“ಗೆಳೆಯನಿಗೆ ಪತ್ರ” ಬೆಂಗಳೂರಿನ ಕವಿತ್ರಿ ಸುರಭಿ ಲತಾ ಬರೆದ ಕವಿತೆ
ಗೆಳೆಯನಿಗೆ ಪತ್ರ
****************
ಹುಚ್ಚು ಪ್ರೀತಿ ಕಣೋ ‘ ಕಿರಣ ‘ ನಿಂದು ಒಂದೊಂದು ಸಾರಿ ನಿನ್ನ ಪ್ರೀತಿ ನುಂಗಲಾರದ ತುತ್ತಾಗಿ ಕಾಡಿಸುತ್ತೆ .ಏನೇ ಪ್ರೀತಿ,ಅಭಿಮಾನ,ಒಲವು,ಗೆಳೆತನ ಇದ್ದರೂ ಅದನ್ನು ಎಲ್ಲರೆದುರು ತೋರಿಸಿಕೊಳ್ಳುವ ಚಟಯಾಕೋ ನಿನಗೆ.
ಈ ಪ್ರಪಂಚ ವಿಚಿತ್ರ ಕಣೋ ಹುಡುಗ ಕೆಳಗೆ ಬಿದ್ದವರನ್ನು ಆಡಿಕೊಳ್ಳುತ್ತದೆ, ಮೇಲೆ ಏರಿದವರನ್ನು ಸಹಿಸಿಕೊಳ್ಳದೇ ಹೋಗುತ್ತದೆ.
ಹೆದರಿಕೆ ಅಲ್ಲದಿದ್ದರೂ ಅಂಥಹವರ ಮಧ್ಯೆಯೇ ಬದುಕಬೇಕು,ಹಾಗಾಗಿ ಕೆಲವು ಕಟ್ಟುಪಾಡುಗಳನ್ನು ನಾವು ಪಾಲಿಸಲೇಬೇಕು, ನಿನಗೇಕೋ ಇದು ಅರ್ಥವಾಗೊಲ್ಲ
ಗುರಿಸಾದಿಸಬೇಕು ಅಂದರೆ ಹಲವಾರು ಅಡೆತಡೆಗಳು,ಕಲ್ಲು ಮುಳ್ಳಿನ ದಾರಿ
ಎಲ್ಲವೂ ಸಹಿಸಿಕೊಂಡು ಹೋದರೆ ಮತ್ತೊಂದು ಸಮಸ್ಯೆ
ಗೆಳೆತನವಿರಬೇಕು ಕಲ್ಲು ಎಸೆಯುವವರ ಮುಂದೆ ಕಲ್ಪರುಕ್ಷದ ಹಾಗೆ ಈ ಮಾತು ನಾನೇ ಹೇಳುತ್ತಿರೋದು;
ನಮ್ಮಿಬ್ಬರ ಕಪಟವಿಲ್ಲದ ಸ್ನೇಹಕೆ ಯಾರ ಸಾಕ್ಷಿಯೂ ಬೇಕಿಲ್ಲ
ಆಡುವ ,ಕೇಳುವ ಮಾತಿಗೆ ತಪ್ಪು ಹುಡುಕುವುದ ಬಿಟ್ಟು ನಗುತ್ತಾ ಮುಂದೆ ಸಾಗಬೇಕು ಗೆಳೆತನ ಮಾಡುವುದು ಹೆಚ್ಚಲ್ಲ ಅದನ್ನು ಕೊನೆಯವರೆಗೂ ನಂಬಿಕೆ ಎಂಬ ನೀರು ಸುರಿದು ಆತ್ಮ ವಿಶ್ವಾಸ ಹೆಚ್ಚಿಸುವ ಗೊಬ್ಬರ ಹಾಕಿ ಸಲಹಬೇಕು.
ರವಿಯ ಕಿರಣಗಳಲ್ಲಿ ಯಾರೂ ಕಲ್ಮಶ ಹುಡುಕಲಾರರು, ನಮ್ಮ ಸ್ನೇಹದಲ್ಲಿ ಎಂದೂ ಬಿರುಕು ಬರಬಾರದು ಇದು ನನ್ನ ಆಸೆ ,
–ಕವಿತ್ರಿ ಸುರಭಿ ಲತಾ ಬೆಂಗಳೂರ.
Nice……sneha ke yara bahyanu erodila