ಪ್ರಮುಖ ಸುದ್ದಿ

ಕೊರೊನಾ ನೆಪದಲ್ಲಿ ಕಾಂಗ್ರೆಸ್ ಪುನಶ್ಚೇತನ ನಿಮ್ಮ ಭ್ರಮೆ- ಸುಧಾಕರ ವಾಗ್ದಾಳಿ

ಪ್ರಸ್ತಾವನೆ, ಖರ್ಚು,  ಅನುಮೋದನೆ ವ್ಯತ್ಯಾಸ ಗೊತ್ತಿಲ್ಲವೆ.?

ಬೆಂಗಳೂರು: ಕೊರೋನಾ ಹಾವಳಿಗೆ ಇಡಿ ಜಗತ್ತೇ ತತ್ತರಿಸಿರುವಾಗ ಮತ್ತು ಇಡಿ ವಿಶ್ವ ಒಂದಾಗಿ ಹೋರಾಟ ನಡೆಸುತ್ತಿದ್ದರೆ, ಇಲ್ಲಿನ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.

ಕೋವಿಡ್ ಸಂಕಷ್ಟದಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಸಂಪೂಣ೵ ಸುಳ್ಳು ರಾಜ್ಯ ದ ಜನ ನಿಮ್ಮನ್ನು ಕ್ಷಮಿಸುವದಿಲ್ಲ. 13-14 ಆಯವ್ಯಯ ಮಂಡಿಸಿರುವ ಸಿದ್ರಾಮಯ್ಯನವರಿಗೆ ಪ್ರಸ್ತಾವನೆಗೂ, ಖರ್ಚುಗೂ ಮತ್ತು ಅನುಮೋದನೆಗೂ ವ್ಯತ್ಯಾಸ ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಕುಟುಕಿದರು.

ವೈದ್ಯಕೀಯ ಶಿಕ್ಷಣ ಇಲಾಖೆಗೆ 800 ಕೋಟಿ ರೂ. ಇಲಾಖೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಬಂದಿದೆ. ಅದಕ್ಕೆ ಅನುಮೋದನೆ ಇನ್ನೂ ದೊರೆತಿಲ್ಲ. ಸರ್ಕಾರ ಡ್ರ್ಯಾಗರ್ ಕಂಪನಿಯ ವೆಂಟಿಲೇಟರ್ ಖರೀದಿಸಿದೆ. ಅದು ವಿಶ್ವದಲ್ಲೇ ಅತ್ಯುತ್ತಮ ಬ್ರಾಂಡ್. ನಿಮ್ಮ ಮನೆಯಲ್ಲೇ ವೈದ್ಯರಿದ್ದಾರೆ. ಬೇರೆ ತನಿಖೆಯ ಅಗತ್ಯವಿಲ್ಲ ಅವರನ್ನೇ ಕೇಳಿದರೂ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ಕೊರೋನಾ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪುನಶ್ಚೇತನ ಮಾಡುತ್ತೇವೆ ಅಂತ ಉದ್ದೇಶ ಇದ್ದರೆ ಅದು ನಿಮ್ಮ ಭ್ರಮೆ. ಜನ ಎಲ್ಲಾ ಗಮನಿಸುತ್ತಿದ್ದಾರೆ. ನಿಮ್ಮನ್ನು ಕ್ಷಮಿಸುವುದಿಲ್ಲ. ಕಳೆದ 120 ದಿನಗಳಿಂದ ಯಾವ ರಜೆಯನ್ನೂ ತೆಗೆದುಕೊಳ್ಳದೆ, ಮನೆಯಲ್ಲಿ ಕೊರೋನಾ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಈ ರೀತಿ ಟೀಕಿಸುವುದು ಸರಿಯಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button