ಪ್ರಮುಖ ಸುದ್ದಿ

ಆಕಸ್ಮಿಕ ಬೆಂಕಿ : ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ!

ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಮಾರ್ಬಲ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ರಾಜಸ್ಥಾನ ಮೂಲದ ಪುರುಷೋತ್ತಮ ಎಂಬುವರಿಗೆ ಸೇರಿದ ಕಾವೇರಿ ಮಾರ್ಬಲ್ ಅಂಗಡಿಗೆ ಬೆಂಕಿ ಬಿದ್ದಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿವೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ 3 ವಾಹನಗಳಿಂದ ಅಗ್ನಿ ನಂದಿಸುವ ಕಾರ್ಯ ನಡೆದಿದೆ.

ಮಾರ್ಬಲ್ ಅಂಗಡಿಯಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಕುಶಾಲನಗರದ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಾಗಿ ಮಾರ್ಬಲ್ ಅಂಗಡಿಯ ಬೆಂಕಿ ರಹಸ್ಯ ಬಯಲಾಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button