ವಿನಯವಾಣಿಯೊಂದಿಗೆ ಹೋಳಿ ಕುರಿತು ಅಭಿಪ್ರಾಯ ಹಂಚಿಕೊಂಡ ಯುವಕರು
ಬಣ್ಣದಾಟದಲ್ಲಿ ತೊಡಗಿಸಿಕೊಂಡ ಯುವಕರ ಮಾತು...
ಪುರಾಣ ಕಥನಗಳ ಸಂದೇಶ ಮೂಲಕ ನಮ್ಮ ದೇಶದಲ್ಲಿ ಹೋಳಿ ಅನಾದಿಕಾಲದಿಂದಲೂ ಆಚರಿಸುತ್ತಾ ಬರಲಾಗಿದೆ. ಹೋಳಿ ಹಬ್ಬದಂದು ಕೆಟ್ಟದ್ದನ್ನು ಸುಟ್ಟು ಬಿಡುವುದು ಅಲ್ಲದೆ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು ಹಾಕುವುದು. ಮತ್ತು ಸದಾಚಾರವನ್ನು ರೂಢಿಸಿಕೊಳ್ಳುವುದು. ದುಷ್ಟ ಶಕ್ತಿಗಳ ನಿರ್ಣಾಮದ ದ್ಯೋತಕವಾಗಿ ಕಾಮ ದಹನ ಮಾಡಲಾಗುತ್ತದೆ.
ಎಲ್ಲರೂ ಒಂದಾಗಿ ವಿವಿಧ ಬಣ್ಣದೊಂದಿಗೆ ಮುಖ ಬಳಿಸುಕೊಂಡು ನಾವ್ಯಾರು ಎಂದು ಗುರುತಿಸದಂತೆ ಅಂದ್ರೆ ಇದರ ಅರ್ಥ ಇಲ್ಲಿ ಎಲ್ಲರೂ ಒಂದೇ ದೇವರು ನಮ್ಮನ್ನು ಮಾನವರಾಗಿ ಕಳುಹಿಸಿದ್ದಾನೆ. ನಮ್ಮ ಕರ್ತವ್ಯ ಮುಗಿದ ಮೇಲೆ ಮತ್ತೆ ವಾಪಸ್ ಅಲ್ಲಿಗೆ ಹೋಗಬೇಕು. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ. ಹೀಗಾಗಿ ಮಕ್ಕಳಲ್ಲಿ ಈ ಕುರಿತು ತಿಳಿಸುವ ಅಗತ್ಯವಿದೆ. ಬಣ್ಣದಾಟಕ್ಕೆ ಯಾವುದೇ ಧರ್ಮ ಜಾತಿ ಸೀಮಿತವಲ್ಲ.
-ರಮೇಶ ನಗನೂರ. ಶಹಾಪುರ.
———————————
ಹೋಳಿ ಅಂದರೆ ಕೇವಲ ಬಣ್ಣದಾಟವಲ್ಲ. ಅದು ಜಾತ್ಯಾತೀತ ತತ್ವವನ್ನು ಕಲಿಸುತ್ತದೆ. ಬೇರೆ ಬೇರೆ ಬಣ್ಣಗಳು ಒಂದಡೆ ಸೇರಿದಾಗ ಎಷ್ಟು ಸುಂದರ ಕಾಣಲಿದೆ. ಮತ್ತು ಅದರಲ್ಲಿರುವ ಮಹತ್ವ ಗಟ್ಟಿತನ ತೋರಿಸುತ್ತದೆ. ಎಲ್ಲರೂ ಬೆರೆತಾಗ ಕಳೆಯವು ಸಂಭ್ರಮದ ಕ್ಷಣ ಹೋಳಿ. ಎಲ್ಲಾ ಬಣ್ಣಗಳು ಒಂದೆ ಸಮಾನತೆಯನ್ನು ತೋರುತ್ತವೆ. ನಾವೆಲ್ಲ ಒಂದೇ ಎಂಬ ಭಾವನೆ ಪರಸ್ಪರರಲ್ಲಿ ಮೂಡಲಿದೆ.
-ಲಕ್ಷ್ಮಣ ದೇವಿನಗರ, ಶಂಕರ ಹಳಿಸಗರ ಮತ್ತು ಇತರರು.