ಪ್ರಮುಖ ಸುದ್ದಿ
ಗಾಂಜಾ ಮಾರಾಟ ಮೂವರು ಆರೋಪಿಗಳ ಬಂಧನ

ಗಾಂಜಾ ಮಾರಾಟ ಮೂವರು ಆರೋಪಿಗಳ ಬಂಧನ
ಶಿವಮೊಗ್ಗಃ ಗಾಂಜಾ (ಮಾದಕ ಪದಾರ್ಥ) ಮಾರಾಟಕ್ಕಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದ ಬಸ್ ತಂಗುದಾಣ ಬಳಿ ನಡೆದಿದೆ.
ಶಿಗ್ಗಾ ಗ್ರಾಮದ ಶರತ್, ಜಡೆ ಗ್ರಾಮದ ಸಚಿನ್, ಜಡೆಕಾಲ್ಗೇರಿ ಗ್ರಾಮದ ದರ್ಶನ್ ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಟಿ.ಬಿ.ಪ್ರಶಾಂತಕುಮಾರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದು, ಅಲ್ಲದೆ ಆರೋಪಿತರು ಸಂಗ್ರಹಿಸಿದ್ದ 320 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದಿದ್ದು, ಮತ್ತು ಒಂದು ಬೈಕ್ 1500 ರೂ.ಹಣ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿತರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಕಾನ್ಸಟೇಬಲ್ ಗಳಾದ ಪರಮೇಶ್ವರ ನಾಯಕ, ಎಂ.ಕೆ.ನಾಗರಾಜ, ಸಲ್ಮಾನ್ ಖಾನ್, ಹಾಜಿ ಸುಧಾಕರ ಇತರರಿದ್ದರು.