ಪ್ರಮುಖ ಸುದ್ದಿ
ನಾನು ಒಬ್ಬ ಹಿಂದೂ, ನನಗೂ ಅಭಿಮಾನವಿದೆಃ ಆರ್.ವಿ.ದೇಶಪಾಂಡೆ
ಗಲಭೆ ಸೃಷ್ಟಿಸಲು ಯತ್ನಃ ಆರ್.ವಿ.ದೇಶಪಾಂಡೆ ಹೇಳಿಕೆ
ಕಾರವಾರಃ ಬಿಜೆಪಿಯವರು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಇದು ಸಾಧ್ಯವಿಲ್ಲ.
ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಾಗುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೇಳಿಕೆ ನೀಡಿದ ಅವರು, ಸಂಸದ ಪ್ರತಾಪ ಸಿಂಹ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯ್ದ ಅವರು,
ಸಿಕ್ಕ ಅವಕಾಶವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು.
ಅದು ಗಲಭೆ ಸೃಷ್ಟಿಸುವುದು ಸರಿಯಲ್ಲ.
ನಾನು ಒಬ್ಬ ಹಿಂದೂ ನನಗೂ ಹಿಂದೂ ಎಂಬ ಗೌರವವಿದೆ. ಆದರೆ ಎಲ್ಲಾ ಸಮುದಾಯದವರನ್ನು ಒಂದೇ ತರಹ ಕಾಣುತ್ತೇನೆ. ಸಮನಾಗಿ ನೋಡುತ್ತೇವೆ.
ಸಾಕಷ್ಟು ದೇವಾಲಯ ನಿರ್ಮಾಣಕ್ಕೆ ನಾನು ಸಹಾಯ ಮಾಡಿದ್ದೇನೆ. ಹಾಗೇ ದೇವಾಲಯಗಳಿಗೂ ಭೇಟಿ ನೀಡುತ್ತೇನೆ. ನನ್ನಷ್ಟು ಸಹಾಯ ಇವರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ದೇಗುಲ ನಿರ್ಮಾಣಕ್ಕೆ ದೇಣಿಗೆ ಕೋರಿ ಸಾಕಷ್ಟು ಜನರು ಬರುತ್ತಾರೆ. ನಾನು ಕೈಲಾದ ಸಹಾಯ ಮಾಡಿದ್ದೇನೆ. ನನಗೂ ಹಿಂದೂ ಎಂಬ ಅಭಿಮಾನವಿದೆ ಎಂದಿದ್ದಾರೆ.