ನಾಳೆ ಚಾಮನಾಳ ವಿಭಾಗ ವಿದ್ಯುತ್ ವ್ಯತ್ಯಯ
Yadgiri, ಶಹಾಪುರಃ ತಾಲೂಕಿನ ಚಾಮನಾಳ ವಿಭಾಗದಲ್ಲಿ ಬರುವ ಹಲವಾರು ಗ್ರಾಮಗಳಿಗೆ ನಾಳೆ ಸೆ.5 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಅಭಿಯಂತರರು ಯಾದಗಿರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
33 KV ಚಾಮನಾಳ ಹೊರಹೋಗುವ ಎಲ್ಲಾ 11KV ವಿದ್ಯುತ್ ಮಾರ್ಗದಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿರಂತರ ವಿದ್ಯುತ್ ಪೂರೈಸಲು ಹಾಗೂ ಯಾವುದೇ ಅಡೆತಡೆ ಆಗದಂತೆ ತಡೆಯಲು 110 KV ವಿದ್ಯುತ್ ವಿತರಣಾ ಕೇಂದ್ರ ಕೆಂಭಾವಿ ಕಾರ್ಯ ನಿರ್ವಹಿಸುತ್ತಿದ್ದು, ಚಾಮನಾಳ ವಿಭಾಗ ವಿದ್ಯುತ್ ವ್ಯತ್ಯಯ ಆಗಲಿರುವ ಕಾರಣ ನಾಗರಿಕರು ಸಹಕರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.