ಎಮ್ಮೆ ಬರ್ತ್ ಡೇಃ ಮಾಲೀಕನ ವಿರುದ್ಧ ಪ್ರಕರಣ ದಾಖಲು ಯಾಕೆ ಗೊತ್ತಾ.?
ಎಮ್ಮೆ ಜನ್ಮ ದಿನಾಚರಣೆಃ ಆಚರಿಸಿದವನ ವಿರುದ್ಧ ಪ್ರಕರಣ ದಾಖಲು ಯಾಕೆ ಗೊತ್ತಾ.?
ವಿವಿ ಡೆಸ್ಕ್ಃ ಮಹಾರಾಷ್ಟ್ರದ ಥಾಣೆಯಲ್ಲಿ ಎಮ್ಮೆ ಸಾಕಿದ ಮಾಲೀಕ ಅದರ ಮೇಲಿನ ಪ್ರೀತಿಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದ. ಸಾಕಷ್ಟು ಜನರನ್ನು ಸಂಭ್ರಮಾಚರಣೆ ಕರೆದಿದ್ದ ಎನ್ನಲಾಗಿದೆ.
ಖುಷಿಯಿಂದಲೇ ಸಾಕು ಪ್ರಾಣಿ ಎಮ್ಮೆ ಮೇಲೆ ಅವನಿಗಿದ್ದ ಪ್ರೀತಿ ಕಂಡು ಎಲ್ಲರೂ ಖುಷಿ ವ್ಯಕ್ತಪಡಿಸಿದ್ದರು.
ಆದರೆ ಪೊಲೀಸರ ಎಮ್ಮೆ ಹುಟ್ಟು ಹಬ್ನ ಆಚರಣೆ ಮಾಡಿದ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಅಚ್ಚರಿ ಎನಿಸಬಹುದು ಅಲ್ಲವೆ.?
ಎಮ್ಮೆ ಹುಟ್ಟು ಹಬ್ಬ ಸಂಭ್ರಮದಲ್ಲಿ ಆತ ಯಾವುದೇ ಲಾಕ್ ಡೌನ್ ನಿಯಮಗಳನ್ನು ಅನುಸರಿಸದಿರುವದು ಕಂಡು ಬಂದ ಹಿನ್ನೆಲೆ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಎಮ್ಮೆ ಹುಟ್ಟು ಹಬ್ಬಕ್ಕೆ ಆಗಮಿಸಿದ ಜನರು ಯಾವುದೇ ಮಾಸ್ಕ್ ಧರಿಸಿರುವದಿಲ್ಲ. ಸ್ಯಾನಿಟೈಸರ್ ಬಳಕೆ ಇಲ್ಲ ಅಂತರವಂತು ಇಲ್ಲವೇ ಇಲ್ಲ ಜನರು ಗುಂಪು ಗುಂಪಾಗಿ ಸೇರಿದ್ದರಿಂದ ಮಾಲೀಕ ಕೊರೊನಾ ನಿಯಮ ಮೀರಿದ್ದು ಎಮ್ಮೆ ಮಾಲೀಕನ ಮೇಲೆ ದೂರು ದಾಝಲಾಗಿದೆ. ಆದರೆ ಪುಣ್ಯಕ್ಕೆ ಆತನನ್ನು ಬಂಧಿಸಿರುವದಿಲ್ಲ ಎಂದು ಮೂಲಗಳು ತಿಳಿಸಿವೆ.