ಬಸವಭಕ್ತಿ

ಬಸವ ಎಂಬುದೇ ಬದಲಾವಣೆಗೆ ಮುನ್ನುಡಿ-ಡಾ.ಶಾಂತವೀರ ಸುಂಕದ

ಬಸವಣ್ಣನವರೊಬ್ಬ ಧೀರ ಪುರುಷ-ಡಾ.ಸುಂಕದ

 

ಯಾದಗಿರಿ, ಶಹಾಪುರ: ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಸಾಮಾಜಿಕ ಧಾರ್ಮಿಕ ಅಂತರಂಗದ ಅನಿಷ್ಟ ಪದ್ಧತಿಯನ್ನು ಅಮೂಲಾಗ್ರವಾಗಿ ಬದಲಿಸಿದ ಒಬ್ಬ ಧೀರ ಪುರುಷನಾಗಿದ್ದ ಎಂದು ಸೇಡಂನ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಶಾಂತವೀರ ಸುಂಕದ ಅವರು ಅಭಿಪ್ರಾಯಪಟ್ಟರು.

ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ತಿಂಗಳ ಬಸವ ಬೆಳಕು- 79 ರ ಸಭೆಯ ಅನುಭಾವಿಗಳಾಗಿ ಅವರು ಬಸವನ ಬೆಳಕು ಎಲ್ಲಾಡಿಬಂದೆ ಎಂಬ ವಿಷಯದ ಕುರಿತು ಮಾತನಾಡಿದರು. ಬಸವ ಎಂಬುದು ಕೇವಲ ಮೂರಕ್ಷರವಲ್ಲ. ಅಸಾಧ್ಯವನ್ನು ಸಾಧ್ಯವಾಗಿಸುವ ಶಕ್ತಿ ಆ ಅದಕ್ಕಿದೆ.

ಬಸವ ನಮ್ಮೊಳಗೆ ಪ್ರವೇಶ ಪಡೆದರೆ ಸಾಕು, ನಮಗೆ ಅರಿಯದೆ ನಾವು ಬದಲಾವಣೆಯ ಚಮತ್ಕಾರಕ್ಕೆ ಒಳಪಡುತ್ತೇವೆ. ಸದುವಿನಯವೇ ಸದಾ ಶಿವನ ಒಲುಮೆ ಎಂಬುದನ್ನು ಕಲಿಸಿದವರು ಬಸವಣ್ಣನವರು.

ಮನುಷ್ಯರನ್ನು ಮನುಷ್ಯರಂತೆ ಕಾಣದೆ ವರ್ಗ, ವರ್ಣ, ಜಾತಿ ಬೇಧಗಳನ್ನು ಮಾಡುತ್ತ ಸಮಾಜವನ್ನು ಬಗ್ಗಡಗೊಳಿಸಿದ್ದ ಪುರೋಹಿತರ ವಿರುದ್ಧ ಬಸವಣ್ಣ ಬಹುದೊಡ್ಡ ಆಂದೋಲನ ನಡೆಸಿದರು. ಈ ಚಳುವಳಿಯಲ್ಲಿ ಜನ ಸಾಮಾನ್ಯರೆಲ್ಲರೂ ಸೇರಿಕೊಂಡರು. ಸಾಮೂಹಿಕ ಶರಣ ಸಮೂಹ ಅಂದಿನ ರಾಜಶಾಹಿ ಹಾಗೂ ಪುರೋಹಿತಶಾಹಿಗಳ ಬುಡಕ್ಕೆ ತಣ್ಣಗೆ ಕೊಡಲಿಪೆಟ್ಟು ಕೊಟ್ಟಿತು ಎಂದು ವಿವರಿಸಿದರು.

ದೇವರು ಧರ್ಮ ಎಂಬುದು ಕೇವಲ ಕೆಲವರ ಗುತ್ತಿಗೆಯಾಗಿದ್ದ ಸಂದರ್ಭದಲ್ಲಿ ಅದನ್ನು ಸಾರ್ವತ್ರಿಕಗೊಳಿಸಿ ದೇವರನ್ನೇ ಬಂಧಮುಕ್ತ ಮಾಡಿದವರು ಬಸವಣ್ಣನವರು. ಬಸವ ವಿಚಾರಧಾರೆಗೆ ಇಂದಿನ ಜಗತ್ತು ತೆರೆದ ಕಣ್ಣು ಹಾಗೂ ಹೃದಯದ ಮೂಲಕ ಅದನ್ನು ಸ್ವಾಗತಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ನಿವೃತ್ತ ಪ್ರಾಂಶುಪಾಲ ಬಿ.ಪಿ.ಹೂಗಾರ ಮಾತನಾಡಿ, ಹೂಗಾರ ಮಾದಯ್ಯನ ಕುರಿತು ಯಾವ ಚಾರಿತ್ರಿಕ ದಾಖಲೆಗಳು ಲಭ್ಯವಿಲ್ಲ. ಆದರೆ ಅವರ ಕುರಿತು ಜನಪದರು ಬರೆದಿರುವ ಹಾಡುಗಳಿವೆ. ಇವುಗಳ ಮೂಲಕ ಶರಣ ಮಾದಯ್ಯನವರ ಚರಿತ್ರೆ ಕಟ್ಟಿಕೊಳ್ಳಬೇಕಾದ ದುರಂತ ಇಂದು ಒದಗಿದೆ.

ನಾಡಿನಲ್ಲಿ ಹೂಗಾರ ಸಮುದಾಯ ಎಲ್ಲರೊಂದಿಗೆ ಬೇಕು ಬೆಲ್ಲವಾಗಿ ಇದೆ. ಯಾರೊಂದಿಗೂ ಹಗೆತನ ಕಟ್ಟಿಕೊಂಡಿಲ್ಲ. ಬಿರುನುಡಿಗಳನ್ನು ಆಡಿಲ್ಲ. ಇದಕ್ಕೆ ಕಾರಣ ಶರಣ ಪರಂಪರೆಯೆ ಕಾರಣವಾಗಿದೆ. ಹೂಗಾರ ಮಾದಯ್ಯನ ಬಗೆಗೆ ಹೆಚ್ಚಿನ ರೀತಿಯ ಸಂಶೋಧನೆಗಳು ನಡೆಯಬೇಕಿದೆ ಎಂದರು.
ಪ್ರತಿಷ್ಠಾನದ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಗಜಾನನ ಹೆಸರಿನ ಮೇಲೆ ನಡೆದಿರುವ ಶೋಷಣೆ, ಅಜ್ಞಾನಕ್ಕೆ ನಾವು ಕಡಿವಾಣ ಹಾಕಿಕೊಳ್ಳೋಣ. ಗಣೇಶ ಉತ್ಸವದ ಹೆಸರಿನ ಮೇಲೆ ಯುವಕರು ಅಶ್ಲೀಲ ಹಾಡು ಕುಣಿತಗಳ ಮೂಲಕ ಅವಮಾನಿಸುತ್ತಿದ್ದಾರೆ. ಗಣಪತಿಯ ಹುಟ್ಟಿನ ಕತೆ ಅದೊಂದು ಕಪೋಲ ಕಲ್ಪಿತ ಸುಂದರವಾದ ಕತೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಅಧಿಕಾರಿ ಥಾಮಸ್ಸ್ ದೊಡ್ಮನಿ ವಹಿಸಿದ್ದರು. ವೇದಿಕೆಯ ಮೇಲೆ ಸಂಗಮ್ಮ ಮಾನಪ್ಪ ಹೂಗಾರ ಉಪಸ್ಥಿತರಿದ್ದರು. ಬನಶಂಕರ ಹೊನ್ನಪ್ಪ ಬಾನ್ಹಾಳ ಹಾಗೂ ಅರ್ಚನ ಅವರನ್ನು ಸತ್ಕರಿಸಲಾಯಿತು.

ರಾಜು ಕುಂಬಾರ ಸ್ವಾಗತಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ಪ್ರಾರ್ಥನಾ ಗೀತೆ ಹಾಡಿದರು. ಅಲ್ಲಮಪ್ರಭು ಸತ್ಯಂಪೇಟೆ ವಚನ ಗಾಯನ ಮಾಡಿದರು. ಕೊನೆಯಲ್ಲಿ ಶರಾವತಿ ಸತ್ಯಂಪೇಟೆ ವಂದನಾರ್ಪಣೆ ಮಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ £ರೂಪಿಸಿದರು.
ಸಭೆಯಲ್ಲಿ ಅವiರಪ್ಪ ಗುಡಗುಂಟಿ,ಖಾಲೀದ, ಹಣಮಂತ ಕೊಂಗಂಡಿ, ಚಂದ್ರಕಾಂತಕರದಳ್ಳಿ, ಹುಂಡೇಕಾರ, ಸೂರ್ಯಕಾಂತ ಸಜ್ಜನ, ಮಲ್ಲಣ್ಣ ಗುಳಗಿ, ಗುರಣ್ಣ ಮದರಿ, ಸಿದ್ಧಲಿಂಗಪ್ಪ ಆನೇಗುಂದಿ, ಚಂದ್ರು, ರಮೇಶ ವಜ್ಜಲ, ಪ್ರಭು ರಾಚರೆಡ್ಡಿ, ಸಾಯಿ ಕುಮಾರ ಇಜೇರಿ, ಷಣ್ಮುಖ ಅಣಬಿ, ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button