ಯುಗಾದಿ ಹಬ್ಬದಲ್ಲಿ ಲಗೋರಿ ಆಡಿ ಸಂಭ್ರಮಿಸಿದ ಯುವಕರು
ದೇಶಿಯ ಸಂಸ್ಕøತಿ ಉಳಿವಿಗೆ ಸಾಕ್ಷಿಕರಿಸಿದ ಯುವಕರ ಆಟ
ಶಹಾಪುರ:ಕಲೆ ಸಂಸ್ಕøತಿಯ ತವರೂರಾದ ಭಾರತ ದೇಶದ ಪರಂಪರೆ ವೈಶಿಷ್ಟ್ಯಪೂರ್ಣವಾಗಿದ್ದು ವರ್ಷದಲ್ಲಿ ಬರುವ ಒಂದೊಂದು ಹಬ್ಬಗಳು ಹೊಸತನದ ಸಂಸ್ಕøತಿಗೆ ಮೇಲ್ಪಂಕ್ತಿಯಾಗಿದೆ. ಕೃಷಿ ಪ್ರಧಾನವಾದ ಭಾರತ ದೇಶಕ್ಕೆ ಯುಗಾದಿ ಹಬ್ಬ ಹೊಸವರ್ಷದ ಆರಂಭದ ದಿನವಾಗಿದೆ ಬೇವು-ಬೆಲ್ಲ(ಕಷ್ಟ-ಸುಖ) ಹಂಚಿಕೊಳ್ಳುವ ಹಬ್ಬ ಯುಗಾದಿ ಅತ್ಯಂತ ಮಹತ್ವ ಪೂರ್ಣವಾಗಿದೆ.
ಯುಗಾದಿ ಹಬ್ಬದ ದಿನದಂದು ನಗರದಲ್ಲಿ ಯುವಕರು ಸಂಜೆ ದೇಸಿಯ ಆಟಗಳನ್ನು ಆಡುವ ಮೂಲಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ವಿಸ್ತರಿಸಲು ಹೊರಟಿರುವುದು ಅಭಿಮಾನದ ಸಂಗತಿಯಾಗಿದೆ.
ಯುಗಾದಿ ದಿನದಂದು ಹಳಪೇಟೆಯ ಕೋಲಕಾರ ಓಣಿಯ ಯುವಕರು ಭಾರ ಎತ್ತುವ ಸ್ಪರ್ಧೆ, ಕಣ್ಣಿಗೆ ಬಟ್ಟೆಕಟ್ಟಿ ವಸ್ತುಗಳನ್ನು ಹುಡುಕುವುದು ಮತ್ತು ವಿಶೇಷವಾಗಿ ಲಗೋರಿ ಆಟಗಳನ್ನು ಆಟಗಳನ್ನು ಆಡುವ ಮೂಲಕ ಗಮನ ಸೆಳೆದರು ಅಲ್ಲದೆ ಸಂಪ್ರದಾಯ ಸಂಸ್ಕøತಿಗೆ ಉಳಿವಿಗೆ ಸಾಕ್ಷಿಯಾದರು.
ಬರಿ ಕ್ರಿಕೆಟ್ ಕಡೆ ಗಮನ ಹರಿಸುವ ಪ್ರಸ್ತುತ ಯುವಕತು ಇಂದಿಗೂ ಹಬ್ಬದ ಸಂದರ್ಭ ಹಬ್ಬದೂಟ ಸವಿದು ನಂತರ ಗುಂಪು ಗುಂಪಾಗಿ ಹಳೆ ಸಂಪ್ರದಾಯದಂತೆ ಒಗ್ಗೂಡಿ ಇಂತಹ ದೇಶಿ ಆಟಗಳನ್ನು ಆಡುವ ಮೂಲಕ ಸಂತಸಪಟ್ಟರು.
ಅಲ್ಲದೆ ಪ್ರಥಮ ಸ್ಥಾನ ಪಡೆದÀವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂತೋಷ ಕುಮಾರ ದೇಶಮುಖ, ಆನಂದ ದೇಶಮುಖ, ಗುರಣ್ಣ ಬಾದ್ಯಾಪುರ, ಭೀಮರಾಯ ಯಾಳವಾರ, ಬಂಕಟಸಿಂಗ್ ಠಾಕೋರ್, ಸುನೀಲಸಿಂಗ್ ಠಾಕೂರ್, ದೇವಪ್ಪ ಕೋಲಕಾರ, ಸಂಜೀವಪ್ಪ ಕೂಡ್ಲಗಿ, ಸುಭಾಷಚಂದ್ರ ಬಾದ್ಯಾಪುರ ಸೇರಿದಂತೆ ಇಲ್ಲಿನ ಗಜಾನನ ಯುವಕ ಮಂಡಳಿಯ ಸಮಸ್ತ ಯುವಕರು, ಓಣಿಯ ಹಿರಿಯರು ಕಿರಿಯರು ಭಾಗವಹಿಸಿ ಸಂಭ್ರಮಿಸಿದರು.