ಪ್ರಮುಖ ಸುದ್ದಿ
ಶಹಾಪುರಃ ನಾಳೆ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಗೊತ್ತಾ.?
ಶಹಾಪುರಃ ನಗರ ಸೇರಿ ಹಲವಡೆ ವಿದ್ಯುತ್ ವ್ಯತ್ಯಯ
ಶಹಾಪುರಃ ನಗರ ಸೇರಿ ಹಲವಡೆ ವಿದ್ಯುತ್ ವ್ಯತ್ಯಯ
yadgiri, ಶಹಾಪುರಃ ತಾಲೂಕಿನ ಶಹಾಪುರ ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಿಗೆ ಬುಧವಾರ ಸೆ.21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಸಹಕರಿಸಬೇಕೆಂದು ಜೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭೀಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಹಾಪುರ ಉಪ ವಿಭಾಗದ 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಬುಧವಾರ ಭೀಮರಾಯನ ಗುಡಿ, ರಾಕಂಗೇರಾ, ಶಹಾಪುರ, ಹಳಿಸಗರ, ಶಿರವಾಳ, ಮುಡಬೂಳ, ಮದ್ರಿಕಿ, ದೋರನಹಳ್ಳಿ ಸೇರಿದಂತೆ ಈ ಮಾರ್ಗದಲ್ಲಿ ಬರತಕ್ಕಂತ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇರುವದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.
—————