ರೈತರಿಗೆ ಭರ್ಜರಿ ಗುಡ್ ನ್ಯೂಸ್:10HP ವರೆಗೆ ಉಚಿತ ವಿದ್ಯುತ್ ಪೂರೈಕೆ- ಇಂಧನ ಸಚಿವ
(Free power supply) ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ.
ಹೌದು, ಈ ಕುರಿತು ಇಂಧನ ಸಚಿವ ಕೆ. ಜೆ ಜಾರ್ಚ್ ಮಾಹಿತಿ ನೀಡಿದ್ದು, ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ. ಕೃಷಿ ಬೆಳೆಗಳಿಗೆ ಅಗತ್ಯತೆ ಪ್ರದೇಶವಾರು ಅನುಗುಣವಾಗಿ ವಿದ್ಯುತ್ ಪೂರೈಕೆ ನಿರ್ವಹಣೆಗೆ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಬಳಸಲು ಹಿಂದಿನ ಇಲಾಖೆ ಮುಂದಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಉಪಗ್ರಹ ಚಿತ್ರ ಬಳಕೆ ಮಾಡಿಕೊಂಡು ಪ್ರದೇಶವಾರು ಬೆಳೆ, ವಿದ್ಯುತ್ ಬೇಡಿಕೆ ಅಂದಾಜಿಸಿ ಆಯಾ ವಿದ್ಯುತ್ ಉಪ ಕೇಂದ್ರಕ್ಕೆ ಒದಗಿಸುವುದು ಎಐ ತಂತ್ರಜ್ಞಾನ ಬಳಕೆಯ ಉದ್ದೇಶವಾಗಿದೆ. ಇದರಿಂದಾಗಿ ಬೆಳೆಗಳಿಗೆ ಅಗತ್ಯವಿರುವ ಕಾಲದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ, ವಿದ್ಯುತ್ ಉಪ ಕೇಂದ್ರ ಮತ್ತು ಟಿಸಿಗಳ ಕಾರ್ಯಕ್ಷಮತೆ, ವಿದ್ಯುತ್ ಲಭ್ಯತೆ ದಕ್ಷತೆ ಹೀಗೆ ಅನೇಕ ಉಪಯೋಗವಾಗುತ್ತದೆ.
ರೈತರ ಹಿತ ರಕ್ಷಣೆಗಾಗಿ ನೀರಾವರಿ ಪಂಪೈಟ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಪೂರೈಕೆ ಮುಂದುವರೆಯಲಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ರೈತರ ಸಹಕಾರದಿಂದ ಇದುವರೆಗೆ 32 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದು, ಇನ್ನೂ ಎರಡು ಲಕ್ಷ ಪಂಪೈಟ್ ಗಳು ಬಾಕಿ ಉಳಿದಿವೆ ಎಂದರು.