Homeಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಊಟವಾದ ತಕ್ಷಣ ನೀರು ಕುಡಿಬಾರ್ದು ಅಂತಾರೆ ತಜ್ಞರು; ಇದಕ್ಕೆ ಕಾರಣವೇನು, ಊಟದ ಹೊತ್ತು ನೀರು ಕುಡಿಯುವ ಕ್ರಮ ಹೇಗಿರಬೇಕು ತಿಳಿಯಿರಿ

ನಮ್ಮ ದೇಹಕ್ಕೆ ನೀರು ಅತ್ಯಗತ್ಯ, ತಿಂದ ಆಹಾರ ಜೀರ್ಣವಾಗಲು ನೀರು ಕುಡಿಯುವುದು ಅವಶ್ಯ. ಹಾಗಾಗಿ ಊಟ ಅಥವಾ ತಿಂಡಿ ತಿಂದ ನಂತರ ನಾವು ನೀರು ಕುಡಿಯುತ್ತೇವೆ. ಆದರೆ ಆಯುರ್ವೇದದ ಪ್ರಕಾರ ನೀರು ಕುಡಿಯುವುದಕ್ಕೂ ಸಮಯವಿದೆ. ಆ ಸಮಯದಲ್ಲಿ ಮಾತ್ರ ನೀರು ಕುಡಿಯಬೇಕು. ಅದರಲ್ಲೂ ಊಟ ತಿಂಡಿ ತಿನ್ನುವ ಮೊದಲು ಹಾಗೂ ನಂತರ ನೀರು ಕುಡಿಯಲು ನಿರ್ದಿಷ್ಟ ಸಮಯವನ್ನು ಪಾಲಿಸಲೇಬೇಕು. ನೀರು ಕುಡಿಯುವುದರಿಂದ ನಮ್ಮ ದೇಹ ಹೈಡ್ರೇಟ್ ಆಗಿರುತ್ತದೆ. ದೇಹದ ಎಲ್ಲಾ ಅಂಗಾಂಗಳು ಚೆನ್ನಾಗಿ ಕಾರ್ಯನಿರ್ವಹಿಸಲು ನೀರು ಅತೀ ಅಗತ್ಯ. ಅದೇನೆ ಇದ್ದರೂ ಆಯುರ್ವೇದದ ಪ್ರಕಾರ ಊಟ ಅಥವಾ ಯಾವುದೇ ಆಹಾರ ಸೇವನೆಯ ನಂತರ ನೀರು ಕುಡಿಯುವುದು ಸರಿಯಲ್ಲ. ಹಾಗಾದರೆ ಇದಕ್ಕೆ ಕಾರಣವೇನು ನೋಡಿ.

ಊಟದ ನಂತರ ನೀರು ಕುಡಿಯಬಾರದು ಏಕೆ?

ಆಯುರ್ವೇದದ ಪ್ರಕಾರ, ಆಹಾರವನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ರಸ ದುರ್ಬಲವಾಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಇದು ಸತ್ಯ ಎಂದು ವಿಜ್ಞಾನವೂ ಹೇಳುತ್ತದೆ. ತಿಂದ ತಕ್ಷಣ ನೀರು ಕುಡಿದರೆ ಬೇಗ ತೂಕ ಹೆಚ್ಚುತ್ತದೆ ಮತ್ತು ಬೊಜ್ಜು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ತೆಗೆದುಕೊಳ್ಳುವ ನೈಸರ್ಗಿಕ ಸಮಯವನ್ನು ಬದಲಾಯಿಸುತ್ತದೆ. ಇದು ನಿರೀಕ್ಷೆಗಿಂತ ಮುಂಚೆಯೇ ಹಸಿವಾಗಲು ಕಾರಣವಾಗುತ್ತದೆ. ಆಗ ನಾವು ಅತಿಯಾಗಿ ಅಥವಾ ಬಾಯಿಗೆ ಸಿಕ್ಕಿದನ್ನೆಲಾ ತಿನ್ನುತ್ತೇವೆ. ಇದಲ್ಲದೇ ಹೊಟ್ಟೆಯುಬ್ಬರದಂತಹ ಸಮಸ್ಯೆಗಳೂ ಎದುರಾಗುತ್ತದೆ ಎನ್ನುತ್ತಾರೆ ವೈದ್ಯರು.

ಊಟದ ನಂತರ ನೀರು ಕುಡಿಯುವುದು ಜೀರ್ಣಕಾರಿ ಕಿಣ್ವಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಎದೆಯುರಿ ಸಹ ಸಂಭವಿಸಬಹುದು. ತಿಂದ ತಕ್ಷಣ ನೀರು ಕುಡಿಯುವುದರಿಂದ ಹೆಚ್ಚಿನ ಆಹಾರ ಜೀರ್ಣವಾಗದೇ ಉಳಿಯುತ್ತದೆ. ಇದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಈ ಪ್ರಕ್ರಿಯೆಯು ಇನ್ಸುಲಿನ್ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಲು ಕಾರಣವಾಗಬಹುದು. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹ ಇರುವವರು ತಿಂದ ತಕ್ಷಣ ನೀರು ಕುಡಿಯಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಒಂದೇ ಬಾರಿಗೆ ಏರಿಕೆಯಾಗಬಹುದು.

ನೀರು ಯಾವಾಗ ಕುಡಿಯಬೇಕು?

ಆಯುರ್ವೇದ ವೈದ್ಯರು ನೀರು ಕುಡಿಯಲು ಸರಿಯಾದ ಸಮಯವನ್ನು ವಿವರಿಸುತ್ತಾರೆ. ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಮತ್ತು ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಉತ್ತಮ. ಇದು ಆಹಾರವನ್ನು ಮೃದುಗೊಳಿಸುತ್ತದೆ. ಆದರೆ ತಣ್ಣೀರು ಕುಡಿಯಬೇಡಿ. ಏಕೆಂದರೆ ಅನ್ನ ತಿಂದ ತಕ್ಷಣ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ವಿಷಾಂಶ ಸಂಗ್ರಹವಾಗುವ ಸಾಧ್ಯತೆಯೂ ಇದೆ. ಆಸಿಡ್ ರಿಫ್ಲೆಕ್ಸ್‌ನಂತಹ ಸಮಸ್ಯೆಗಳೂ ಬರಬಹುದು. ಅಲ್ಲದೆ, ನೀವು ಊಟ ಮಾಡುವಾಗ ಕೆಫೀನ್ ಇರುವ ಪಾನೀಯಗಳು ಮತ್ತು ಕೂಲ್ ಡ್ರಿಂಕ್ಸ್ ಕುಡಿಯುವುದನ್ನು ನಿಲ್ಲಿಸಬೇಕು. ಊಟದಂತಹ ಬಿಸಿನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

Related Articles

Leave a Reply

Your email address will not be published. Required fields are marked *

Back to top button