ಗೋವಾಃ ಶುಕ್ರವಾರ ಸರ್ಕಾರ ರಚನೆಗೆ ಹಕ್ಕು ಮಂಡನೆ – ಫಡ್ನವೀಸ್
ಗೋವಾಃ ಮೂವರು ಪಕ್ಷೇತರ, ಮಹಾರಾಷ್ಟ್ರವಾದಿ ಪಕ್ಷ ಬೆಂಬಲ
ಬಿಜೆಪಿಗೆ ಮೂವರು ಪಕ್ಷೇತರ ಶಾಸಕರು & ಮಹಾರಾಷ್ಟ್ರ ವಾದಿ ಬೆಂಬಲ
ಗೋವಾಃ ಗೋವಾ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಶುಕ್ರವಾರ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನಿರ್ಧರಿಸಲಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಗೋವಾ ಚುನಾವಣೆ ಉಸ್ತುವಾರಿ ದೇವಿಂದ್ರ ಫಡ್ನವೀಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಔಪಚಾರಿಕವಾಗಿ ಮಹಾರಾಷ್ಟ್ರವಾದಿ ಗೋಮಂತಕ ಪಕ್ಷ ಬಿಜೆಪಿಗೆ ಬೆಂಬಲ ನೀಡಿದೆ ಜತೆಗೆ ಮೂವರು ಪಕ್ಷೇತರ ಶಾಸಕರು ಬೆಂಬಲ ನೀಡಲಿದ್ದು, ಶುಕ್ರವಾರ ಬಿಜೆಪಿ ಶಾಸಕಾಂಗ ಸಭೆ ನಡೆಸಲಿದ್ದು, ಕೇಂದ್ರದಿಂದ ನಾಯಕರೊಬ್ಬರು ವೀಕ್ಷಕರಾಗಿ ಆಗಮಿಸಲಿದ್ದಾರೆ.
ಅಂದು ಸಭೆಯಲ್ಲಿ ಒಂದು ದಿನಾಂಕಕ್ಕೆ ತೀರ್ಮಾನ ಮಾಡಿ ರಾಜ್ಯಪಾಲರನ್ನು ಭೇಟಿ ಮಾಟಿ ಅಧಿಕೃತ ಬೆಂಬಲ ಪತ್ರಗಳೊಂದಿಗೆ ಸರ್ಕಾರ ರಚಿಸುವ ಹಕ್ಕು ಮಂಡಿಸುವ ದಿನಾಂಕವನ್ನು ನಿರ್ಧರಿಸಲಾಗುವದು ಎಂದರು.
ಈ ಸಂದರದಭದಲ್ಲಿ ಸಿಎಂ ಪ್ರಮೋದ ಸಾವಂತ್, ಗೋವಾ ಬಿಜೆಪಿ ಪ್ರಭಾರಿ ಸಿ.ಟಿ.ರವಿ. ಬಿಜೆಪಿ ರಾಜ್ಯಧ್ಯಕ್ಷ ಸದಾನಂದ ತಾನಾವಾಡೆ, ಕೇಂದ್ರ ಸಚಿವ ಶ್ರೀಪಾದ ನಾಯಕ ಇತರರಿದ್ದರು.