22 ನೇ ವಯಸ್ಸಿನಲ್ಲೆ 42.5 ಲಕ್ಷ ಸಂಭಾವನೆ ಪಡೆದ ವಿದ್ಯಾರ್ಥಿನಿ ಸನ್ಯಾ.!
ಶಿಮ್ಲಾಃ ತನ್ನ 22 ನೇ ವಯಸ್ಸಿನಲ್ಲಿಯೇ ಅಗಾಧ ಸಾಧನೆ ಸಾಧಿಸಿದ ಯುವತಿಯೊಬ್ಬಳು, ಕುಟುಂಬಸ್ಥರಲ್ಲದೆ ದೇಶದ ಜನರ ಕಣ್ಣನ್ನೆ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಹೌದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸನ್ಯಾ ಧಿಂಗರ್ ಎಂಬ ಯುವತಿ ಅಮೇರಿಕನ್ ಕಂಪನಿ ಅಡೋಬ್ ನಲ್ಲಿ ಕೆಲಸ ಪಡೆದುಕೊಂಡ ಆಕೆಗೆ ವಾರ್ಷಿಕ ಬರೋಬ್ಬರಿ 42.5 ಲಕ್ಷ ರೂಪಾಯಿ ವೇತನ ನೀಡಲಿದೆ.
ಕೊರೊನಾ ವೈರಸ್ ಎಲ್ಲಡೆ ಹರಡಿರುವ ಕಾರಣ, ಸನ್ಯಾ ಆ.17 ರಿಂದ ಆನ್ಲೈನ್ ನಲ್ಲಿ ಕಂಪನಿ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಹಾವಳಿ ಕಡಿಮೆ ಆದ ಮೇಲೆ ಸನ್ಯಾ ನೋಯ್ಡಾದ ಕಚೇರಿಯೊಂದರಲ್ಲಿ ಕಾರ್ಯ ನಿರ್ವಹಿಸಲಿದ್ದಾರಂತೆ.
ಕುಲ್ಲು ಜಿಲ್ಲೆಯ ಸ್ಥಳೀಯ ಸುಂದರ ನಗರದ ಮಹಾವೀರ್ ಶಾಲೆಯಲ್ಲಿ 10 ಮತ್ತು 12 ನೇ ತರಗತಿಯಲ್ಲಿ ಅಭ್ಯಾಸ ಮಾಡಿರುವ ಸನ್ಯಾ ಅವರನ್ನು 2016 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಹಮೀರ್ ಪುರಕ್ಕೆ ಸೇರಿಸಲಾಗಿತ್ತು.
ಅಲ್ಲದೆ ಈ ವರ್ಷದ ಜುಲೈನಲ್ಲಿ ಕಂಪ್ಯೂಟರ್ ವಿಜ್ಞಾನ ದಲ್ಲಿ ಬಿಟೆಕ್ ಕೋರ್ಸ್ ಪೂರ್ಣಗೊಳಿಸಿದರು. ಮಗಳು ಅಮೇರಿಕಾದ ನೋಯ್ಡಾ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಾಳೆ. ಅವಳ ಸಾಧನೆಗೆ ಖುಷಿ ವ್ಯಕ್ತಿಪಡಿಸಿದ ತಂದೆ ಸತೀಶ ಧಿಂಗರ್ ಕುಟಂಬಸ್ಥರು ಸಂತಸದಲ್ಲಿ ಮುಳುಗಿದ್ದಾರೆ.