ದೋರನಹಳ್ಳಿ ಘಟನೆಃ ಮನೆಗೆ ಭೇಟಿ ನೀಡಿದ ಜನವಾದಿ ಕೆ.ನೀಲಾ
ದುರಂತ ಸಾವಿಗೀಡಾದ ಕುಟುಂಬದ ಯಜಮಾನಿಗೆ ಸಾಂತ್ವಾನ ಹೇಳದಿ ನೀಲಾ
yadgiri, ಶಹಾಪುರಃ ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ರೈತ ಕುಟುಂಬವೊಂದು ತಮ್ಮ ಜಮೀನಿನಲ್ಲಿ ತೋಡಿಸಿದ್ದ ಕೃಷಿ ಹೊಂಡಕ್ಕೆ ಹಾರಿ ದುರಂತ ದಾವನ್ನಪ್ಪಿದ್ದರು. ದುರಂತ ಅಂತ್ಯ ಕಂಡ ಕುಟುಂಬದ ಯಜಮಾನಿ ಶರಣಮ್ಮ ಅವರನ್ನು ಬುಧವಾರ ಭೇಟಿಯಾದ ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಸಾಂತ್ವನ ಹೇಳಿದರು.
ದುರಂತ ಅಂತ್ಯದ ರೂವಾರಿ ಮೃತ ಭೀಮರಾಯ ಸುರಪುರ ಅವರ ತಾಯಿ ಶರಣಮ್ಮ ಹಾಗೂ ಮೃತನ ಸಹೋದರರು ಸೇರಿದಂತೆ ಹಿರಿಯ ಮಗಳನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.
ಅಲ್ಲದೆ ತಾಯಿ ಮತ್ತು ಈಚೆಗೆ ಮದುವೆ ಮಾಡಿಕೊಟ್ಟಿದ್ದ ಮೃತ ಭೀಮರಾಯನ ಮಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು. ಆತನ ಮಗಳನ್ನು ತವರಿಗೆ ಕರೆದು ನೋಡುವವರಾರಿಲ್ಲದೆ ಅನಾತ ಪ್ರಜ್ಞೆ ಕಾಡುತ್ತದೆ. ಕಾರಣ ಸಹೋದರ ಸಂಬಂಧಿಗಳೆಲ್ಲರೂ ಆ ಮಗಳನ್ನು ತಮ್ಮ ಸ್ವಂತ ಮಗಳಂತೆ ಕಾಣಬೇಕು ಎಂದು ತಿಳಿಸಿದರು.
ದುರ್ದೈವವಶಾತ್ ಇಡಿ ಕುಟುಂಬ ಪ್ರಾಣ ಕಳೆದುಕೊಂಡಿದೆ. ಇದು ಹೃದಯವಿದ್ರಾವಕ ಘಟನೆ. ಹೀಗಾಗಬಾರದು. ಇದು ನ್ಯಾಯವಲ್ಲ. ಸಣ್ಣ ಮಕ್ಕಳನ್ನು ತೆಗೆದುಕೊಂಡು ಆತ್ಮಹತ್ಯೆ ದಾರಿ ತುಳಿದಿರುವದು ತರವಲ್ಲ. ಅದೆಂಥದೆ ಕಷ್ಟ ಬರಲಿ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಬದುಕಿ ತೋರಬೇಕು. ಇಂತಹ ಹೀನಾಯ ಕೆಲಸಕ್ಕೆ ಯಾರೊಬ್ಬರು ಮುಂದಾಗಬಾರದು ಎಂದು ಮಾಧ್ಯಮದ ಮುಂದೆ ಹೇಳಿದರು. ಸಾಲಶೂಲಕ್ಕೆ ಬಲಿಯಾಗುತ್ತಿರುವ ಮುಗ್ಧ ರೈತಾಪಿ ಜನರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡ ಚನ್ನಪ್ಪ ಆನೇಗುಂದಿ, ಎಸ್.ಎಂ.ಸಾಗರ, ದಾವಲಸಾಬ ನದಾಫ್, ಮಲ್ಲಯ್ಯ ಪೋಲಂಪಲ್ಲಿ ಸೇರಿದಂತೆ ಇತರರಿದ್ದರು.