ಶಹಾಪುರ, ಕೆಂಭಾವಿಃ ಟವರ್ ಲೈನ್ ನಿರ್ಮಾಣ ಕಾಮಗಾರಿ – ವಿದ್ಯುತ್ ವ್ಯತ್ಯಯ
ನಗನೂರಗೆ ಟವರ್ ಲೈನ್ ನಿರ್ಮಾಣ ಕಾಮಗಾರಿ- ವಿದ್ಯುತ್ ವ್ಯತ್ಯಯ
ಶಹಾಪುರ, ಕೆಂಭಾವಿಃ ಟವರ್ ಲೈನ್ ನಿರ್ಮಾಣ ಕಾಮಗಾರಿ – ವಿದ್ಯುತ್ ವ್ಯತ್ಯಯ
ಯಾದಗಿರಿ: ನಿರಂತರ 110ಕೆವಿ ಶಹಾಪೂರ ಕೆಂಭಾವಿ ಲೈನ್‍ಗೆ ಪ್ರಸ್ತಾವಿತ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ನಗನೂರಗೆ ಟವರ್ ಲೈನ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಮಾರ್ಚ್ 29ರ ಮಂಗಳವಾರ ರಂದು ಮಧ್ಯಾಹ್ನ 3 ರಿಂದ ಸಂಜೆ 4.30 ಗಂಟೆಯ ವರೆಗೆ ಈ ಮಾರ್ಗದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
110ಕೆವಿ ವಿದ್ಯುತ್ ವಿತರಣಾ ಕೇಂದ್ರ ಕೆಂಭಾವಿ, 110ಕೆವಿ ಗುತ್ತಿಬಸವಣ್ಣ ಕೆಬಿಜೆಎನ್‍ಎಲ್ ಎಲ್.ಐ.ಎಸ್ ಹಾಗೂ 110ಕೆವಿ ವಿದ್ಯುತ್ ವಿತರಣಾ ಕೇಂದ್ರ ಹುಣಸಗಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳಿಸಲಾಗುತ್ತಿದೆ.
ಸದರಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಿನಲ್ಲಿ ಕೆಬಿಜೆಎನ್‍ಎಲ್. ಐ.ಎಸ್, ಕೆಂಭಾವಿ, ಹುಣಸಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂಗೆ ಸಹಕರಿಸಬೇಕಾಗಿ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.