ಪ್ರಮುಖ ಸುದ್ದಿ
ಭಾವೈಕ್ಯತೆಗಾಗಿ ಬಹಮನಿ ಉತ್ಸವ – ಸಚಿವ ಡಾ.ಶರಣಪ್ರಕಾಶ ಪಾಟೀಲ್
ಕಲಬುರಗಿ : ರಾಷ್ಟ್ರಕೂಟರು ಹಾಗೂ ಬಹಮನಿ ಉತ್ಸವ ಆಚರಣೆ ಮೂಲಕ ಈ ಭಾಗದ ಇತಿಹಾಸ ಸಾರುವುದು. ರಾಷ್ಟ್ರಕೂಟರು ಹಾಗೂ ಬಹಮನಿ ಸುಲ್ತಾನರ ಆಡಳಿತ, ಕಲೆ , ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುವುದು. ಆ ಮೂಲಕ ಭಾವೈಕ್ಯತೆಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ, ಎಲ್ಲರ ಜೊತೆಗೆ ಚರ್ಚಿಸಿ ರಾಷ್ಟ್ರಕೂಟರು ಮತ್ತು ಬಹಮನಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಭಾವೈಕ್ಯತೆಯ ಉತ್ಸವಗಳಿಗೆ ಎಲ್ಲರೂ ಬೆಂಬಲಿಸಬೇಕು. ಆದರೆ, ಬಿಜೆಪಿ ನಾಯಕರು ಬಹಮನಿ ಉತ್ಸವಕ್ಕೆ ರಾಜಕೀಯ ಬಣ್ಣದ ಲೇಪನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಾಯಕರ ಮಾತುಗಳಿಗೆ ಬಾಗುವುದಿಲ್ಲ. ಸಾಮಾಜಿಕ ಸಾಮರಸ್ಯದ ಉತ್ಸವವನ್ನು ಆಚರಿಸುತ್ತೇವೆ ಎಂದು ತಿಳಿಸಿದರು.