ಪ್ರಮುಖ ಸುದ್ದಿ

ಗೂಂಡಾಗಿರಿ, ಮತಾಂಧರನ್ನು ಎದುರಿಸುವ ಶಕ್ತಿ ಹಿಂದೂಗಳಿಗಿದೆ – ಈಶ್ವರಪ್ಪ

ಡಿಕೆಶಿ, ಸಿದ್ರಾಮಯ್ಯಗೆ ಕಲ್ಲು ತೋರಾಟ ಮಾಡುವದು ತಪ್ಪು ಎಂದೇಳುವ ಧೈರ್ಯವಿಲ್ಲ - ಈಶ್ವರಪ್ಪ

ಪ್ರಚೋದನೆ ನೀಡಿದ ಮೌಲ್ವಿ ಬಂಧಿಸಿ – ಈಶ್ವರಪ್ಪ ಆಗ್ರಹ

ಗೂಂಡಾಗಿರಿ, ಮತಾಂಧರನ್ನು ಎದುರಿಸುವ ಶಕ್ತಿ ಹಿಂದೂಗಳಿಗಿದೆ – ಈಶ್ವರಪ್ಪ

ಶಿವಮೊಗ್ಗಃ ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ನೀಡಿರುವ ಗಲಭೆ ಕೋರರನ್ನು ಮತ್ತು ಮತಾಂಧರನ್ನು ಎದುರಿಸುವ ಶಕ್ತಿ ಹಿಂದೂಗಳಿಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಘಟನೆ, ರಾಮನವಮಿ, ಹನುಮ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ‌ ಮಾಡೋದು ಇವೆಲ್ಲ ಪೂರ್ವ ನಿಯೋಜಿತ ಗಲಭೆಗಳಾಗಿವೆ ಈ ಕುರಿತು ಕೇಂದ್ರ, ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ, ದೇಶದ ಸಾಮರಸ್ಯ ಹಾಳುಗೆಡವಲು ಪ್ರಚೋದನೆ ನೀಡುವ ಮೌಲ್ವಿಗಳು ಎಲ್ಲಿಂದ ಬಂದವರು, ಅವರ ಪೂರ್ವಪರ ಮಾಹಿತಿ ಕಲೆ ಹಾಕಬೇಕು. ಅವರು ಬಾಂಗ್ಲಾ ದಿಂದ ಬಂದವರಾ.? ಅಥವಾ ರೋಹ್ಯಾಂಗ್ಯ ಮುಸ್ಲಿಂರಾ.? ಈ ಕುರಿತು ಪತ್ತೆ ಮಾಡಬೇಕಿದೆ. ರಾಜ್ಯದಲ್ಲಿ ಎಷ್ಟು ಮೌಲ್ವಿಗಳಿದ್ದಾರೆ ಅವರ ಮಾಹಿತಿ ಕಲೆ ಹಾಕಬೇಕು. ಮತ್ತು ಹುಬ್ಬಳ್ಳಿ ಗಲಭೆಗೆ ಕಾರಣನಾದ‌ ಮೌಲ್ವಿ ಓಡಿ ಹೋಗಿದ್ದು, ಆ ಹೇಡಿಯನ್ನು ಬಂಧಿಸಬೇಕೆಂದು ಮನವಿ ಮಾಡಿದರು.

ಸಿದ್ರಾಮಯ್ಯ, ಡಿಕೆಶಿಗೆ ಧೈರ್ಯವಿಲ್ಲ – ಈಶ್ವರಪ್ಪ ಆಕ್ರೋಶ

ಹುಬ್ನಳ್ಳಿ ಘಟನೆ ಕುರಿತು ಮತಾಂಧರು ನಡೆಸಿದ ಕಲ್ಲು ತೂರಾಟ,‌ ಪೊಲೀಸರ ಮೇಲೆ ನಡೆಸಿದ ಹಲ್ಲೆ ಕುರಿತು ವಿಡಿಯೋ ಸಾಕ್ಷಿಧಾರಗಳು ನೋಡಿಯು ಅದು ತಪ್ಪು ಎಂದು ಹೇಳುವ ಧೈರ್ಯ ಸಿದ್ರಾಮಯ್ಯ, ಡಿಕೆಶಿಗೆ ಇಲ್ಲವೆಂದು ಮಾಜಿ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾದರೆ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವದು,‌ ಮೆಚ್ಚಿಸುವ ಕೆಲಸವಾಗಿ ಬಿಟ್ಟಿದೆ. ತಪ್ಪು ದಾರಿ ಹೊಡಿದವರನ್ನು ತಡೆಯುವ ಕೆಲಸ ಮಾಡಲಿ. ಅದನ್ನು ಖಂಡಿಸುವ ಕೆಲಸ ಆ ನಾಯಕರು ಮಾಡಲಿ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button