ಪ್ರಮುಖ ಸುದ್ದಿಸಂಸ್ಕೃತಿ

ಜಾನಪದ ಕಲೆ ಉಳಿವಿಗೆ ಸಹಭಾಗಿತ್ವ ಅಗತ್ಯ – ಸಗರ

ಜಾನಪದ ಕಲಾವಿದರ ಗುರುತಿಸಿ ಪ್ರೋತ್ಸಾಹಿಸಿ-ಸಗರ

yadgiri, ಶಹಾಪುರಃ ಜಾನಪದ ಅಳಿವು ಉಳಿವಿನ ಸಂಧಿಗ್ಧ ಸ್ಥಿತಿಯಲ್ಲಿ ನಾವಿದ್ದು, ಜಾನಪದ ವಿವಿಧ ಕಲೆಗಳು ಉಳಿಯಬೇಕಾದರೆ ಸರ್ವ ಸಹಭಾಗಿತ್ವ ಅಗತ್ಯವಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾರಾಯಣಾಚಾರ್ಯ ಸಗರ ತಿಳಿಸಿದರು.

ನಗರದ ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ ಯೋಗಧಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ನೂತನ ತಾಲೂಕು ಘಟಕ ಉದ್ಘಾಟನ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಹಲವಾರು ತಲೆಮಾರಿನಿಂದ ವಿವಿಧ ರೂಪದಲ್ಲಿ ಆಯಾ ಪ್ರದೇಶಗನುಗುಣವಾಗಿ ವಿಶಿಷ್ಟ ಕಲೆಗಳನ್ನು ಕಾಣಬಹುದು.

ಕಲ್ಯಾಣ ಕರ್ನಾಟ ಭಾಗದಲ್ಲಿ ಭಜನಾ ಪದ, ತತ್ವಪದ, ವಿವಿಧ ವಾದನಗಳನ್ನು ನುಡಿಸುವದು, ಮೋಹರಂ ಮತ್ತು ವಿಶಿಷ್ಠ ಸಂದರ್ಭದಲ್ಲಿ ಹಾಡುವ ಪದಗಳು, ಕೃಷಿ ಚಟುವಟಿಕೆ, ರಾಶಿ ಸಂದರ್ಭದಲ್ಲಿ ಹಾಡುವ ಪದಗಳು, ಗೀಗಿ ಪದಗಳು, ಡಪ್ಪಿನಾಟ, ನಾಟಕ, ಬೈಲಾಟ, ಡೊಳ್ಳು ಕುಣಿತ ಹೀಗೆ ಹಲವಾರು ಭಂಗಿಯ ಸಾಂಸ್ಕøತಿಕ ಕಲೆಗಳು ನಮ್ಮಲಿವೆ. ಅವುಗಳನ್ನು ಜೀವಂತವಾಗಿಡುವ ಕೆಲಸ ಆಗಬೇಕಿದೆ.

ಆ ಹಿನ್ನೆಲೆಯಲ್ಲಿ ಜಾನಪದ ಪರಿಷತ್ ಶ್ರಮಿಸುತ್ತದೆ. ಕಲಾವಿದರಿಗೆ ವೇದಿಕೆ ಕಲ್ಪಿಸಲಿದೆ. ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಿದೆ. ಅಲ್ಲದೆ ಸರ್ಕಾರಿ ಯೋಜನೆಗಳಡಿ ಅವರಿಗೆ ಮಾಸಾಶನ ಇತರೆ ಪ್ರೋತ್ಸಾಹ, ಪ್ರಶಸ್ತಿ ಕೊಡಿಸುವ ಕೆಲಸ ಮಾಡಲಿದ್ದಾರೆ. ಇದಕ್ಕೆ ಸರ್ವರ ಕೈಜೋಡಿಸಬೇಕಿದೆ. ಈ ಭಾಗದ ಕಲಾವಿದರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸಬೇಕಿದೆ. ಅಷ್ಟೊಂದು ವೈಶಿಷ್ಟ್ಯದ ಕಲೆಗಳು ರೂಪಕಗಳು ನಮ್ಮಲ್ಲಿವೆ ಎಂದರು.

ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಜಾನಪದ ಅಕಾಡೆಮಿ ಸದಸ್ಯರಾದ ಮೇಲೆ ಈ ಕುರಿತು ಸಾಕಷ್ಟು ಕೃಷಿ ಮಾಡಿದ್ದು, ಮುಂದೆಯೂ ಮಾಡಲಿದ್ದೇನೆ. ಮೈಸೂರ, ಬೆಂಗಳೂರ ಭಾಗದ ಕಲಾವಿದರು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಲು ಕಾರಣ ಅವರನ್ನು ವಿವಿಧ ರೀತಿಯಲ್ಲಿ ಪ್ರಚುರ ಪಡಿಸುತ್ತಾರಲ್ಲದೆ. ಸರ್ಕಾರಿ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕೆಲಸ ಅವರ ಕರಗತ ಮಾಡಿಕೊಂಡಿದ್ದಾರೆ.

ನಮ್ಮ ಭಾಗದ ಕಲಾವಿದರು ಅವರಿಗಿಂತ ಶ್ರೇಷ್ಠ ಕಲೆ ಹೊಂದಿದ್ದರೂ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ನಮ್ಮ ಭಾಗದ ಕಲಾವಿದರು ಹೃದಯವಂತರು, ಆ ಭಾಗದವರು ಬುದ್ಧಿವಂತರು ಎಂದರು. ಸರ್ಕಾರಿ ಸೌಲಭ್ಯಕ್ಕೆ ಬೇಕಾಗುವ ದಾಖಲಾತಿಗಳು ನಮ್ಮ ಭಾಗದ ಕಲಾವಿದರು ಸಂಗ್ರಹಿಸುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಗುರುಬಸಯ್ಯ ಗದ್ದುಗೆ, ಲೋಕೋತ್ಸವ ಪ್ರಶಸ್ತಿ ಪುರಸ್ಕøತ ಶರಣಪ್ಪ ಮಡ್ನಾಳ, ನೀಲಪ್ಪ ಚೌದ್ರಿ, ಚಂದ್ರಕಲಾ ಗೂಗಲ್, ನರಸಿಂಗ ವೈದ್ಯ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮಾಂತೇಶ ಗಿಂಡಿ ಉಪಸ್ಥಿತರಿದ್ದರು. ಇದೇ ವೇಳೆ ಪತ್ರಕರ್ತರ ಮಲ್ಲಿಕಾರ್ಜುನ ಮುದ್ನೂರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮೊದಲಿಗೆ ಶ್ರೀದೇವಿ ಸಗರ ಪ್ರಾರ್ಥಿಸಿದರು. ಡಾ.ಧರ್ಮಣ್ಣ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲು ಉಳ್ಳಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button