ ಕಡೆ ನಾನೇನು ಕೊಲೆ ಗಡುಕಾನಾ ಎಂದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ವೈದ್ಯರ ಮಕ್ಕಳು ಕೇಳುತ್ತಿದ್ದಾರೆ.? ಅಮ್ಮ ನೀವು ಸುಲಿಗೆ ಮಾಡುತ್ತೀರಾ.? ಕಳ್ಳತನ ಮಾಡುತ್ತೀರಾ..? ಎಂದು ಎಲ್ಲರಿಗೂ ಮಾನವೀಯತೆ, ಕರುಣೆ ಎಂಬುದಿದೆ. ಜನರಲ್ಲಿ ತಲೆಯಲ್ಲಿ ಯಾಕೇ ಹುಳಿ ಹಿಂಡುತ್ತೀರಾ.
ನಿಮ್ಮ ಸ್ವಾರ್ಥಕ್ಕೆ ಈ ಕಾಯ್ದೆಯನ್ನು ತರುತ್ತಿದ್ದೀರಿ. ತೊಂದರೆಯಾದರೆ ಆ ಬಗ್ಗೆ ಜಾಗೃತಿ ಮೂಡಿಸಿ ಅದು ಬಿಟ್ಟು ಕಾನೂನು ಮೂಲಕ ಕಟ್ಟಿ ಹಾಕ್ತೀವಿ ಅಂದ್ರೆ ಆಗಲ್ಲ. ಯಾರ ಮಾತಿಗೂ ವೈದ್ಯರು ಕಿವಿಗೊಡಬೇಡಿ. ಯಾವುದಕ್ಕೂ ವ್ಯತ್ಯಾಸ ಮಾಡ್ಕೋಬೇಡಿ.
ರೋಗಿಗಳಿಗೆ ತೊಂದರೆ ಕೊಡದಂತೆ ನೋಡಿಕೊಳ್ಳೋಣ. ಇವತ್ತು ನಾಳೆ ಬಗೆಹರಿಯಲಿದೆ. ಪುನಃ ಸೇವೆಗೆ ಹಾಜರಾಗುವ. ಆರೋಗ್ಯ ಸಚಿವರಿಗೆ ದೇವರು ಒಳ್ಳೆ ಬುದ್ಧ ಕೊಡಲಿ. ಸಚಿವರು ಪ್ರಮೋಕಿಂಗ್ ಮೆಸೇಜ್ ಕೊಡದಿದ್ದರೆ ಇವತ್ತು ಹೋರಾಟ ಮಾಡುವ ಅಗತ್ಯವಿರಲಿಲ್ಲ. ಸಿಎಂ ಎಲ್ಲವನ್ನು ಗಮನಸುತ್ತಿದ್ದಾರೆ, ಸಮಸ್ಯೆಗಳನ್ನ ಬಗ್ಗೆ ಹರಿಸ್ತಾರೆ ಎಂಬ ನಂಬಿಕೆ ನನಗಿದೆ. ಬೀದಿಗಳಿಯುವಂತೆ ಮಾಡಿದವರಿಗೂ ಮತ್ತು ಬೀದಿಗಳಿದವರಿಗೂ ಥ್ಯಾಂಕ್ಸ್ ಹೇಳಿ ತಮ್ಮ ಮಾತಿಗೆ ವಿರಾಮವಿಟ್ಟಿದ್ದಾರೆ.
ಖಾಸಗಿ ವೈದ್ಯರ ಮುಷ್ಕರದಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತ
ಕಳೆದ ನಾಲ್ಕು ದಿನಗಳಿಂದ ಸರ್ಕಾರ ಮತ್ತು ಖಾಸಗಿ ವೈದ್ಯರ ಮಧ್ಯೆ ಹಗ್ಗ ಜಗ್ಗಾಟ ನಡೆದಿದ್ದು, ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಸು ನೀಗುತ್ತಿದ್ದಾರೆ. ರಾಜ್ಯದಾಧ್ಯಂತ ಎಷ್ಟು ಜನ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಅಸುನೀಗಿದ್ದಾರೆ ಎಂಬು ಕುರಿತು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸುತ್ತಿಲ್ಲ.
ಮಾಹಿತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿಯೇ 20 ಕ್ಕೂ ಹೆಚ್ಚು ಜನ ಚಿಕಿತ್ಸೆ ದೊರೆಯದೆ ಮೃತಪಟ್ಟ ವರದಿಯಾಗಿದೆ. ಕಲಬುರ್ಗಿ, ಯಾದಗಿರಿ ಜಿಲ್ಲೆಯಲ್ಲೂ ಸಾಕಷ್ಟು ಜನ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಸೂಕ್ತ ಚಿಕಿತ್ಸೆಗೆ ವೈದ್ಯರು ದೊರೆಯದ ಕಾರಣ ಓರ್ವ ವ್ಯಕ್ತಿ ಮರಣ ಹೊಂದಿದ ಘಟನೆಯೂ ಇಂದು ಜರುಗಿದೆ.
ಅಲ್ಲದೆ ಯಾದಗಿರಿ, ಶಹಾಪುರ ಪಟ್ಟಣಗಳಲ್ಲೂ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದ್ದು, ರಕ್ತ ಪರೀಕ್ಷೆಗಾಗಿ ಸೇರಿದಂತೆ ಚಿಕಿತ್ಸೆ ದೊರೆಯದೇ ಗ್ರಾಮೀಣ ಭಾಘದಿಂದ ಬಂದ ರೈತರು ಪರದಾಡುತ್ತಿರುವುದು ಕಂಡು ಬರುತ್ತಿದೆ. ಬಾಗಲಕೋಟೆಯಲ್ಲಿ ಲಕ್ಷ್ಮೀ ಪತ್ತಾರ ಎಂಬ ಗರ್ಭೀನಿ ಮಹಿಳೆ ಹೆರಿಗೆ ಮಾಡಲು ಒಪ್ಪದ ವೈದ್ಯರಿಂದಾಗಿ, ಹೊಟ್ಟೆಯಲ್ಲಿಯೇ ಮಗು ಅಸುನೀಗಿದ ಘಟನೆಯೂ ಜರುಗಿದೆ. ಪ್ರಸ್ತುತ ತಾಯಿಯ ಜೀವನಾದರೂ ಉಳಿಸಿಕೊಳ್ಳಲು ಪಾಲಕರು, ಸಂಬಂಧಿಕರು ಪರದಾಡುತ್ತಿದ್ದಾರೆ. ಮನುಕಲುಕುವಂತ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಕೂಡಲೇ ರಾಜ್ಯ ಸರ್ಕಾರ ಸಮಸ್ಯೆ ಗಂಭೀರವಾಗುತ್ತಿರುವದನ್ನು ಮನಗಂಡು ಸಮರ್ಪಕ ವ್ಯವಸ್ಥೆಗೆ ಮುಂದಾಗಬೇಕು. ಸಿಎಂ ಸಿದ್ರಾಮಯ್ಯನವರು ತಮ್ಮ ಜವಬ್ದಾರಿ ಅರಿತು ಸಮಸ್ಯೆ ಬಗೆ ಹರಿಸಲು ಮುಂದಾಗುವುದು ಒಳಿತು. ಇಲ್ಲವಾದಲಲ್ಲಿ ಸಾರ್ವಜನಿಕರು ರಸ್ತೆಗಿಳಿದು ಸರ್ಕಾರಕ್ಕೆ ಪಾಠ ಕಲಿಸುವ ಸಂದರ್ಭ ಬಂದರೂ ಅಚ್ಚರಿ ಪಡಬೇಕಿಲ್ಲ.
ಶಹಾಪುರ, ಯಾದಗಿರಿಯಲ್ಲೂ ರೋಗಿಗಳು ಮಾಧ್ಯಮದವರಿಗೆ ಫೋನಾಯಿಸಿ ತಮ್ಮ ಸಮಸ್ಯೆ ಕುರಿತು ನೋವು ತೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸಮಸ್ಯೆಗೆ ಪರಿಹಾರ ಹೇಗೆ ಎಂಬುದನ್ನು ಸಹ ವಿಚಾರಿಸಿದ್ದಾರೆ. ಹಲವಾರು ಜನ ತಮ್ಮ ಮಕ್ಕಳ ಚಿಕಿತ್ಸೆಗಾಗಿ ಪಟ್ಟಣ ಸೇರಿದಂತೆ ಖಾಸಗಿ ವೈದ್ಯರ ಮನೆ ಮನೆಗೆ ತೆರಳುತ್ತಿರುವುದು ಕಂಡು ಬಂದಿದೆ.
ಹಲವಡೆ ಖಾಸಗಿ ವೈದ್ಯರು ಆಸ್ಪತ್ರೆ ಬಂದಿಟ್ಟಿದ್ದರೂ ಮಾನವೀಯತೆ ಹಿನ್ನೆಲೆಯಲ್ಲಿ ಮನೆಗೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಿ ಔಷಧಿ ಹೊರಗಡೆ ಪಡೆಯಲು ತಿಳಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕೆಲ ಮೆಡಿಕಲ್ ನವರು ಸಹ ಸ್ವಲ್ಪ ಜನರ ಚಕಿತ್ಸೆಗೆ ಬೇಕಾದ ಔಷಧಿಗಳನ್ನು ನೀಡುತ್ತಿದ್ದಾರೆ. ಕೆಲವೆಡ ಔಷಧಿ ಅಂಗಡಿಗಳು ತೆರೆದಿರುವ ಕಾರಣ ರೋಗಿಗಳಿಗೆ ಒಂದಿಷ್ಟು ಅನುಕೂಲವು ಆಗಿದೆ.