ಪ್ರಮುಖ ಸುದ್ದಿ
ಭೀಮಾನದಿಯಲ್ಲಿ ಮುಳುಗಿ ಯುವಕ ಸಾವು
ಭೀಮಾನದಿಯಲ್ಲಿ ಮುಳುಗಿ ಯುವಕ ಸಾವು
ಯಾದಗಿರಿ: ಸೋಮವಾರ ಎಲ್ಲೆಡೆ ಹೋಳಿ ಹಬ್ಬವನ್ನು ಯುವ ಸಮೂಹ ಸಂಭ್ರಮದಿಂದ ಆಚರಿಸತಿತ್ತು. ಇತ್ತ ತಾಲೂಕಿನ ಮುದ್ನಾಳ ದೊಡ್ಡ ತಾಂಡದ ಯುವಕರ ಗುಂಪು ಅದರಂತೆ ಹಬ್ಬದ ಆಚರಣೆ ನಂತರ ಸ್ನಾನ ಮಾಡಲೆಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರಕ್ಕೆ ಹತ್ತಿರವಿರುವ ಗುಲಸರಂ ಬ್ರಿಡ್ಜ್ ಕಂ.ಬ್ಯಾರೇಜ್ ಗೆ ತೆರಳಿದ್ದಾರೆ.
ನದಿಯಲ್ಲಿ ಈಜಲು ಯುವಕರ ಗುಂಪು ನೀರಿಗೆ ಇಳಿದಿದ್ದು ಇವರಲ್ಲಿ ಟೋಪು ಶಂಕರ್ ಪವಾರ್ (22) ಎನ್ನುವ ಮುದ್ನಾಳ ದೊಡ್ಡ ತಾಂಡದ ಯುವಕ ಈಜು ಬಾರದ ಪರಿಣಾಮ ಮುಳುಗಿದ್ದಾನೆ.
ಆತನನ್ನು ಗಮನಿಸಿದ ಸ್ನೇಹಿತರು ನೀರಿನಿಂದ ಹೊರ ತೆರಲು ಪ್ರಯತ್ನಿಸಿದ್ದು ಸಾಧ್ಯವಾಗಿಲ್ಲ. ಪರಿಣಾಮ ಪವಾರ್ ಸಾವನ್ನಪ್ಪಿದ ದುರ್ಘಟನೆ ಜರುಗಿದೆ.
ವಿಷಯ ತಿಳಿದು ವಡಗೇರಾ ತಹಸಿಲ್ದಾರ್ ಸುರೇಶ ಅಂಕಲಗಿ,ಪಿಎಸ್ಐ ಸಿದ್ದರಾಯ ಬಳ್ಳೂರಗಿ ಘಟನಾ ಸ್ಥಳಕ್ಕೆ ಆಗಮಿಸಿ ಮೀನುಗಾರರ ಸಹಕಾರದಿಂದ ಶವ ಪತ್ತೆ ಮಾಡಿ ಹೊರತೆಗೆದಿದ್ದಾರೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.